Site icon Vistara News

School Bus Accident | 3 ವರ್ಷದ ಮಗು ಮೇಲೆ ಹರಿದ ಖಾಸಗಿ ಶಾಲಾ ಬಸ್ ; ತಂದೆ ಕಣ್ಣೆದುರೇ ಹಾರಿ ಹೋಯ್ತು ಪ್ರಾಣ

School Bus Accident 3years old baby girl death

ಯಾದಗಿರಿ: ಇಲ್ಲಿನ ಗುರುಮಿಠಕಲ್‌ನ‌ ಲಕ್ಷ್ಮಿನಗರದಲ್ಲಿ ಖಾಸಗಿ ಶಾಲಾ ಬಸ್ ಹರಿದು (school bus accident) 3 ವರ್ಷದ ಹೆಣ್ಣುಮಗುವೊಂದು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಗುರುವಾರ ಸಂಜೆ 5 ಗಂಟೆಗೆ ನಡೆದಿದೆ. ಮನಸ್ವಿನಿ (3) ಮೃತ ದುರ್ದೈವಿ.

ಮನಸ್ವಿನಿ (3) ಮೃತ ದುರ್ದೈವಿ

ಮನಸ್ವಿನಿ ತಂದೆ ವೆಂಕಟಪ್ಪ ಚುಟ್ಟು ಗುರುಮಿಠಕಲ್ ಬಸ್ ಡಿಪೋದಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದರು.‌ ಇವರು ‌ಪತ್ನಿ ಮತ್ತು ಮಕ್ಕಳ ಜತೆಗೆ ಲಕ್ಷ್ಮಿನಗರದಲ್ಲಿರುವ ತಮ್ಮ ಮಾವನ ಮನೆಗೆ ಬಂದಿದ್ದರು. ಈ ವೇಳೆ ಮಗು ಆಟವಾಡುತ್ತಾ ಮನೆಯಿಂದ ಹೊರಗೆ ಹೋಗಿದ್ದು, ಆಯತಪ್ಪಿ ಕೆಳಗೆ ಬಿದ್ದಿದೆ. ಮನೆಯು ರಸ್ತೆಗೆ ಹೊಂದಿಕೊಂಡು ಇದೆ. ಮಗು ಬೀಳುವುದಕ್ಕೂ ಅತ್ತ ಕಡೆಯಿಂದ ಶಾಲೆ ಬಸ್‌ ಬರುವುದಕ್ಕೂ ಒಂದೇ ಸಮಯವಾಗಿದ್ದು, ಮಗುವಿನ ತಲೆ ಮೇಲೆಯೇ ಬಸ್ಸಿನ ಚಕ್ರ ಹರಿದಿದೆ. ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ತಂದೆ ಕಣ್ಣೆದುರೇ ಬಾಲಕಿಯ ತಲೆ ನುಚ್ಚುನೂರಾಗಿದ್ದು, ಮಗಳ ಅಪಘಾತ ಕಂಡು ದಿಗ್ರ್ಬಾಂತರಾಗಿದ್ದಾರೆ.

ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಆಸ್ಪತ್ರೆ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗುರುಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Suicide Case | ಭದ್ರಾವತಿಯಲ್ಲಿ ಬಸ್‌ನಿಂದ ಹಾರಿದ ವ್ಯಕ್ತಿ; ವಿಜಯನಗರದಲ್ಲಿ ಸಾಲ ಬಾಧೆಗೆ ವಿಷ ಸೇವಿಸಿ ರೈತ ಆತ್ಮಹತ್ಯೆ

Exit mobile version