Site icon Vistara News

ರಾಷ್ಟ್ರೀಯ ಮಟ್ಟದ ಕಾಂಪಿಟೇಟಿವ್ ಎಕ್ಸಾಮಿನೇಶನ್ ಕಮ್ ಸ್ಕಾಲರ್‌ಶಿಪ್ ಪರೀಕ್ಷೆಯಲ್ಲಿ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ

Scholarship Exam honnavar central school

#image_title

ಹೊನ್ನಾವರ: ನ್ಯಾಷನಲ್ ಲೆವೆಲ್ ಕಾಂಪಿಟೇಟಿವ್ ಎಕ್ಸಾಮಿನೇಶನ್ ಕಮ್ ಸ್ಕಾಲರ್‌ಶಿಪ್ (Scholarship Exam) ವತಿಯಿಂದ ನಡೆಸಲಾಗಿದ್ದ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಪಟ್ಟಣದ ಸೆಂಟ್ರಲ್ ಸ್ಕೂಲ್ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ತಾಲೂಕಿನ ಮಲ್ನಾಡ್ ಪ್ರೋಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಸೆಂಟ್ರಲ್ ಶಾಲೆಯ ಏಳನೆಯ ತರಗತಿ ವಿದ್ಯಾರ್ಥಿ ಜಾನ್ವಿ ವಿಜಯ ನಾಯ್ಕ ಎರಡನೇ ರ‍್ಯಾಂಕ್, ಹತ್ತನೇ ತರಗತಿ ವಿದ್ಯಾರ್ಥಿ ಪಿ.ವಿವೇಕ್ ಮೂರನೇ ರ‍್ಯಾಂಕ್,
ಮೂರನೇ ತರಗತಿ ವಿದ್ಯಾರ್ಥಿ ಆರುಷ್ ಗಣೇಶ ಭಟ್ ಮೂರನೇ ರ‍್ಯಾಂಕ್ ಮತ್ತು ಚಿನ್ಮಯಿ ಹೆಗಡೆ ಚಿನ್ನದ ಪದಕವನ್ನು ಪಡೆದಿದ್ದಾರೆ.

ಇದನ್ನೂ ಓದಿ: Cyber Fraud: ನಿವೃತ್ತ ನ್ಯಾಯಾಧೀಶರಿಗೇ ಆನ್‌ಲೈನ್‌ ಮೂಲಕ 1.67 ಲಕ್ಷ ರೂ. ವಂಚಿಸಿದ ಕಳ್ಳರು

ಒಟ್ಟು 96 ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದು, ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ಚಿನ್ನದ ಪದಕ ಮತ್ತು ಪ್ರಮಾಣ ಪತ್ರವನ್ನು ಪಡೆದಿದ್ದಾರೆ. ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರವನ್ನು ನೀಡಲಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಎಂ.ಪಿ.ಇ. ಸೊಸೈಟಿಯ ಆಡಳಿತ ಮಂಡಳಿ, ಅಧ್ಯಕ್ಷರು, ಸರ್ವ ಸದಸ್ಯರು, ಶಾಲೆಯ ಪ್ರಾಂಶುಪಾಲರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ಪಾಲಕರು ಅಭಿನಂದನೆ ಸಲ್ಲಿಸಿದ್ದಾರೆ.

Exit mobile version