ವಿಜಯಪುರ: ಕಾಂಗ್ರೆಸ್ ತೊರೆದವರು ಮತ್ತೆ ಪಕ್ಷಕ್ಕೆ ವಾಪಸ್ ಬರುವ ಬಗ್ಗೆ ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು. ಆದರೆ, ಈ ಬಗ್ಗೆ ಅಂತಿಮವಾಗಿ ನಿರ್ಧಾರ ಕೈಗೊಳ್ಳುವುದು ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.
ಕಾಂಗ್ರೆಸ್ ಬಿಟ್ಟವರು ವಾಪಸ್ ಬರುವುದಕ್ಕೆ ರಾಯರೆಡ್ಡಿ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಹಲವರು ಬೇಕು ಬೇಡ ಎನ್ನುವ ಅಭಿಪ್ರಾಯ ಹೇಳಬಹುದು. ವಾಪಸ್ ಬರುವವರು ಪಕ್ಷಕ್ಕೆ ಅನಿವಾರ್ಯವೇ ಎಂಬುವುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ತಿಳಿಸಿದ್ದಾರೆ.
ನಾವು ವೈಯಕ್ತಿಕವಾಗಿ ಬೇಕು, ಬೇಡ ಎಂಬುದನ್ನು ಹೇಳಬಹುದಷ್ಟೆ. ವಲಸೆ ಹೋದವರ ಅವಶ್ಯಕತೆ ಪಕ್ಷಕ್ಕಿದ್ದರೆ ವಾಪಸ್ ತೆಗೆದುಕೊಳ್ಳಲು ಅವಕಾಶವಿದೆ ಎಂದ ಅವರು, ಉಮೇಶ ಕತ್ತಿ ಕುಟುಂಬ ಕಾಂಗ್ರೆಸ್‌ಗೆ ಬರುತ್ತದೆ ಎನ್ನುವ ವದಂತಿ ವಿಚಾರಕ್ಕೆ ಉತ್ತರಿಸಿ, ಆ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಪಕ್ಷದ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ. ಈ ಬಾರಿಯೂ ಯಮಕನಮರಡಿ ಕ್ಷೇತ್ರದಿಂದಲೇ ಸ್ಪರ್ಧಿಸುವೆ ಎಂದು ಹೇಳಿದರು.
ಇದನ್ನೂ ಓದಿ | Lakhan Jarkiholi : ಕರ್ನಾಟಕ ಪ್ರದೇಶ ಸಿಡಿ ಕಮಿಟಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್: ಲಖನ್ ಜಾರಕಿಹೊಳಿ
ಕಾಂಗ್ರೆಸ್‌ನಲ್ಲಿ ಡಿಕೆಶಿ-ಸಿದ್ದರಾಮಯ್ಯ ಕಿತ್ತಾಟದ ಬಗ್ಗೆ ವಿಜಯೇಂದ್ರ ಪ್ರಸ್ತಾಪದ ವಿಚಾರಕ್ಕೆ ಉತ್ತರಿಸಿ, ಬಿಜೆಪಿಯಲ್ಲೂ ಕಿತ್ತಾಟ ಇದೆ. ಬಿಜೆಪಿ ಯಡಿಯೂರಪ್ಪರನ್ನು ಬಳಸಿಕೊಳ್ಳುತ್ತಿದೆ. ಅವರ ಪಕ್ಷದಲ್ಲೂ ಸಮಸ್ಯೆಗಳಿವೆ. ಎಲ್ಲ ಪಕ್ಷಗಳಲ್ಲೂ ಸಮಸ್ಯೆ ಇರುವುದು ಸ್ವಾಭಾವಿಕ. ಸಿದ್ದರಾಮಯ್ಯ ಅವರ ಅಭಿವೃದ್ಧಿ, ಕೇಂದ್ರದಲ್ಲಿ ಯುಪಿಎ ಸರ್ಕಾರ ಮಾಡಿದ ಅಭಿವೃದ್ಧಿ ಅಜೆಂಡಾ ಇಟ್ಟುಕೊಂಡು ಈ ಬಾರಿ ಚುನಾವಣೆ ಎದುರಿಸುತ್ತೇವೆ ಎಂದರು.
ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿ, ಈ ಬಜೆಟ್ ಹತ್ತರಲ್ಲಿ ಹನ್ನೊಂದನೇಯದ್ದಾಗುತ್ತದೆ ಎಂದ ಅವರು ರಾಜ್ಯದಲ್ಲಿ ಸಿಡಿ ಪ್ರಕರಣ ಸದ್ದು ವಿಚಾರಕ್ಕೆ ಸ್ಪಂದಿಸಿ, ನೀವು ಅವರನ್ನೇ ಕೇಳಿ, ಯಾರ ಕಡೆಗೆ ಸಿಡಿ ಇದೆ ಅಲ್ಲಿಯೇ ಕೇಳಿ. ಇದರಲ್ಲಿ ಸಿಬಿಐ ತನಿಖೆ ಪ್ರಶ್ನೆ ಉದ್ಭವಿಸಲ್ಲ. ಇದು ಇಬ್ಬರು ವ್ಯಕ್ತಿಗಳ ನಡುವಿನ ಯುದ್ಧ. ಯಾರ ಕಡೆಗೆ ಏನಿದೆ ಎನ್ನುವುದು ನಮಗೆ ಗೊತ್ತಿಲ್ಲ, ನಾವೇನು ಹೇಳುವುದಕ್ಕೆ ಆಗಲ್ಲ ಎಂದರು.
ವೈಯಕ್ತಿಕ ನಿಂದನೆ ಬೇಡ ಎಂದ ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ: ತಮ್ಮ ವಿರುದ್ಧ ಸಿಡಿ ಷಡ್ಯಂತ್ರ ಮಾಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾತಿನ ಸಮರಕ್ಕೆ ಇಳಿದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಯಾರೂ ವೈಯಕ್ತಿಕ ನಿಂದನೆ ಮಾಡಬಾರದು ಎಂದು ಡಿಕೆಶಿ, ಲಕ್ಷ್ಮಿ ಹೆಬ್ಬಾಳ್ಕರ್, ರಮೇಶ್ ಜಾರಕಿಹೊಳಿಗೆ ಮನವಿ ಮಾಡಿದ್ದಾರೆ.
ಚುನಾವಣೆ ಸಮೀಪಿಸುತ್ತಿದ್ದಂತೆ ವೈಯಕ್ತಿಕ ಟೀಕ ಟಿಪ್ಪಣಿ ಮಾಡುವುದು ಬೇಡ. ರಾಜಕೀಯವಾಗಿ ಎಲ್ಲರೂ ಬೆಳೆದಿದ್ದೀರಿ, ಬಹಿರಂಗ ಹೇಳಿಕೆ ನೀಡುವುದು ಬೇಡ. ಮೂರು ಕುಟುಂಬಗಳು ರಾಜಕೀಯವಾಗಿ ಬೆಳೆದಿವೆ. ಹೀಗಾಗಿ ಸಾರ್ವಜನಿಕವಾಗಿ ಕಿತ್ತಾಟ ಬೇಡ. ರಮೇಶ್ ಜಾರಕಿಹೊಳಿಗೆ ಅನ್ಯಾಯ ಆಗಿರುವುದು ನಿಜ, ಅದಕ್ಕೆ ಹೋರಾಟ ಮಾಡಲಿ. ಸಾರ್ವಜನಿಕವಾಗಿ ಟೀಕೆ ಟಿಪ್ಪಣಿ ಮಾಡುವುದು ಬೇಡ ಎಂದು ಬಾಲಚಂದ್ರ ಮನವಿ ಮಾಡಿದ್ದಾರೆ.
ಇದನ್ನೂ ಓದಿ | Bharath jodo yatra : ಕಾಲೇಜು ಕ್ಯಾಂಪಸ್‌ಗಳಲ್ಲಿ ಹರಡುತ್ತಿರುವ ಗೋಡ್ಸೆ ವೈರಸ್ ತೊಲಗಿಸಬೇಕು ಎಂದ ಸುಧೀರ್ ಮುರೊಳ್ಳಿ