Site icon Vistara News

Seer suicide | ಬಂಡೆ ಸ್ವಾಮೀಜಿ ಆತ್ಮಹತ್ಯೆಯ ಹಿಂದೆ ಕೇಳಿಬರುತ್ತಿದೆ ಇನ್ನಷ್ಟು ಪ್ರಭಾವಿಗಳ ಹೆಸರು

swameeji suicide

ರಾಮನಗರ: ಬಂಡೆಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆಯ ನಿಜವಾದ ಸ್ಟೋರಿ ಈಗಾಗಲೇ ಬಯಲಾಗಿದೆ. ಬಸವಲಿಂಗ ಶ್ರೀಗಳ ದಾಯಾದಿಯಾಗಿದ್ದ ಕಣ್ಣೂರು ಸ್ವಾಮೀಜಿ ಮೃತ್ಯುಂಜಯ, ಸಿದ್ದಗಂಗಾ ಮಠದ ಆಪ್ತ ಬಳಗದಲ್ಲಿ ಎಂಎಂ ಅಂತಲೇ ಗುರುತಿಸಿಕೊಂಡ ಮಹಾದೇವಯ್ಯ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿನಿ ನೀಲಾಂಬಿಕೆ ಈಗಾಗಲೇ ಅರೆಸ್ಟ್ ಆಗಿ ಜೈಲು ಸೇರಿದ್ದಾರೆ. ಆದರೆ, ಈ ಪ್ರಕರಣದಲ್ಲಿ ಇನ್ನಷ್ಟು ಹೆಸರುಗಳು ಕೇಳಿಬರುತ್ತಿದ್ದು, ಅವರೆಲ್ಲರೂ ಜೈಲು ಸೇರುವ ಸಾಧ್ಯತೆಗಳು ದಟ್ಟವಾಗಿವೆ.

ಬಸವಲಿಂಗ ಶ್ರೀಗಳು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮೂರು ಪುಟಗಳ ಆತ್ಮಹತ್ಯೆ ನೋಟ್‌ ಬರೆದಿಟ್ಟಿದ್ದು, ಅದರಲ್ಲಿ ಒಬ್ಬ ಪ್ರಭಾವಿ ನಾಯಕರ ಹೆಸರು ಬರೆದಿದ್ದಾರೆ ಎನ್ನಲಾಗಿದೆ. ನಿಜವೆಂದರೆ, ಇಡೀ ಡೆತ್ ನೋಟ್‌ನಲ್ಲಿ ಬಸವಲಿಂಗ ಶ್ರೀಗಳು ಬರೆದಿರುವುದು ಇದೊಂದೇ ಹೆಸರು ಎನ್ನಲಾಗಿದೆ.

ಆ ಮೂರು ಪುಟಗಳ ಡೆತ್ ನೋಟ್‌ನಲ್ಲಿ ಪ್ರಭಾವಿ ನಾಯಕನಾಗಿರುವ ವೀರಶೈವ ಲಿಂಗಾಯಿತ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್ ಸಚ್ಚಿದಾನಂದ ಮೂರ್ತಿ ಹೆಸರನ್ನು ಬಸವಲಿಂಗ ಶ್ರೀಗಳು ಬರೆದಿಟ್ಟಿದ್ದಾರೆ.
ʻʻ500, 1000 ಸಹಾಯ ಕೇಳೋ‌ನೆಪದಲ್ಲಿ ಪರಿಚವಾದ ಮಹಿಳೆ ವಿಡಿಯೋ ಕಾಲ್ ಮೂಲಕ ಮಾತನಾಡುತ್ತ ನನ್ನ ವಿಡಿಯೋ ಮಾಡಿಕೊಂಡಿದ್ದಾಳೆ. ಇದನ್ನ‌ ಸೋಷಿಯಲ್ ಮೀಡಿಯಾದಲ್ಲಿ ಹರಿ ಬಿಡೋದಾಗಿ ನನಗೆ ಬೆದರಿಸಿ ಈ ಬಿ.ಎಸ್ ಸಚ್ಚಿದಾನಂದ ಮೂರ್ತಿ ಮೂಲಕ ಹರಿಬಿಡುವ ಪ್ರಯತ್ನ ನಡೆಸಿದರು. ಸಚ್ಚಿದಾನಂದ ಮೂರ್ತಿ ಕೂಡ ಪೂರ್ವಪರ ಯೋಚಿಸದೆ ಮಠದ ಭಕ್ತರಿಗೆ ಈ ವಿಡಿಯೊ ತೋರಿಸಿ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರುʼʼ ಎಂದು ಶ್ರೀಗಳು ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಇತ್ತೀಚಿಗೆ ಮಠದಿಂದ ಸಚ್ಚಿದಾನಂದಮೂರ್ತಿ ದೂರವಾಗಿದ್ದರು.

ಇನ್ನೊಬ್ಬ ಮಹಿಳೆಯ ಪಾಲುದಾರಿಕೆ?
ಈ ಪ್ರಕರಣದಲ್ಲಿ ಪಂಕಜಾ ಎಂಬ ಮತ್ತೊಬ್ಬ ಮಹಿಳೆಯನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಬಂಡೆ ಮಠದ ಎಸ್‌ಎಂಎಸ್‌ ಶಾಲೆಯ ಆಡಳಿತ ನೋಡಿಕೊಳ್ಳುತ್ತಿದ್ದವರು ಪಂಕಜಾ. ಇವರು ಈ ಕೃತ್ಯದಲ್ಲಿ ಭಾಗಿದಾರರು ಎಂಬ ಸಂಶಯ ಪೊಲೀಸರಿಗೆ ಇದೆ.

ಇದನ್ನೂ ಓದಿ | Seer suicide | ಬಸವಲಿಂಗ ಶ್ರೀಗಳ ಮೇಲೆ ದ್ವೇಷ ಸಾಧನೆಗೆ ಮುಂದಾಗಿದ್ದೇಕೆ ನೀಲಾಂಬಿಕೆ?

Exit mobile version