ಬೆಂಗಳೂರು: ಇಲ್ಲಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕಚೇರಿ ಆವರಣದಲ್ಲಿ ಶನಿವಾರ (ಜ.21) ಗೃಹ ಸಾಲ ಮೇಳ (SBI Home loans) ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಒಟ್ಟು ಎರಡು ದಿನಗಳ ಕಾಲ ಗೃಹ ಸಾಲ ಮೇಳ ನಡೆಯಲಿದ್ದು, ಸುಮಾರು 40ಕ್ಕೂ ಅಧಿಕ ಬಿಲ್ಡರ್ಗಳು ಭಾಗಿಯಾಗುತ್ತಿದ್ದಾರೆ. ಹೋಮ್ ಲೋನ್ ಪಡೆಯಬೇಕೆಂಬ ಕನಸು ಹೊತ್ತಿರುವ ಗ್ರಾಹಕರಿಗೆ ಎಲ್ಲ ರೀತಿಯ ಸಹಾಯವನ್ನು ಇಲ್ಲಿ ನೀಡಲಾಗುತ್ತದೆ.
ಎಸ್‌ಬಿಐನ ವಿವಿಧ ಶಾಖೆಗಳ ವ್ಯವಸ್ಥಾಪಕರು ಸೇರಿ ಈ ಗೃಹ ಸಾಲ ಮೇಳಕ್ಕೆ ಶನಿವಾರ (ಜ.21) ಚಾಲನೆ ನೀಡಿದ್ದಾರೆ. ಚಾಲನೆ ಬಳಿಕ ಮಾತನಾಡಿರುವ ಜನರಲ್ ಮ್ಯಾನೇಜರ್ ಯಶ್ವಂತ್ ಕುಲಕರ್ಣಿ, ಈ ಮೇಳದಲ್ಲಿ ಕನಸಿನ ಮನೆ ಪಡೆಯಬೇಕು ಎಂದು ಹಂಬಲಿಸುವ ಜನರಿಗೆ ಇದು ಸಹಾಯವಾಗುತ್ತದೆ ಎಂದಿದ್ದಾರೆ.
ಈ ಮೇಳದಲ್ಲಿ ಹೋಮ್ ಲೋನ್ ಬುಕ್ ಮಾಡಿದವರಿಗೆ ಪ್ರೊಸೆಸಿಂಗ್ ಫೀಸ್‌ನಿಂದ ವಿನಾಯಿತಿ ನೀಡಲಾಗುತ್ತಿದೆ. ಅಲ್ಲದೇ ಬಡ್ಡಿಯಲ್ಲೂ ರಿಯಾಯಿತಿ ಇರುತ್ತದೆ. ಜನರು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಯಶ್ವಂತ್ ಕುಲಕರ್ಣಿ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಿವಿಧ ಶಾಖೆಗಳ ವ್ಯವಸ್ಥಾಪಕರು, ಸಿಬ್ಬಂದಿ ಭಾಗಿಯಾಗಿದ್ದರು.
ಇದನ್ನೂ ಓದಿ | Wipro layoffs | ವಿಪ್ರೋದಿಂದ 500 ಹೊಸ ಉದ್ಯೋಗಿಗಳ ವಜಾ