Site icon Vistara News

Security guard murdered | ಮನೆ ಕೆಲಸದವನಿಂದ ಕೊಲೆಯಾದ ಸೆಕ್ಯುರಿಟಿ ಗಾರ್ಡ್‌; ಆರೋಪಿ ಪರಾರಿ

Security guard murdered

ಬೆಂಗಳೂರು: ಇಲ್ಲಿನ ಕೋರಮಂಗಲದ 6ನೇ ಬ್ಲಾಕ್‌ನಲ್ಲಿ ಸೆಕ್ಯುರಿಟಿ ಸಿಬ್ಬಂದಿಯನ್ನು (Security guard murdered) ಹತ್ಯೆಗೈದು ಮನೆ ದರೋಡೆ ಮಾಡಿರುವ ಘಟನೆ ನಡೆದಿದೆ. ದಾವಣಗೆರೆ ಮೂಲದ ಕರಿಯಪ್ಪ ಕೊಲೆಯಾದವರು.

ಮನೆ ಕೆಲಸದವನೇ ಹತ್ಯೆ ನಡೆಸಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಅಸ್ಸಾಂ ಮೂಲದ ಬಹದ್ದೂರ್ ಎಂಬಾತ ಪರಾರಿ ಆಗಿದ್ದಾನೆ. ರಾಜಶೇಖರ್ ರೆಡ್ಡಿ ಎಂಬ ಬಿಲ್ಡರ್‌ಗೆ ಸೇರಿದ ಮನೆಯಲ್ಲಿ ಕೊಲೆ ಆಗಿದ್ದು, ಶನಿವಾರ ಇಡೀ ಕುಟುಂಬವು ಸಂಬಂಧಿಕರ ಮದುವೆಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್ ಕರಿಯಪ್ಪ ಮಾತ್ರ ಇದ್ದರು ಎಂದು ತಿಳಿದು ಬಂದಿದೆ.

ಇನ್ನು ಭಾನುವಾರ ಬೆಳಗ್ಗೆ ಅಡುಗೆ ಭಟ್ಟರು ಮನೆಗೆ ಬಂದಾಗ ಕೊಲೆ ವಿಚಾರ ಬಯಲಿಗೆ ಬಂದಿದ್ದು, ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೆಲಸಗಾರ ಬಹದ್ದೂರು ನಾಪತ್ತೆ ಆಗಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ.

ಇದನ್ನೂ ಓದಿ | Car Fire | ಚಲಿಸುತ್ತಿದ್ದಾಗಲೇ ಧಗ ಧಗನೆ ಹೊತ್ತಿ ಉರಿದ ಕಾರು; ಪ್ರಾಣಾಪಾಯದಿಂದ ಪಾರು

Exit mobile version