Site icon Vistara News

ಸಂವಿಧಾನ ಸುರಕ್ಷಿತವಾಗಿದ್ರೆ ಮಾತ್ರ ಹಿಂದುಳಿದವರು ಸಿಎಂ ಆಗಬಹುದು ಎಂದ ಬಿ.ಕೆ ಹರಿಪ್ರಸಾದ್‌

ದಾವಣಗೆರೆ: ಒಂದು ವೇಳೆ ಸಂವಿಧಾನ ಇಲ್ಲದೆ ಹೋಗಿದ್ದರೆ ಹಿಂದುಳಿದ ವರ್ಗದ ಯಾರೂ ಮುಖ್ಯಮಂತ್ರಿಗಳಾಗುವ ಅವಕಾಶ ಒದಗುತ್ತಿರಲಿಲ್ಲ. ನಮಗೆ ಯಾರಿಗೂ ಅಧಿಕಾರ ದೊರೆಯುತ್ತಿರಲಿಲ್ಲ. ಹೀಗಾಗಿ ಮೊದಲು ಸಂವಿಧಾನ ರಕ್ಷಣೆ ಆಗಬೇಕಾಗಿದೆ ಎಂದು ಕಾಂಗ್ರೆಸ್‌ ಮೇಲ್ಮನೆ ಸದಸ್ಯ, ವಿಧಾನ ಪರಿಷತ್‌ನಲ್ಲಿ ವಿಪಕ್ಷ ನಾಯಕರಾಗಿರುವ ಬಿ.ಕೆ. ಹರಿಪ್ರಸಾದ್‌ ಹೇಳಿದರು.

ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತಪರ ಕಾರ್ಮಿಕಪರ ಯುವಕರ ಪರ, ಮಹಿಳೆಯರ ಪರ, ದುರ್ಬಲ ವರ್ಗದವರ ಪರ ಹೋರಾಟ ಮಾಡುತ್ತಿರುವ ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯಗೆ ಶುಭಾಶಯ ಕೋರಲು ಬಂದಿದ್ದಾರೆ. ಆದರೆ, ಕೇವಲ ಶುಭಾಶಯ ಮೂಲಕ ನಾವು ಸಂತೃಪ್ತರಾಗಬಾರದು. ಪ್ರಜಾಪ್ರಭುತ್ವ ಉಳಿಸುವ ಕೆಲಸವನ್ನು ನಾವೆಲ್ಲಾ ಮಾಡಬೇಕು. ಸಂವಿಧಾನವನ್ನು, ಪ್ರಜಾಪ್ರಭುತ್ವವನ್ನು ರಕ್ಷಿಸುತ್ತೇವೆ ಎನ್ನುವ ಪ್ರತಿಜ್ಞೆ ಮಾಡಿʼʼ ಎಂದು ಹೇಳಿದರು.

ಬಿಜೆಪಿ ದೊಡ್ಡ ಮಟ್ಟದ ಕುತಂತ್ರ ರಾಜಕಾರಣ ಮಾಡುತ್ತಿದೆ. ಇದನ್ನು ಅರ್ಥ ಮಾಡಿಕೊಂಡಿರುವ ಕಾಂಗ್ರೆಸ್‌ ಈಗ ಎಚ್ಚೆತ್ತುಕೊಂಡಿದೆ. ಜನರಿಗೂ ಕೂಡಾ ಈಗ ಅದರ ಅರಿವಾಗಿದೆ ಎಂದು ಬಿ.ಕೆ ಹರಿಪ್ರಸಾದ್‌ ಹೇಳಿದರು.

ಆರ್‌ ವಿ ದೇಶಪಾಂಡೆ

ಇತಿಹಾಸದಲ್ಲೇ ಇಂಥ ಸಮಾವೇಶ ನೋಡಿಲ್ಲ: ದೇಶಪಾಂಡೆ

ʻʻ50 ವರ್ಷಗಳಿಂದ ರಾಜಕೀಯ ಜೀವನದಲ್ಲಿದ್ದೇನೆ. ಇಷ್ಟೊಂದು ದೊಡ್ಡ ಸಭೆ ದೇಶದಲ್ಲಿಯೇ ನಡೆದಿಲ್ಲʼʼ ಎಂದು ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು. ʻʻಈ ಜೋಷ್ ಇಲ್ಲಿಗೇ ಮುಗಿಯಬಾರದು, 2023ರಲ್ಲೂ ಇದನ್ನು ಉಳಿಸಿಕೊಂಡು ಹೋರಾಡಬೇಕು. ದೇಶದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಬೇಕು. ಇಲ್ಲಿಂದ ನೀವು ಮಾತು ಕೊಟ್ಟು ಹೋಗಬೇಕುʼʼ ಎಂದು ದೇಶಪಾಂಡೆ.

ಇದನ್ನೂ ಓದಿ| ನಾನು, ಶಿವಕುಮಾರ್‌ ಒಟ್ಟಾಗಿದ್ದೇವೆ; ನಮ್ಮ ನಡುವೆ ಬಿರುಕಿಲ್ಲ: ಸಿದ್ದರಾಮಯ್ಯ ಪ್ರತಿಪಾದನೆ

Exit mobile version