ಮಂಡ್ಯ: ಇಲ್ಲಿನ ಮೇಲುಕೋಟೆಯಲ್ಲಿ ಪ್ರವಾಸಕ್ಕಾಗಿ (School Trip) ಬಂದಿದ್ದ ವಿದ್ಯಾರ್ಥಿಗಳ ತಲೆ ಮೇಲೆ ಮರವೊಂದು ಬಿದ್ದ ಘಟನೆ ನಡೆದಿದೆ. ಮೇಲುಕೋಟೆಯ ಯೋಗ ನರಸಿಂಹಸ್ವಾಮಿ ದರ್ಶನಕ್ಕೆ ಬೆಟ್ಟ ಹತ್ತುವಾಗ ಈ ದುರ್ಘಟನೆ ಸಂಭವಿಸಿದೆ. ಈ ವೇಳೆ ಮೂವರು ವಿದ್ಯಾರ್ಥಿಗಳು ಗಾಯಗಳಾಗಿದ್ದು, ಇವರಲ್ಲಿ ಒಬ್ಬ ವಿದ್ಯಾರ್ಥಿ ಕಾಲಿಗೆ ಗಂಭೀರವಾಗಿ ಪೆಟ್ಟಾಗಿದೆ.
ನಂಜನಗೂಡು ಮೂಲದ ನಿಶಾಂತ್ ನಾಯಕ್, ವರುಣ್ ಮತ್ತು ಯೋಗೇಶ್ ಗಾಯಗೊಂಡವರು. ನಂಜನಗೂಡಿನ ಲಯನ್ಸ್ ಶಾಲೆ ವಿದ್ಯಾರ್ಥಿಗಳು ಶನಿವಾರ ಮೇಲುಕೋಟೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಏಕಾಏಕಿ ಮರ ಬಿದ್ದಿದೆ. ಪರಿಣಾಮ ಒಬ್ಬ ವಿದ್ಯಾರ್ಥಿಯ ಕಾಲಿಗೆ ಗಂಭೀರ ಪೆಟ್ಟಾಗಿದ್ದರೆ, ಮತ್ತಿಬ್ಬರಿಗೆ ಮುಖದ ಮೇಲೆ ಗಾಯಗಳಾಗಿವೆ.
ಗಾಯಗೊಂಡವರಿಗೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮೇಲುಕೋಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಮರವೂ ಒಣಗಿದ್ದ ಕಾರಣದಿಂದಾಗಿ ಕೆಳಗೆ ಬಿದ್ದು ಈ ಅವಘಡ ಸಂಭವಿಸಿದೆ. ಸ್ಥಳೀಯರು ಹಾಗೂ ಪ್ರವಾಸಿಗರು ಈ ಬಗ್ಗೆ ಆತಂಕಗೊಂಡಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇಲ್ಲವೇ ಅರಣ್ಯ ಇಲಾಖೆಯವರು ಒಣ ಮರಗಳು, ರಂಬೆ, ಕೊಂಬೆಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Ashika Ranganath | ಮದ್ಯದ ಬಾಟಲ್‌ನೊಂದಿಗೆ ಆಶಿಕಾ ರಂಪಾಟ: ನಿರ್ದೇಶಕ ಪವನ್ ಒಡೆಯರ್ ಹೇಳಿದ್ದೇನು?