ಬೆಂಗಳೂರು: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಅಂತಿಮ ಪಟ್ಟಿ ಸಿದ್ಧತೆ ಮಾಡುವಲ್ಲಿ ನಿರತವಾಗಿವೆ. ಈ ನಡುವೆ ನಿಷೇಧಿತ ಪಿಎಫ್‌ಐ ಸಂಘಟನೆಯ ರಾಜಕೀಯ ಘಟಕ ʼಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾʼ (ಎಸ್‌ಡಿಪಿಐ), 43 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದ್ದು, ಈ ಪೈಕಿ ಮೊದಲ ಹಂತದಲ್ಲಿ (SDPI Candidate List) 10 ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ.
ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂಕೆ ಫೈಝಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. 43 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದು, ಈ ಪೈಕಿ 10 ಅಭ್ಯರ್ಥಿಗಳ ಹೆಸರು ಅಂತಿಮ ಆಗಿದೆ. ಈ ಬಾರಿಯ ಚುನಾವಣೆ ಬಹಳ ನಿರ್ಣಾಯಕವಾದುದು ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಯಾರೇ ಗೆದ್ದರೂ ಸರ್ಕಾರ ಬಿಜೆಪಿಯದ್ದು ಎನ್ನುವಂತಾಗಿದೆ. ಕಳೆದ ಬಾರಿ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಆಪರೇಷನ್ ಕಮಲದ ಮೂಲಕ ಖರೀದಿಸಿತು. ಬಟ್ಟೆ ಖರೀದಿ ಮಾಡುವ ಹಾಗೆ ಶಾಸಕರನ್ನು ಬಿಜೆಪಿ ಖರೀದಿ ಮಾಡುತ್ತಿದೆ. ಚುನಾವಣೆ ಸಮಯದಲ್ಲಿ ಬಿಜೆಪಿ ಕೋಮುವಾದದ ಬಗ್ಗೆ ಪ್ರಚಾರ ಮಾಡುತ್ತದೆ ಎಂದು ಆರೋಪಿಸಿದರು.
ಇದನ್ನೂ ಓದಿ | Illegal cash found : ಕಾಂಗ್ರೆಸ್ ವಿಧಾನಸೌಧವನ್ನು ಬ್ಯಾಂಕ್ ಮಾಡಿಕೊಂಡಿತ್ತು; ಸಿಎಂ ಬಸವರಾಜ ಬೊಮ್ಮಾಯಿ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಈಗಾಗಲೇ ತಮ್ಮ ಅಜೆಂಡಾವನ್ನು ಸ್ಪಷ್ಟಪಡಿಸಿದ್ದಾರೆ. ರಸ್ತೆ ಗುಂಡಿ, ಚರಂಡಿ ಸಮಸ್ಯೆ ಎಲ್ಲ ಬಿಟ್ಟು ಲವ್ ಜಿಹಾದ್ ಕಡೆ ಗಮನಕೊಡಲು ಹೇಳಿದ್ದಾರೆ. ಎಸ್‌ಡಿಪಿಐ ಇಡೀ ದೇಶದಲ್ಲಿ ಪರ್ಯಾಯ ರಾಜಕೀಯ ಶಕ್ತಿಯಾಗಿ ತಲೆ ಎತ್ತಿದೆ. ಮುಂದಿನ ಚುನಾವಣೆಯಲ್ಲಿ ಇದು ಮತ್ತೊಮ್ಮೆ ಸಾಬೀತಾಗಲಿದೆ ಎಂದು ತಿಳಿಸಿದರು.
ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ
- ಅಬ್ದುಲ್ ಮಜೀದ್ – ನರಸಿಂಹರಾಜ
- ಭಾಸ್ಕರ್ ಪ್ರಸಾದ್ – ಪುಲಕೇಶಿನಗರ
- ಅಬ್ದುಲ್ ಹನ್ನಾನ್ – ಸರ್ವಜ್ಞ ನಗರ
- ಇಲ್ಯಾಸ್ ಮಹಮ್ಮದ್ – ಬಂಟ್ವಾಳ
- ಮುಲ್ಕಿ ಮೂಡಬಿದ್ರೆ – ಅಲ್ಫಾನ್ಸೋ ಫ್ರಾಂಕೋ
- ಅಕ್ಬರ್ – ಬೆಳ್ತಂಗಡಿ
- ಹನೀಫ್ – ಕಾಪು
- ಇಸ್ಮಾಯಿಲ್ ಜಬೀವುಲ್ಲಾ – ದಾವಣಗೆರೆ ಸೌತ್
- ಬಾಳೆಕಾಯಿ ಶ್ರೀನಿವಾಸ್ – ಚಿತ್ರದುರ್ಗ
- ನಜೀರ್ ಖಾನ್ – ವಿಜಯನಗರ
ಇದನ್ನೂ ಓದಿ | Karnataka Election : ಪಂಚರತ್ನ ಯಾತ್ರೆಯಲ್ಲಿ ಕಾಣಿಸದ ರೇವಣ್ಣ ಕುಟುಂಬ; ಭಿನ್ನರ ಜತೆ ಶಕ್ತಿ ಪ್ರದರ್ಶನ ಮಾಡಿದ ಸೂರಜ್ ರೇವಣ್ಣ!