Site icon Vistara News

ಅ.17ರಿಂದ ಶಾಲೆಗಳ ಮರು ಆರಂಭ; ಸಂಕಲನಾತ್ಮಕ ಪರೀಕ್ಷೆಗಳ ಮುಂದೂಡಿಕೆ

ಶಾಲೆಗಳ

ಬೆಂಗಳೂರು: ಶಾಲೆಗಳ ಮಧ್ಯಂತರ ರಜೆ ಅವಧಿಯನ್ನು ಈ ಮೊದಲೇ ನಿರ್ಧರಿಸಿದಂತೆ ಅ.16ಕ್ಕೆ ಅಂತ್ಯಗೊಳಿಸಿರುವುದರಿಂದ ರಾಜ್ಯದಲ್ಲಿ ಅ.೧೭ರಿಂದ ಶಾಲೆಗಳು ಮರು ಆರಂಭವಾಗಲಿವೆ. ಹಾಗೆಯೇ ಪರೀಕ್ಷಾ ಸಿದ್ಧತೆಗೆ ಕಾಲಾವಕಾಶ ಅಗತ್ಯವಿರುವ ಹಿನ್ನೆಲೆಯಲ್ಲಿ ಅ.೧೭ಕ್ಕೆ ನಿಗದಿಯಾಗಿದ್ದ ಸಂಕಲನಾತ್ಮಕ ಪರೀಕ್ಷೆಗಳನ್ನು ಮುಂದೂಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ದಸರಾ ರಜೆಯನ್ನು 15 ದಿನಗಳಿಗೆ ಸೀಮಿತಗೊಳಿಸಿ, ಅ.17ರಿಂದಲೇ ಶಾಲೆಗಳನ್ನು ಪುನಾರಂಭಿಸಲು ನಿರ್ಧರಿಸಲಾಗಿದೆ. ಕಲಿಕಾ ಪ್ರಕ್ರಿಯೆ ಅನುಪಾಲನಾ ಕೊರತೆ ಮತ್ತು ಮಕ್ಕಳಿಗೆ ಪರೀಕ್ಷೆಗೆ ಮಾನಸಿಕವಾಗಿ ಸಿದ್ಧವಾಗಲು ಕಾಲಾವಕಾಶ ಬೇಕಿರುವುದರಿಂದ 1ರಿಂದ 10ನೇ ತರಗತಿಗೆ ಅ.17ರಿಂದ 25ರವರೆಗೆ ನಡೆಸಲು ಉದ್ದೇಶಿಸಿದ್ದ ಮೊದಲ ಸಂಕಲನಾತ್ಮಕ ಪರೀಕ್ಷೆಗಳನ್ನು ಪರಿಷ್ಕೃತ ವೇಳಾಪಟ್ಟಿಯಂತೆ ನವೆಂಬರ್ 3ರಿಂದ 10ಕ್ಕೆ ಮುಂದೂಡಲಾಗಿದೆ.

ಇದನ್ನೂ ಓದಿ | ಶಿಕ್ಷಣ ಇಲಾಖೆಯ ಹೊಸ ವೆಬ್‌ ಶುರು; ಶಿಕ್ಷಣ ಸಚಿವರಿಗೆ ನೇರವಾಗಿ ಪತ್ರ ಬರೆಯಲು ಅವಕಾಶ

Exit mobile version