Site icon Vistara News

Karnataka Election 2023: ಕಾಂಗ್ರೆಸ್‌ ಸೇರ್ಪಡೆ ಚರ್ಚೆಗೆ ಸವದಿ ಸಭೆ; ಕೈ ಎತ್ತಿ ಬೆಂಬಲ ಸೂಚಿಸಿದ ಕಾರ್ಯಕರ್ತರು

Karnataka Election 2023: Savadi meets to discuss joining Congress; Activists raise their hands in support

ಬೆಳಗಾವಿ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) ಬಿಜೆಪಿಗೂ ಸಹ ಬಂಡಾಯದ ಬಿಸಿ ತಟ್ಟುತ್ತಿದೆ. ಟಿಕೆಟ್‌ ವಂಚಿತ ಆಕಾಂಕ್ಷಿತರು ಬಂಡಾಯ ಎದ್ದಿದ್ದು, ಕೆಲವರು ಪಕ್ಷೇತರವಾಗಿ ಸ್ಪರ್ಧೆ ಮಾಡಲು ಇಚ್ಛಿಸಿದರೆ, ಇನ್ನು ಕೆಲವರು ಪಕ್ಷ ತೊರೆದು ಅನ್ಯ ಪಕ್ಷಗಳತ್ತ ಮುಖ ಮಾಡುತ್ತಿದ್ದಾರೆ. ಈಗ ಮಾಜಿ ಡಿಸಿಎಂ, ವಿಧಾನ ಪರಿಷತ್‌ ಮಾಜಿ ಸದಸ್ಯ ಲಕ್ಷ್ಮಣ ಸವದಿ ಸೆಡ್ಡು ಹೊಡೆದಿದ್ದು, ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಲು ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾಭಿಮಾನಿ ವೇದಿಕೆ ಹೆಸರಲ್ಲಿ ಬೆಂಬಲಿಗರ ಸಭೆಯನ್ನು ಕರೆದಿರುವ ಸವದಿ, ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಜನಾಭಿಪ್ರಾಯವನ್ನು ಸಂಗ್ರಹಿಸಿದ್ದಾರೆ.

ಅಥಣಿ ಶಿವಯೋಗಿ ಮೈದಾನದಲ್ಲಿ ಲಕ್ಷ್ಮಣ ಸವದಿಯಿಂದ ಬೆಂಬಲಿಗರ ಬೃಹತ್ ಸಮಾವೇಶ ನಡೆದಿದ್ದು, ರೈತಗೀತೆಯೊಂದಿಗೆ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ಅಥಣಿ ಮತಕ್ಷೇತ್ರದ ವಿವಿಧ ಸಮುದಾಯದ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದರು. ಈ ವೇಳೆ ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಸವದಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಕಾರ್ಯಕರ್ತನೊಬ್ಬ, ಸವದಿ ಕಾಂಗ್ರೆಸ್‌ ಸೇರ್ಪಡೆಯಾಗಬೇಕು ಎಂದು ಬಯಸುವವರು ಕೈ ಎತ್ತಿ ಎಂದು ಸಭೆಯಲ್ಲಿ ಪ್ರಕಟಿಸುತ್ತಿದ್ದಂತೆ ಸೇರಿದ್ದವರೆಲ್ಲರೂ ಕೈ ಎತ್ತಿ ಬೆಂಬಲ ಸೂಚಿಸಿದ್ದಾರೆ.

ಸಭೆಯಲ್ಲಿ ಪಾಲ್ಗೊಂಡಿರುವ ಸವದಿ ಬೆಂಬಲಿಗರು

ಇದನ್ನೂ ಓದಿ: Fact Check: ಕನ್ನಡ ಗೊತ್ತಿಲ್ಲದ್ದಕ್ಕೆ ಬಿಹಾರ ಯುವಕನ ಮೇಲೆ ದೌರ್ಜನ್ಯ ನಡೆಯಿತೇ? ವೈರಲ್ ವಿಡಿಯೋ ಅಸಲಿಯತ್ತೇನು?

ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಒಂದು ನಿರ್ಧಾರಕ್ಕೆ ಬರೋಣ – ಸವದಿ

ಈ ವೇಳೆ ಕಾರ್ಯಕರ್ತನೊಬ್ಬ ಮಾತನಾಡುತ್ತಾ, ನೀವು ಕಾಂಗೆಸ್‌ ಸೇರ್ಪಡೆಯಾಗುವುದು ಒಳ್ಳೆಯದು ಎಂದು ಹೇಳಿದರು. ಈ ಮಾತು ಕೇಳಿ ಬರುತ್ತಿದ್ದಂತೆ ಸಭೆಯಲ್ಲಿದ್ದವರೆಲ್ಲರೂ ಹೌದು ಎಂದು ಕೂಗು ಹಾಕಿ ಸಮ್ಮತಿ ಸೂಚಿಸಿದರು. ಆಗ ಲಕ್ಷ್ಮಣ ಸವದಿ ಕಾಂಗ್ರೆಸ್‌ ಸೇರಬೇಕು ಎನ್ನುವವರು ಕೈ ಎತ್ತಿ ಎಂದು ಕಾರ್ಯಕರ್ತರು ಹೇಳುತ್ತಿದ್ದಂತೆ ಸೇರಿದ್ದ ಜನರು ಕೈ ಎತ್ತಿ ಕಾಂಗ್ರೆಸ್‌ ಸೇರಲು ಬೆಂಬಲ ಸೂಚಿಸಿದರು. ಆಗ ಸ್ವತಃ ತಾವೇ ಎದ್ದು ಬಂದು ಮಾತನಾಡಿದ ಸವದಿ, ಯಾರೋ ಒಬ್ಬರು ಹೇಳುವ ಮಾತಿನಿಂದ ನಿರ್ಧಾರಕ್ಕೆ ಬರೋದು ಬೇಡ. ವೇದಿಕೆಯ ಮೇಲೆ ನನಗೆ ಮಾರ್ಗದರ್ಶನ ಮಾಡಿದ ಹಿರಿಯರು ಇದ್ದಾರೆ. ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಒಂದು ನಿರ್ಧಾರಕ್ಕೆ ಬರೋಣ ಎಂದು ಹೇಳಿದರು.

ಇಂದು ನಾನು ಬೆಂಗಳೂರಿಗೆ ಹೋಗುತ್ತಿಲ್ಲ. ಶುಕ್ರವಾರ ಬೆಳಗ್ಗೆ 5 ಗಂಟೆಗೆ ಹೊರಡಲಿದ್ದೇನೆ. ಯಾರೂ ಗಡಿಬಿಡಿ ಮಾಡೋದು ಬೇಡ. ಎಲ್ಲರೂ ಸೇರಿ ನಿರ್ಧಾರ ಮಾಡೋಣ ಎಂದರು. ಈ ವೇಳೆ ಮತ್ತೊಬ್ಬ ಕಾರ್ಯಕರ್ತ ಮಾತನಾಡಿ, ಶಾಸಕ ಮಹೇಶ್‌ ಕುಮಟಳ್ಳಿ ಅವರು ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಯನ್ನು ಗೋಕಾಕ್‌ನಲ್ಲಿ ಉದ್ಘಾಟನೆ ಮಾಡಿದರು ಎಂದು ಹೇಳುತ್ತಿದ್ದಂತೆ ಸವದಿ ಇರಿಸು ಮುರಿಸುಗೊಂಡರು.

ಇದೇ ವೇಳೆ ಮತ್ತೊಬ್ಬ ಕಾರ್ಯಕರ್ತ ಸಹ ಸವದಿ ಕಾಂಗ್ರೆಸ್‌ಗೆ ಸೇರಬೇಕು ಎಂದು ಸಲಹೆ ನೀಡಿದರು. ಕೆಲವರು ಎಲ್ಲಿಂದಲೋ ಬಂದು ಈಗ ಪಕ್ಷವನ್ನು ಹಾಳು ಮಾಡಿದ್ದಾರೆಂದು ರಮೇಶ್‌ ಜಾರಕಿಹೊಳಿ ಹೆಸರನ್ನು ಪ್ರಸ್ತಾಪ ಮಾಡದೇ ತಿವಿದರು. ಅಲ್ಲದೆ, ಅವರು ಕುಟುಂಬ ಸಮೇತ ಇಲ್ಲಿಗೆ ಬಂದು ಬಿದ್ದರೂ ನಮ್ಮ ಎಂಎಲ್‌ಎ ನೀವೇ ಎಂದು ಹೇಳಿದರು.

ಮಹೇಶ್‌ ಕುಮಟಳ್ಳಿ ಬಗ್ಗೆ ಸವದಿ ಹೇಳಿದ್ದೇನು?

ಇದನ್ನೂ ಓದಿ: Karnataka Elections : ನಾನು ಬದುಕಿರೋವರೆಗೆ ದತ್ತನ ಕೈಬಿಡಬಾರದು, ಕಷ್ಟ ಕಾಲದಲ್ಲಿ ನೆರವಿಗೆ ನಿಲ್ಬೇಕು ಎಂದು ಹೇಳಿದ್ರಂತೆ ಎಚ್‌ಡಿಡಿ

ನೀವು ಹೆದರಬೇಡಿ ಅಥಣಿ ಜನ ಹಾಗೂ ಕ್ಷೇತ್ರದ ಆದಿ ಪುರುಷ ಶಿವಯೋಗಿ ಇರುತ್ತಾನೆ. ನೀವು ಏನೇ ನಿರ್ಧಾರ ತೆಗೆದುಕೊಂಡರೂ ಸಹ ನಾವು ನಿಮ್ಮೊಂದಿಗೆ ಬರುತ್ತೇವೆ. ಇನ್ನು ನಮ್ಮ ಹುಲಿ ಕಣ್ಣಾಗ ನೀರು ಬರಬಾರದು. ನಾವೆಲ್ಲ ಇಲ್ಲಿಯವರೆಗೂ ತೋಳ ಬಂತು ತೋಳ ಬಂತು ಎಂದು ಹೇಳುತ್ತಿದ್ದೆವು. ಹುಲಿಯನ್ನು ಪಕ್ಕದಲ್ಲಿಯೇ ಇಟ್ಕೊಂಡು ತೋಳದ ಕಡೆ ನೋಡುತ್ತಿದ್ದೆವು ಎಂದು ಹೇಳುವ ಮೂಲಕ ಸವದಿಯನ್ನು ಹುಲಿಗೆ ಹೋಲಿಸಿದ ಕಾರ್ಯಕರ್ತನೊಬ್ಬ, ರಮೇಶ್‌ ಜಾರಕಿಹೊಳಿಯನ್ನು ತೋಳಕ್ಕೆ ಹೋಲಿಸಿದ್ದಾನೆ.

Exit mobile version