Site icon Vistara News

Assembly Session: ಎಸ್ಸಿ, ಎಸ್ಟಿ ಗುತ್ತಿಗೆದಾರರ ಕಾಮಗಾರಿಗಳ ಮೊತ್ತ 50 ಲಕ್ಷದಿಂದ 1 ಕೋಟಿ ರೂ.ಗೆ ಹೆಚ್ಚಳ

construction work

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರು ಕೈಗೊಳ್ಳುವ ನಿರ್ಮಾಣ ಕಾಮಗಾರಿಗಳ ಮೊತ್ತವನ್ನು 50 ಲಕ್ಷ ರೂ.ಗಳಿಂದ 1 ಕೋಟಿ ರೂ.ಗಳಿಗೆ ಹೆಚ್ಚಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 2023ಕ್ಕೆ ತಿದ್ದುಪಡಿ ಮಾಡಿದ ವಿಧೇಯಕಕ್ಕೆ ವಿಧಾನಸಭೆಯಲ್ಲಿ (Assembly Session) ಶುಕ್ರವಾರ ಧ್ವನಿಮತದಿಂದ ಅಂಗೀಕಾರ ನೀಡಲಾಯಿತು.

ಮುಖ್ಯಮಂತ್ರಿಗಳ ಪರವಾಗಿ ಸದನದಲ್ಲಿ ವಿಧೇಯಕವನ್ನು ಅಂಗೀಕಾರಕ್ಕೆ ಮಂಡಿಸಿದ ಕಾನೂನು, ನ್ಯಾಯ, ಮಾನವ ಹಕ್ಕುಗಳು ಮತ್ತು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್‌ ಅವರು, ತಿದ್ದುಪಡಿ ಮಸೂದೆಯ ಸಂಕ್ಷಿಪ್ತ ವಿವರಗಳನ್ನು ಮತ್ತು ಮಸೂದೆಯ ಮಂಡನೆಯ ನಂತರ ನಡೆದ ಚರ್ಚೆಗೆ ಸದನದಲ್ಲಿ ಉತ್ತರಿಸಿದರು.

ಇದನ್ನೂ ಓದಿ | Assembly Session: ಬಿಜೆಪಿಯವರು ಹಿಟ್ಲರ್‌ ವಂಶದವರ?: ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಸದನದಲ್ಲಿ ಚರ್ಚೆಗೆ ಉತ್ತರಿಸಿದ ಸಚಿವರು, ಈ ಮೊದಲಿನ 50 ಲಕ್ಷ ರೂ.ಗಳವರೆಗಿನ ಮೊತ್ತದ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಿದ ತಿದ್ದುಪಡಿಯ ನಂತರ ಮೊದಲನೇ ಟೆಂಡರ್ ಕರೆಯಲು ಶೇ. 62 ರಷ್ಟು ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಪಂಗಡದವರು ಟೆಂಡರ್‌ಗಳಲ್ಲಿ ಪಾಲ್ಗೊಂಡಿದ್ದು, 2ನೇ ಕರೆಯಲ್ಲಿ ಶೇ.80ರಷ್ಟು ಅನುಸೂಚಿತ ಜಾತಿ ಮತ್ತು ಬುಡಕಟ್ಟು ಪಂಗಡದವರು ಪಾಲ್ಗೊಂಡಿದ್ದಾರೆ ಎಂದು ವಿವರಿಸಿದರು. ಸಚಿವರ ವಿವರಣೆ ಮತ್ತು ಉತ್ತರದ ನಂತರ ವಿಧಾನಸಭೆ ಈ ವಿಧೇಯಕವನ್ನು ಧ್ವನಿ ಮತದಿಂದ ಅಂಗೀಕರಿಸಿತು.

ಎಸ್ಸಿ ಎಸ್ಟಿ ಗುತ್ತಿಗೆದಾರರಿಗೆ ಟೆಂಡರ್‌ನಲ್ಲಿ ವಿನಾಯಿತಿ 1 ಕೋಟಿಗೆ ರೂ.ಗೆ ಹೆಚ್ಚಳ: ಬಸವರಾಜ ಬೊಮ್ಮಾಯಿ ಸ್ವಾಗತ

ಬೆಂಗಳೂರು: ಎಸ್ಸಿ, ಎಸ್ಟಿ ಸಮುದಾಯದ ಗುತ್ತಿಗೆದಾರರಿಗೆ ಟೆಂಡರ್ ಪ್ರಕ್ರಿಯೆಯಿಂದ ವಿನಾಯಿತಿ ನೀಡುವ ಕರ್ನಾಟಕ ಸಾರ್ವಜನಿಕ ಸಂಗ್ರಹಗಳಲ್ಲಿನ ಪಾರದರ್ಶಕತೆ ಕಾಯ್ದೆ ತಿದ್ದುಪಡಿ ಮಾಡಿ 50 ಲಕ್ಷ‌ದಿಂದ 1 ಕೋಟಿಗೆ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಧೇಯಕದ ಪರ್ಯಾಲೋಚನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎಸ್‌ಸಿ, ಎಸ್ಟಿ ಸಮುದಾಯದ ಗುತ್ತಿಗೆದಾರರಿಗೆ ಟೆಂಡರ್ ವಿನಾಯತಿಯಲ್ಲಿ 50 ಲಕ್ಷದಿಂದ 1 ಕೋಟಿ ರೂ. ಗೆ ಹೆಚ್ಚಳ ಮಾಡುವ ತಿದ್ದುಪಡಿ ಮಾಡಿರುವುದು ಸ್ವಾಗತಾರ್ಹ ಎಂದರು.

ಇದನ್ನೂ ಓದಿ | New Book: ತತ್ವಶಾಸ್ತ್ರದ ಮೂಲತತ್ವ ಆಧರಿತ ಕೃತಿ: ಸಂತೋಷ್‌ ಲಾಡ್‌ ಪುತ್ರ ಕರಣ್‌ ಲಾಡ್‌ ಪುಸ್ತಕಕ್ಕೆ ಸಿಎಂ ಸಿದ್ದರಾಮಯ್ಯ ಮೆಚ್ಚುಗೆ

ಈ ಕಾಯ್ದೆ ಜಾರಿ ಬಂದ ಮೇಲೆ ಎಸ್ಸಿ, ಎಸ್ಟಿ ಸಮುದಾಯದವರು ಉತ್ಸಾಹದಿಂದ ಕೆಲಸ ಮಾಡಲು ಮುಂದೆ ಬರುತ್ತಿದ್ದಾರೆ. ಹಣಕಾಸು ಸಂಸ್ಥೆಗಳು ಸಾಲ ನೀಡಲು ಮುಂದೆ ಬರುತ್ತಿವೆ. ಇದು ನಮ್ಮ ಪಕ್ಷದ ನಿಲುವು ಕೂಡ ಆಗಿತ್ತು. ಸರ್ಕಾರದ ಈ ಕಾಯ್ದೆ ಸ್ವಾಗತಾರ್ಹ ಎಂದು ಹೇಳಿದರು.

Exit mobile version