ಕ್ರೈಂ
Cyber Fraud: ನಿವೃತ್ತ ನ್ಯಾಯಾಧೀಶರಿಗೇ ಆನ್‌ಲೈನ್ ಮೂಲಕ 1.67 ಲಕ್ಷ ರೂ. ವಂಚಿಸಿದ ಕಳ್ಳರು
Cyber Fraud: ಕೊರಿಯರ್ ಸೇವಾ ಸಿಬ್ಬಂದಿ ಎಂಬುದಾಗಿ ನಿವೃತ್ತ ನ್ಯಾಯಾಧೀಶರಿಗೆ ಕರೆ ಮಾಡಿದ ಸೈಬರ್ ವಂಚಕರು, ಅವರ ಖಾತೆಯಿಂದ ಲಕ್ಷಾಂತರ ರೂಪಾಯಿಯನ್ನು ಎಗರಿಸಿದ್ದಾರೆ. ಈ ಕುರಿತು ರಿಟೈರ್ಡ್ ಜಡ್ಜ್ ದೂರು ದಾಖಲಿಸಿದ್ದಾರೆ.
ಮುಂಬೈ: ಆನ್‌ಲೈನ್ ವಂಚನೆ (Cyber Fraud) ಜಾಲಕ್ಕೆ ಇತ್ತೀಚೆಗೆ ಅನಕ್ಷರಸ್ಥರ ಜತೆಗೆ ಅಕ್ಷರಸ್ಥರೇ ಹೆಚ್ಚಾಗಿ ಸಿಲುಕುತ್ತಿದ್ದಾರೆ. ಕರೆ ಮಾಡುವವರಿಗೆ ಒಟಿಪಿ ನೀಡಿಯೋ, ಇನ್ನಾವುದೋ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿಯೋ, ಕಡಿಮೆ ಬೆಲೆಗೆ ಕಾರ್, ಬೈಕ್ ಸಿಗುತ್ತದೆ ಎಂಬ ಅತಿ ಆಸೆಗೋ ಬಿದ್ದು ಲಕ್ಷಾಂತರ ರೂಪಾಯಿ ಕಳೆದುಕೊಳ್ಳುತ್ತದ್ದಾರೆ. ಇದರ ಬೆನ್ನಲ್ಲೇ, ಮಹಾರಾಷ್ಟ್ರದ ಪುಣೆಯಲ್ಲಿ ಆನ್‌ಲೈನ್ ವಂಚಕರು ನಿವೃತ್ತ ನ್ಯಾಯಾಧೀಶರೊಬ್ಬರಿಗೇ 1.67 ಲಕ್ಷ ರೂ. ವಂಚಿಸಿದ್ದಾರೆ.
ಮಹಾರಾಷ್ಟ್ರದ ಪುಣೆ ನಗರದ ಬಾವ್‌ಧನ್ ಖುರ್ದ್‌ನಲ್ಲಿ ವಾಸಿಸುತ್ತಿರುವ 70 ವರ್ಷದ ನಿವೃತ್ತ ನ್ಯಾಯಾಧೀಶರಿಗೆ ಕೊರಿಯರ್ ಸೇವಾ ಸಿಬ್ಬಂದಿಯ ಸೋಗಿನಲ್ಲಿ ದುರುಳರು ವಂಚನೆ ಮಾಡಿದ್ದಾರೆ. ಹಿಂಜೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ತಿಳಿದುಬಂದಿದೆ. ಆದಾಗ್ಯೂ, ಪೊಲೀಸರು ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.
ಹಣ ಕಳೆದುಕೊಂಡಿದ್ದು ಹೇಗೆ?
ಅಮೆರಿಕದಲ್ಲಿರುವ ತಮ್ಮ ಮೊಮ್ಮಗಳಿಗೆ ನಿವೃತ್ತ ನ್ಯಾಯಾಧೀಶರು ಕೆಲ ದಿನಗಳ ಹಿಂದೆ ಸ್ವೀಟ್ ಹಾಗೂ ಬಟ್ಟೆಗಳನ್ನು ಖಾಸಗಿ ಸಂಸ್ಥೆಯ ಮೂಲಕ ಕೊರಿಯರ್ ಮಾಡಿದ್ದಾರೆ. ಆದರೆ, ನಿವೃತ್ತ ನ್ಯಾಯಾಧೀಶರಿಗೆ ಅನಾಮಧೇಯ ವ್ಯಕ್ತಿಯಿಂದ ಕರೆ ಬಂದಿದ್ದು, ಆತ ಕೊರಿಯರ್ ಸರ್ವಿಸ್ ಸಿಬ್ಬಂದಿ ಎಂಬುದಾಗಿ ಹೇಳಿಕೊಂಡಿದ್ದಾನೆ. “ನೀವು ಕೊಟ್ಟಿರುವ ವಿಳಾಸ ತಪ್ಪಾಗಿದೆ, ಒಂದಷ್ಟು ಮಾಹಿತಿ ಕೊಡಿ” ಎಂಬುದಾಗಿ ಕೇಳಿದ್ದಾರೆ. ಇದನ್ನು ಅವರು ನಂಬಿದ್ದಾರೆ.
“ನೀವು ಕೊಟ್ಟಿರುವ ವಿಳಾಸ ತಪ್ಪಾಗಿರುವ ಕಾರಣ ಅದನ್ನು ಸರಿಪಡಿಸಬೇಕು ಎಂದರೆ ನೀವು 5 ರೂಪಾಯಿ ಪಾವತಿಸಬೇಕು. ನಿಮಗೆ ನಾವೊಂದು ಲಿಂಕ್ ಕಳುಹಿಸಿದ್ದೇವೆ. ಅದರ ಮೇಲೆ ಕ್ಲಿಕ್ ಮಾಡಿ, ಹಣ ಪಾವತಿಸಿ” ಎಂದಿದ್ದಾರೆ. ಅದರಂತೆ, ನಿವೃತ್ತ ನ್ಯಾಯಾಧೀಶರು ಲಿಂಕ್ ಮೇಲೆ ಕ್ಲಿಕ್ ಮಾಡಿ, ಹಣ ಪಾವತಿಸಿದ್ದಾರೆ. ಆದರೆ, ಇದಾದ ಬಳಿಕ ರಿಟೈರ್ಡ್ ಜಡ್ಜ್ ಬ್ಯಾಂಕ್ ಖಾತೆಯಿಂದ 1,67,997 ಲಕ್ಷ ರೂ. ಕಡಿತವಾಗಿದೆ.
ಹಲವು ಟ್ರಾನ್ಸಾಕ್ಷನ್‌ಗಳ ಮೂಲಕ ಲಕ್ಷಾಂತರ ರೂ. ಕಡಿತವಾಗುತ್ತಲೇ ವಂಚನೆಯನ್ನು ಅರಿತ ರಿಟೈರ್ಡ್ ಜಡ್ಜ್, ಪೊಲೀಸರಿಗೆ ದೂರು ನೀಡಿದ್ದಾರೆ. ಕೆಲ ದಿನದ ಹಿಂದಷ್ಟೇ, ವಿದೇಶದಿಂದ ದುಬಾರಿ ಉಡುಗೊರೆ ಬಂದಿದ್ದು, ಅದನ್ನು ಪಡೆಯಲು ಹಣ ಪಾವತಿಸಲು ಹೋದ ಮಹಿಳೆಯು 12 ಲಕ್ಷ ರೂ. ಕಳೆದುಕೊಂಡಿದ್ದರು. ಇಂತಹ ಪ್ರಕರಣಗಳು ದಿನೇದಿನೆ ಜಾಸ್ತಿಯಾಗುತ್ತಿರುವ ಕಾರಣ ಜನ ಎಚ್ಚರಿಕೆಯಿಂದ ಇರುವುದು ಒಳಿತು.
ಇದನ್ನೂ ಓದಿ: Cyber Crime: ಸಿನಿಮಾ ರಿವ್ಯೂ ಕೊಡಲು ಹೋಗಿ 7.3 ಲಕ್ಷ ರೂ. ಕಳೆದುಕೊಂಡ ಮಹಿಳೆ, ಪೊಲೀಸರಿಗೂ ವಂಚನೆ
ಕರ್ನಾಟಕ
Child theft in Bengaluru: ಮನೆಯೊಳಗೆ ತಾಯಿ ಜತೆ ಬೆಚ್ಚಗೆ ಮಲಗಿದ್ದ ಮಗುವನ್ನು ಕದ್ದೊಯ್ದ ಕಳ್ಳಿ; ಮತ್ತೆ ಹೆತ್ತವರ ಮಡಿಲು ಸೇರಿದ್ದೇ ರೋಚಕ!
Kalasipalya Police Station: ಕಲಾಸಿಪಾಳ್ಯದಲ್ಲಿ ಮಗು ಕದ್ದು ಪರಾರಿ ಆಗಿದ್ದ ಖರ್ತನಾಕ್ ಮಕ್ಕಳ ಕಳ್ಳಿಯೊಬ್ಬಳನ್ನು ನಗರ ಪೊಲೀಸರು ಸಾರ್ವಜನಿಕರ ಸಹಾಯದೊಂದಿಗೆ ಕೇವಲ 4 ಗಂಟೆಯಲ್ಲೆ ಬಂಧಿಸಿದ್ದಾರೆ. ಕಳ್ಳಿಯ ಪಾಲಾಗಿದ್ದ ಮಗುವನ್ನು ಮತ್ತೆ ಹೆತ್ತವರ ಮಡಿಲು ಸೇರಿಸಿದ್ದಾರೆ.
ಬೆಂಗಳೂರು: ಆಕೆ ವೃತ್ತಿಪರ ಮಕ್ಕಳ ಕಳ್ಳಿ. ಕಣ್ಣು ಮುಚ್ಚಿ ಬಿಡುವುದರೊಳಗೆ ಕಣ್ಣು ಹಾಕಿದ ಕಂದಮ್ಮಗಳನ್ನು ಸದ್ದಿಲ್ಲದೇ ಕದ್ದು (child theft) ಮಾರಾಟ ಮಾಡಿಬಿಡುತ್ತಿದ್ದಳು. ಆದರೆ ಈ ಬಾರಿ ಅವಳ ನಸೀಬು ಕೆಟ್ಟಿತ್ತು, ಮಗು ಕದ್ದವಳನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದರು! ಆದರೆ, ಈ ಕಳವು ಮತ್ತು ಅವಳನ್ನು ಹಿಡಿದ ಸ್ಟೋರಿ ಒಂದು ಸಿನಿಮಾಕ್ಕಿಂತಲೂ ರೋಚಕ!
ಮಾ.25ರ ಬೆಳಗ್ಗೆ ಸುಮಾರು 7:30ರ ಸಮಯ ಕಲಾಸಿಪಾಳ್ಯದ ದುರ್ಗಮ್ಮ ಬೀದಿಯ ನಿವಾಸಿ ಫಾರ್ಹಿನ್ ಎಂಬುವವರು ತಮ್ಮ 42 ದಿನದ ಮಗುವಿಗೆ ಹಾಲುಣಿಸಿ ನಿದ್ರೆಗೆ ಜಾರಿದ್ದರು. ಈ ವೇಳೆ ಯಾವುದೇ ಭಯ ಭೀತಿ ಇಲ್ಲದೆ, ಆ ಮನೆಯವಳಂತೆಯೇ ಬಾಗಿಲು ತೆರೆದು ಸೀದಾ ಮನೆಯೊಳಗೆ ನುಗ್ಗಿದ ನಂದಿನಿ ಅಲಿಯಾಸ್ ಆಯೆಷಾ, ತಾಯಿಯೊಂದಿಗೆ ಬೆಚ್ಚಗೆ ಮಲಗಿದ್ದ ಮಗುವನ್ನು ಜತೆಗೆ ಪಕ್ಕದಲ್ಲಿದ್ದ ಮೊಬೈಲ್ ಅನ್ನು ಸಹ ಕದ್ದು ಪರಾರಿ ಆಗಿದ್ದಳು.
ಸಿಸಿ ಕ್ಯಾಮೆರಾದಲ್ಲಿ ಸೆರೆಯಾದ ಕಳ್ಳಿ ಕರಾಮತ್ತು
ನಿದ್ರೆಯಿಂದ ಎದ್ದ ಮಗುವಿನ ತಾಯಿ ಫಾರ್ಹಿನ್, ಮಗು ಕಾಣದೇ ಇದ್ದಾಗ ಕಂಗಾಲಾಗಿದ್ದಾರೆ. ಕೂಡಲೇ ಮನೆಯೊಳಗೆ ಹಾಗೂ ಅಕ್ಕ ಪಕ್ಕದಲ್ಲೆಲ್ಲ ಹುಡುಕಾಡಿದ್ದಾರೆ. ಎಲ್ಲಿಯೂ ಮಗು ಪತ್ತೆಯಾಗದೆ ಆತಂಕಗೊಂಡು ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮಗು ಕಳವು ಆಗಿದೆ ಎಂದು ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡು ಸ್ಥಳಕ್ಕೆ ಬಂದ ಪೊಲೀಸರು, ಮನೆ ಅಕ್ಕಪಕ್ಕದ ಸಿಸಿ ಕ್ಯಾಮೆರಾವನ್ನು ಪರಿಶೀಲನೆ ನಡೆಸಿದರು. ಈ ವೇಳೆ ಬುರ್ಖಾ ಧರಿಸಿ ಬಂದಿದ್ದ ಮಹಿಳೆಯೊಬ್ಬಳು ಮನೆಯೊಳಗೆ ನುಗ್ಗಿ ಮಗು ಕದ್ದಿರುವುದು ತಿಳಿದು ಬಂದಿತ್ತು.
ರೈಲ್ವೇ ಕ್ವಾಟ್ರಸ್ ಬಳಿ ಓಡಾಡುತ್ತಿದ್ದಳು ಮಕ್ಕಳ ಕಳ್ಳಿ
ಇದೇ ಸಮಯದಲ್ಲಿ ಪೊಲೀಸ್ ಕಂಟ್ರೋಲ್ ರೂಂಗೆ ಮಾಗಡಿ ರಸ್ತೆ ಬಳಿ ಇರುವ ರೈಲ್ವೇ ಕ್ವಾರ್ಟ್ರಸ್ ಬಳಿ ಮಹಿಳೆಯೊಬ್ಬಳು ಮಗುವನ್ನು ಹಿಡಿದು ಓಡಾಡುತ್ತಿದ್ದಾಳೆ. ಆದರೆ ಆ ಮಗು ಆಕೆಯದ್ದಲ್ಲ ಎಂಬ ಅನುಮಾನ ವ್ಯಕ್ತಪಡಿಸಿ ಸ್ಥಳೀಯರು 112 ಸಹಾಯವಾಣಿಗೆ ಕರೆ ಮಾಡಿದ್ದರು. ಕೂಡಲೇ ಕಾರ್ಯಪ್ರವೃತರಾದ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು.
ಮಾಗಡಿರಸ್ತೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಸುಮಂಗಲಿ ಹಾಗೂ ಕ್ರೈಂ ಟೀಂ ಮಗುವನ್ನು ಹಿಡಿದು ಓಡಾಡುತ್ತಿದ್ದ ಮಹಿಳೆಯನ್ನು ಸ್ಥಳೀಯರ ಸಹಾಯದಿಂದ ವಶಕ್ಕೆ ಪಡೆದರು. ವಿಚಾರಣೆ ನಡೆಸಿದಾಗ ಕಲಾಸಿಪಾಳ್ಯದಲ್ಲಿ ಕದ್ದು ಪರಾರಿಯಾಗಿದ್ದ ಕಳ್ಳಿ ಇವಳೇ ಎಂಬುದು ಖಾತ್ರಿ ಆಗಿತ್ತು.
ಇದಕ್ಕೂ ಮುನ್ನ ನಂದಿನಿ ಅಲಿಯಾಸ್ ಆಯೆಷಾ ಸ್ಥಳೀಯರು ಹಾಗೂ ಪೊಲೀಸರಿಗೆ ಲಾಕ್ ಆಗುತ್ತಿದ್ದಂತೆ ದೊಡ್ಡ ನಾಟಕವನ್ನೇ ಮಾಡಿದ್ದಾಳೆ. ಇದು ತನ್ನದೆ ಮಗು ಎಂದು ಕೂಗಾಡಿ, ಮರಕ್ಕೆ ತಲೆಯನ್ನು ಚಚ್ಚಿಕೊಂಡು ಅಳತೊಡಗಿದ್ದಾಳೆ. ಆದರೆ ಇವಳ ಯಾವ ಮೊಸಳೆ ಕಣ್ಣೀರಿಗೂ ಜಗ್ಗದ ಸ್ಥಳೀಯರು, ಕೂಡಲೇ ಮಗುವನ್ನು ಅವಳಿಂದ ಪಡೆದುಕೊಂಡಿದ್ದಾರೆ.
ಸದ್ಯ ಈ ಆಯೆಷಾ ಮುಳಬಾಗಿಲು ಮೂಲದವಳಾಗಿದ್ದು, ಆಸ್ಪತ್ರೆ, ಮನೆಯಲ್ಲಿರುವ ಮಕ್ಕಳನ್ನು ಕದಿಯುವುದು ಮಾರಾಟ ಮಾಡುವುದು ಹಾಗೂ ಮೊಬೈಲ್ ಕಳ್ಳತನ ಮಾಡುತ್ತಿರುವುದು ತಿಳಿದುಬಂದಿದೆ. ಕಳೆದು ಹೋಗಿದ್ದ ಮಗುವನ್ನು ಪೋಷಕರಿಗೆ ಒಪ್ಪಿಸಿರುವ ಕಲಾಸಿಪಾಳ್ಯ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Prashant Sambargi : ಅವರು ನನ್ನ ತಂದೆ ಸಮಾನ; ದೇವೇಗೌಡರ ಕ್ಷಮೆ ಯಾಚಿಸಿದ ಪ್ರಶಾಂತ್ ಸಂಬರ್ಗಿ
ದೇವೇಗೌಡರ ಹೆಸರು ಬಳಸಿ ರಾಹುಲ್ ಕಾಲೆಳೆಯಲು ಹೋದ ಪ್ರಶಾಂತ್ ಸಂಬರ್ಗಿ (Prashant Sambargi)ಭರ್ಜರಿ ತುಳಿತಕ್ಕೆ ಒಳಗಾಗಿದ್ದಾರೆ. ಇದೀಗ ಅವರು ಕ್ಷಮೆ ಯಾಚಿಸುವ ಮೂಲಕ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಬೆಂಗಳೂರು: ರಾಹುಲ್ ಗಾಂಧಿಯನ್ನು ಟೀಕಿಸಲು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಹೆಸರು ಬಳಸಿಕೊಂಡು ಎಡವಟ್ಟು ಮಾಡಿಕೊಂಡು ಸಾರ್ವಜನಿಕರು ಮತ್ತು ಜೆಡಿಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ (Prashant Sambargi) ಇದೀಗ ಕ್ಷಮೆ ಕೇಳಿದ್ದಾರೆ.
ʻಎಲ್ಲ ಕಳ್ಳರ ಹೆಸರೂ ಮೋದಿ ಎಂದೇ ಯಾಕಿರುತ್ತದೆ?ʼ ಎಂಬ ಪ್ರಶ್ನೆ ಕೇಳುವ ಮೂಲಕ ವಿವಾದಕ್ಕೊಳಗಾಗಿ ಈಗ ಜೈಲು ಶಿಕ್ಷೆಗೂ ಒಳಗಾಗಿರುವ, ಜತೆ ಸಂಸತ್ ಸದಸ್ಯತ್ವವನ್ನೂ ಕಳೆದುಕೊಂಡಿರುವ ರಾಹುಲ್ ಗಾಂಧಿ ಅವರನ್ನು ಟೀಕಿಸುವ ಭರದಲ್ಲಿ ಸಂಬರ್ಗಿ ದೇವೇಗೌಡರ ಹೆಸರನ್ನು ಎಳೆದುತಂದಿದ್ದರು.
ʻʻದೇವೇ ಗೌಡ ಕಳ್ಳ ಅನ್ನೋದಕ್ಕೂ,ಗೌಡರು ಅನ್ನೋರೆಲ್ಲ ಕಳ್ಳರೆ ಯಾಕಿರ್ತಾರೆ ಅನ್ನೋದಕ್ಕೂ ವ್ಯತ್ಯಾಸವಿದೆ. ಮೊದಲನೆಯದಕ್ಕೆ ದೇವೇ ಗೌಡ್ರು ಕೇಸ್ ಹಾಕಬೇಕು. ಎರಡನೆಯದಕ್ಕೆ ಅವನ ಮಗನೋ ಮೊಮ್ಮಗನೇ or any ಗೌಡ ಕೇಸು ಹಾಕಬಹುದು. ಸುಮ್ನೆ ಒಂದು ಉದಾಹರಣೆ ಕೊಟ್ಟೆ ಅಷ್ಟೇ ಸೀರಿಯಸ್ ಆಗಿ ತಗೋಬೇಡಿʼʼ ಎಂದು ಸಂಬರ್ಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಇದು ಜೆಡಿಎಸ್ ಕಾರ್ಯಕರ್ತರು ಮಾತ್ರವಲ್ಲ ಇತರರನ್ನೂ ಕೆರಳಿಸಿತ್ತು.
ಜೆಡಿಎಸ್ ಕಾನೂನು ವಿಭಾಗದಿಂದ ದೂರು
ದೇವೇಗೌಡರ ಅವಹೇಳನವನ್ನು ಖಂಡಿಸಿರುವ ಜೆಡಿಎಸ್ ಪ್ರಶಾಂತ್ ಸಂಬರ್ಗಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪೊಲೀಸರಿಗೆ ದೂರು ನೀಡಿದೆ. ಜೆಡಿಎಸ್ ಲೀಗಲ್ ಸೆಲ್‌ನಿಂದ ಡಿಸಿಪಿ ಶ್ರೀನಿವಾಸಗೌಡಗೆ ದೂರು ಸಲ್ಲಿಸಲಾಗಿದೆ. ಈ ಪ್ರಕರಣ ಮಾತ್ರವಲ್ಲ, ಸಂಬರ್ಗಿ ಈ ಹಿಂದೆಯೂ ಜೆಡಿಎಸ್ ನಾಯಕರನ್ನು ಅವಹೇಳನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ಒಂದು ಕಡೆ ಪೊಲೀಸರಿಗೆ ದೂರು ನೀಡಿದ್ದು, ಇನ್ನೊಂದು ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬಂದ ಆಕ್ರೋಶದ ಮಾತುಗಳಿಂದ ಕಂಗಾಲಾದ ಪ್ರಶಾಂತ್ ಸಂಬರ್ಗಿ ಬಳಿಕ ಕ್ಷಮೆ ಕೋರಿದ್ದಾರೆ.
ದೇವೇಗೌಡರು ನನಗೆ ತಂದೆ ಸಮಾನ
ʻʻನನ್ನ ತಂದೆ ಸಮಾನರಾದ ಶ್ರೀ ಎಚ್.ಡಿ. ದೇವೇಗೌಡರ ಬಗ್ಗೆ ನನಗೆ ಅಪಾರವಾದ ಗೌರವ ಇದೆ. ನಾನು ಒಂದು ಉದಾಹರಣೆಯಾಗಿ ದೇವೇಗೌಡ ಎಂಬ ಹೆಸರನ್ನು ಬಳಸಿದೆನೇ ಹೊರತು ಯಾವುದೇ ದುರುದ್ದೇಶ ಇರಲಿಲ್ಲ. ಇದು ಯಾವುದೇ ರೀತಿಯಲ್ಲೂ ಅವರ ಗೌರವಕ್ಕೆ ಚ್ಯುತಿ ತರಲು ಬಳಸಲಿಲ್ಲ. ಇದರಿಂದ ಯಾರಿಗಾದರೂ ಅಸಮಾಧಾನವಾಗಿದ್ದರೆ ನನ್ನ ಕಳಕಳಿಯ ಕ್ಷಮೆ ಇರಲಿʼʼ ಎಂದು ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಕ್ಷಮೆ ಯಾಚನೆ ಮಾಡಿದ್ದಾರೆ.
ಚಪ್ಪಲಿಯೇಟಿನ ಪ್ರತಿಕ್ರಿಯೆ ನೀಡಿದ್ದ ಚಂದ್ರಚೂಡ್
ಸಂಬರ್ಗಿ ಪೋಸ್ಟ್‌ಗೆ ಪತ್ರಕರ್ತ, ಕಲಾವಿದ ಚಂದ್ರಚೂಡ್ ಅವರು ತೀವ್ರ ತಿರುಗೇಟು ನೀಡಿದ್ದು ಭಾರಿ ಸುದ್ದಿಯಾಗಿದೆ. ಸಂಬರ್ಗಿಯ ಪ್ರತಿಪದಕ್ಕೂ ಪ್ರತಿಯೇಟು ನೀಡಿದ ಚಂದ್ರಚೂಡ್ ನಾಯಿಗೆ ಹೊಡೆದಂತೆ, ಚಪ್ಪಲಿಯೇಟು, ಎದೆಗೆ ಒದೆಯಬೇಕು ಎಂಬಿತ್ಯಾದಿ ಪದಗಳನ್ನು ಬಳಸಿ ತರಾಟೆಗೆ ತೆಗೆದುಕೊಂಡಿದ್ದರು. ಚಂದ್ರಚೂಡ್ ಮತ್ತು ಸಂಬರ್ಗಿ ಬಿಗ್ ಬಾಸ್ ಸೀಸನ್ 8ರಲ್ಲಿ ಜತೆಯಾಗಿದ್ದರು.
ಚಂದ್ರಚೂಡ್ ಪೋಸ್ಟ್‌ನಲ್ಲಿ ಏನಿತ್ತು?
ಇನ್ನೂ ಸಿಂಪ್ಲೆಸ್ಟ್ ಆಗಿ ಹೇಳಬೇಕೆಂದರೆ ಕಿತ್ತೂರು ರಾಣಿ ಚನ್ನಮ್ಮನ ಮೊಮ್ಮಗ ಎಂದು ಹೇಳಿಕೊಂಡು ಚಪ್ಪಲಿಯಲ್ಲಿ ಏಟು ತಿಂದ ಅಂದರೆ ಪ್ರಶಾಂತ ಸಂಬರ್ಗಿಗೆ ಮಾತ್ರ ನಾಯಿಗೆ ಹೊಡೆದಂತೆ ಹೊಡೆದರು ಎಂದರ್ಥವೇ ಹೊರತು ಸಂಬರ್ಗಿಯೆಂಬ ಊರಿನವರಿಗೂ ಇದಕ್ಕೂ ವ್ಯತ್ಯಾಸ ಇದೆ.
ಮೊದಲನೆಯದರಲ್ಲಿ ಪ್ರಶಾಂತ ಸಂಬರ್ಗಿ ಯನ್ನು ನಾಯಿಗಳಿಗೆ ಹೋಲಿಸಿದ್ದಕ್ಕೆ ನಾಯಿಗಳೆಲ್ಲ ಕೇಸು ಹಾಕಬೇಕೂ ಅವಮಾನವಾಗಿದ್ದಕ್ಕೆ .ಎರಡನೆಯದರಲ್ಲಿ ಸಂಬರ್ಗಿಯಲ್ಲಿರುವ ಎಲ್ಲ ವರ್ಗದ ಜನ ಇವನನ್ನ ಕರೆದು ಕಿತ್ತೂರು ರಾಣಿ ಚನ್ನಮ್ಮನವರ ಶೈಲಿಯಲ್ಲಿಯೇ ಎದೆಗೊದೆಯಬೇಕೂ…
ಸುಮ್ಮನೆ ಉದಾಹರಣೆ ಅಷ್ಟೇ ಅಲ್ಲ ಸೀರಿಯಸ್ ಆಗಿ ತಗೆದುಕೊಳ್ಳುವ ಕಾಲವಂತೂ ಬಂದಿದೆ. ತಗೊಂಡಾಗಿದೆ ಸಂಬಂಧಪಟ್ಟವರು. ʻಬೆವರುಹಿಡುಕʼ ಸಾರ್ವಜನಿಕ ಜೀವನದಲ್ಲಿ ತುಟಿ ಮತ್ತೊಂದು ಬಿಚ್ಚುವಾಗ ಎಚ್ಚರಿಕೆ ಕಲಿಯಬೇಕು, ಕಲಿಸಬೇಕು- ಎಂದು ಬರೆದಿದ್ದರು ಚಂದ್ರಚೂಡ್
ಇದನ್ನೂ ಓದಿ :Prashant Sambargi : ರಾಹುಲ್ ಟೀಕಿಸುವ ಭರದಲ್ಲಿ ದೇವೇಗೌಡರಿಗೆ ಅಪಮಾನ ಮಾಡಿದ ಸಂಬರ್ಗಿ!; ಜೆಡಿಎಸ್‌ನಿಂದ ದೂರು
ಕರ್ನಾಟಕ
RR nagar Police: ಡಿಸಿಪಿ ನೈಟ್ ರೌಂಡ್ಸ್ ವೇಳೆ ಕೇಳಿತು ಗೊರಕೆ ಸದ್ದು; ಠಾಣೆಯಲ್ಲೇ ನಿದ್ರೆಗೆ ಜಾರಿದ್ದ ಎಎಸ್‌ಐ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು
ನೈಟ್ ಡ್ಯೂಟಿಯಲ್ಲಿದ್ದ ಎಎಸ್‌ಐವೊಬ್ಬರು (ASI) ನಿದ್ದೆಗೆ ಜಾರಿದ್ದು, ಠಾಣೆಯನ್ನೇ ಮನೆಯನ್ನಾಗಿಸಿಕೊಂಡ ಘಟನೆ ನಡೆದಿದೆ. ಆರ್.ಆರ್.ನಗರ (RR nagara police) ಪೊಲೀಸ್ ಠಾಣೆಗೆ ಸರ್ಪೈಸ್ ವಿಸಿಟ್ ಕೊಟ್ಟ ಸಿಎಆರ್ ಡಿಸಿಪಿ ಅರುಣಗಿರಿ ಅವರಿಗೆ ಎಎಸ್‌ಐ ಗೊರಕೆ ಶಬ್ಧ ಸ್ವಾಗತ ಕೋರಿದೆ.
ಬೆಂಗಳೂರು: ಇಲ್ಲಿನ ಆರ್.ಆರ್ ನಗರ ಪೊಲೀಸ್ ಠಾಣೆಗೆ (RR nagar Police) ದಿಢೀರ್ ಭೇಟಿ ನೀಡಿದ ಸಿಎಆರ್ ಡಿಸಿಪಿ ಅರುಣಗಿರಿ ಕ್ಷಣಕಾಲ ಶಾಕ್ ಆಗಿದ್ದರು. ಡಿಸಿಪಿ ನೈಟ್ ರೌಂಡ್ಸ್ ವೇಳೆ ನೈಟ್ ಡ್ಯೂಟಿಯಲ್ಲಿದ್ದ ಎಎಸ್‌ಐ ನಿದ್ರೆಗೆ ಜಾರಿದ್ದರು. ಆರ್.ಆರ್ ನಗರ ಪೊಲೀಸ್ ಠಾಣೆಯ ಎಎಸ್‌ಐ ಕಾಂತರಾಜು ಅವರ ಕೆಲಸದ ಪರಿ ಕಂಡು ಸಿಎಆರ್ ಡಿಸಿಪಿ ಅರುಣಗಿರಿ ಕಿಡಿಕಾರಿದರು.
ಸಿಎಆರ್ ಡಿಸಿಪಿಯಾಗಿರುವ ಅರುಣಗಿರಿಯವರು ನೈಟ್ ರೌಂಡ್ಸ್ ವೇಳೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಎಎಸ್‌ಐ ಕಾಂತರಾಜು ಅವರು ಆರಾಮಾಗಿ ನಿದ್ದೆ ಮಾಡುತ್ತಿದ್ದರು.ಇದನ್ನು ಕಂಡ ಡಿಸಿಪಿ ಅರುಣಗಿರಿಯವರು ಮಲಗಿರುವ ಫೋಟೊ ತೆಗೆದುಕೊಂಡಿದ್ದಾರೆ.
ನಂತರ ಮೇಲಾಧಿಕಾರಿಗಳ ಸಂದರ್ಶನ ಪುಸ್ತಕದಲ್ಲಿ ಎಎಸ್‌ಐ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಿ ಎಂದು ಉಲ್ಲೇಖಿಸಿದ್ದಾರೆ. ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು, ಈ ಸಮಯದಲ್ಲಿ ಪೊಲೀಸರು ಹೆಚ್ಚು ಅಲರ್ಟ್ ಆಗಿ ಇರಬೇಕು. ಅಪರಾಧ ಕೃತ್ಯಗಳ ಮೇಲೆ ಕಣ್ಣಿಡಬೇಕಾದ ಪೊಲೀಸರೇ ನಿದ್ದೆಗೆ ಜಾರಿದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.
ಆರ್.ಆರ್ ನಗರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಿರುವ ಕಾರಣ, ಇಲ್ಲಿನ ಪೊಲೀಸ್ ಸಿಬ್ಬಂದಿ ಮೈಎಲ್ಲ ಕಣ್ಣಾಗಿ ಇರಬೇಕು. ಈ ಕೂಡಲೇ ಎಎಸ್‌ಐ ಕಾಂತರಾಜು ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ. ಇದು ಠಾಣೆಯ ಇತರೆ ಸಿಬ್ಬಂದಿಗೂ ಎಚ್ಚರಿಕೆ ನೀಡಿದಂತಾಗುತ್ತದೆ ಎಂದು ಉಲ್ಲೇಖಸಿದ್ದಾರೆ.
ತೀರ್ಥಹಳ್ಳಿ ಮೀನು ಮಾರುಕಟ್ಟೆಯಲ್ಲಿ ರಕ್ತದ ಮಡುವಿನಲ್ಲಿ ಪೊಲೀಸ್ ಶವ ಪತ್ತೆ; ಕೊಲೆ ಶಂಕೆ
ಶಿವಮೊಗ್ಗ: ಇಲ್ಲಿನ ತೀರ್ಥಹಳ್ಳಿಯಲ್ಲಿ ಪೊಲೀಸ್ ಕಾನ್‌ಸ್ಟೆಬಲ್ (Police Constable) ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ ಆಗಿದೆ. ತೀರ್ಥಹಳ್ಳಿ ಪಟ್ಟಣದ ಮೀನು ಮಾರುಕಟ್ಟೆಯಲ್ಲಿ ರಕ್ತದ ಮಡುವಿನಲ್ಲಿ ಪೇದೆ ಪೂರ್ಣೇಶ್ ಎಂಬವರ ಶವ ಪತ್ತೆ ಆಗಿದೆ.
ಪೂರ್ಣೇಶ್ ಅವರ ತಲೆಯ ಮೇಲೆ ಕಲ್ಲು ಹೊತ್ತು ಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆಗುಂಬೆ, ತೀರ್ಥಹಳ್ಳಿ, ಮಾಳೂರು, ಕುಂಸಿಯಲ್ಲಿ ಪೂರ್ಣೇಶ್ ಸೇವೆ ಸಲ್ಲಿಸಿದ್ದರು. ಆದರೆ ಇತ್ತೀಚಿಗೆ ಮದ್ಯ ವ್ಯಸನಿಯಾಗಿದ್ದ ಪೂರ್ಣೇಶ್, ಕೆಲಸದಿಂದ ವಜಾಗೊಂಡಿದ್ದರು ಎಂದು ತಿಳಿದುಬಂದಿದೆ.
ಶುಕ್ರವಾರ ತಡರಾತ್ರಿ ಹತ್ಯೆ ನಡೆದಿರುಬಹುದೆಂದು ಅಂದಾಜಿಸಲಾಗಿದ್ದು, ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ವೈಯಕ್ತಿಕ ಕಲಹದಿಂದಾಗಿ ಹತ್ಯೆಯಾಗಿರಬಹುದೆಂದು ಶಂಕಿಸಲಾಗಿದೆ. ಸದ್ಯ ತೀರ್ಥಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಕರ್ನಾಟಕ
Assault Case: ಹಳೇ ದ್ವೇಷ: ಮಚ್ಚಿನಿಂದ ತಂದೆ-ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಗುಂಪು
ಹಳೆಯ ದ್ವೇಷದಿಂದ ಕ್ಯಾತೆ ತೆಗೆದ ಗ್ರಾಮದ ಕೆಲ ಯುವಕರು ತಂದೆ-ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು: ಹಳೇ ದ್ವೇಷಕ್ಕೆ ಏಳು ಜನರ ಗುಂಪೊಂದು ತಂದೆ-ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಂಜನಗೂಡು ತಾಲೂಕಿನ ಕುರಹಟ್ಟಿ ಗ್ರಾಮದಲ್ಲಿ ನಡೆದಿದೆ. ಗುರುಸಿದ್ದಯ್ಯ, ಮಹೇಶ್ ಎಂಬವರ ಹಲ್ಲೆಗೊಳಗಾದವರು.
ಗುರುಸಿದ್ದಯ್ಯ ಮನೆಯ ಪಡಸಾಲೆಯಲ್ಲಿ ಮಲಗಿದ್ದಾಗ, ಈ ಏಳು ಜನರ ಗುಂಪು ಏಕಾಏಕಿ ಬಂದವರೇ ಕ್ಷುಲ್ಲಕ ಕಾರಣಕ್ಕೆ ಜಗಳ ಶುರು ಮಾಡಿದ್ದಾರೆ. ಮಾತಿನ ಚಕಮಕಿ ನಡುವೆ ಕಿಡಿಗೇಡಿಗಳು ಮಚ್ಚು, ದೊಣ್ಣೆಯಿಂದ ಗುರುಸಿದ್ದಯ್ಯರ ತಲೆಗೆ ಬಲವಾಗಿ ಹೊಡೆದಿದ್ದಾರೆ.
ಇತ್ತ ಗುರುಸಿದ್ದಯ್ಯ ಗಂಭೀರವಾಗಿ ಗಾಯಗೊಂಡು ಕೆಳಗೆ ಬಿದ್ದಿರುವುದನ್ನು ಕಂಡ ಮಗ ಮಹೇಶ್ ಪ್ರಶ್ನಿಸಲು ಮುಂದಾಗಿದ್ದಾರೆ. ಈ ವೇಳೆ ಅವರಿಗೂ ಮಚ್ಚಿನಿಂದ ತಲೆ ಮತ್ತು ಕೈಗೆ ಹೊಡೆದು ಹಲ್ಲೆ ಮಾಡಿದ್ದಾರೆ. ತೀವ್ರ ಗಾಯಗೊಂಡಿದ್ದ ಅವರನ್ನೂ ಕೂಡಲೇ ನಂಜನಗೂಡು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: Wall collapse: ತಡೆಗೋಡೆ ನಿರ್ಮಾಣ ವೇಳೆ ಗುಡ್ಡ ಕುಸಿತ; ಮಣ್ಣಿನಡಿ ಸಿಲುಕಿ ಮೂವರು ಕಾರ್ಮಿಕರು ಮೃತ್ಯು
ಗ್ರಾಮದ ಸಿದ್ದರಾಜು, ಮೂರ್ತಿ, ನಾಗೇಶ್, ಸಿದ್ದು, ಕೆಂಪ, ಬಸವ ಹಾಗೂ ಪ್ರವೀಣ ಎಂಬುವವರು ಹಲ್ಲೆ ನಡೆಸಿದವರು. ಇವರ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಗುರುಸಿದ್ದಯ್ಯರ ಪತ್ನಿ ನಮ್ಮ ಕುಟುಂಬಕ್ಕೆ ರಕ್ಷಣೆ ಕೊಡಿ ಎಂದು ಕಣ್ಣೀರು ಹಾಕಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
-
ಅಂಕಣ20 hours ago
Ramzan Fasting : ರಂಜಾನ್ ವ್ರತಾಚರಣೆಗಿದೆ ವೈಜ್ಞಾನಿಕ ದೃಷ್ಟಿಕೋನ; ಆರೋಗ್ಯ ವರ್ಧನೆಗೆ ಇದು ಎಷ್ಟು ಸಹಕಾರಿ?
-
ಅಂಕಣ21 hours ago
ರಾಜ ಮಾರ್ಗ ಅಂಕಣ : ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಆರೇ ದಿನ ಓದಿದರೂ ಪಾಸ್ ಆಗಬಹುದು! ಹಾಗಿದ್ರೆ ಏನು ಮಾಡಬೇಕು?
-
ಕರ್ನಾಟಕ20 hours ago
Modi In Karnataka: ಕೆಆರ್ ಪುರ ಮೆಟ್ರೋ ಉದ್ಘಾಟನೆಗೆ ಮೋದಿ ಆಗಮನ; ಎಲ್ಲೆಲ್ಲಿ ವಾಹನ ನಿರ್ಬಂಧ, ಮಾರ್ಗ ಬದಲು?
-
ಅಂಕಣ22 hours ago
ವಿಸ್ತಾರ ಅಂಕಣ: ಭಾರತಕ್ಕೆ ಈಗ ಬೇಕಿರುವುದು ʼಈಸ್ ಆಫ್ ಡೂಯಿಂಗ್ ಪಾಲಿಟಿಕ್ಸ್ʼ ಸೂಚ್ಯಂಕ
-
ಕರ್ನಾಟಕ19 hours ago
Congress Ticket list : ಸಿದ್ದರಾಮಯ್ಯ ವರುಣ ಕೇಳಿದ್ರು ಕೊಟ್ವಿ, ಕೋಲಾರ ಕೇಳಿದ್ದರೆ ಅದನ್ನೇ ಕೊಡುತ್ತಿದ್ದೆವು; ಡಿ.ಕೆ. ಶಿವಕುಮಾರ್
-
ಕರ್ನಾಟಕ19 hours ago
Modi In Karnataka: ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಪ್ರವಾಸದ ಇಂಚಿಂಚು ಮಾಹಿತಿ ಇಲ್ಲಿದೆ
-
ಕರ್ನಾಟಕ14 hours ago
Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ
-
ಅಂಕಣ15 hours ago
ಹೊಸ ಅಂಕಣ: ಸೈಬರ್ ಮಿತ್ರ: ಜಾಣರಾಗಿ, ಜಾಗರೂಕರಾಗಿರಿ!