Site icon Vistara News

Self Harming : ಮದುವೆಯಾದ ಎರಡೇ ತಿಂಗಳಿಗೆ ತಾಯಿ ಮನೆಯಲ್ಲಿ ನವವಿವಾಹಿತೆ ಆತ್ಮಹತ್ಯೆ!

Self harming

ಹಾಸನ/ವಿಜಯಪುರ : ಹಾಸನ ಜಿಲ್ಲೆಯ (Hassan News) ಸಕಲೇಶಪುರ ತಾಲೂಕಿನ ಬಂದಿಹಳ್ಳಿ ಗ್ರಾಮದಲ್ಲಿ ನವವಿವಾಹಿತೆ (Self Harming) ನೇಣಿಗೆ ಶರಣಾಗಿದ್ದಾರೆ. ನಂದಿತಾ (23) ಆತ್ಮಹತ್ಯೆ ಮಾಡಿಕೊಂಡವರು.

ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿಯ ಕೂಡನಹಳ್ಳಿ ಗ್ರಾಮದ ಸೋಮಶೇಖರ್ ಜತೆಗೆ ಎರಡು ತಿಂಗಳ ಹಿಂದಷ್ಟೇ ನಂದಿತಾ ಮದುವೆಯಾಗಿದ್ದರು. ಗಂಡನ ಮನೆಯಲ್ಲಿ ಗಲಾಟೆಯಾಗಿ ವಾರದ ಹಿಂದೆ ತವರು ಮನೆಗೆ ಸೇರಿದ್ದರು ಎನ್ನಲಾಗಿದೆ.

ಇಂದು ನಂದಿತಾ ತನ್ನ ತಾಯಿ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣಗಳು ತಿಳಿದುಬಂದಿಲ್ಲ. ಸ್ಥಳಕ್ಕೆ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಮೃತ ಲೋಹಿತ್‌ ಸಕ್ರೇಣ್ಣವರ

ಮರಕ್ಕೆ ನೇಣು ಬಿಗಿದುಕೊಂಡ ಯುವಕ

ಇತ್ತ ವಿಜಯಪುರದ ಶಿವಗಿರಿ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ ಆಗಿದೆ. ಲೋಹಿತ್ ಸಕ್ರೇಣ್ಣವರ (28) ಮೃತಪಟ್ಟಿರುವ ದುರ್ದೈವಿ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಹಗ್ಗದಿಂದ ಮರಕ್ಕೆ ನೇಣು ಬಿಗಿದುಕೊಂಡು ಲೋಹಿತ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇದು ಆತ್ಮಹತ್ಯೆಯೊ ಅಥವಾ ಕೊಲೆಯೊ ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ. ಗೋಳಗುಮ್ಮಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಇಬ್ಬರು ಹೆಣ್ಣು ಮಕ್ಕಳ ಜತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ತಾಯಿಯೊಬ್ಬಳು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆಗೆ (Self Harming) ಯತ್ನಿಸಿದ್ದು, ಅಮ್ಮ ಮತ್ತು ಒಬ್ಬ ಮಗಳು ಪ್ರಾಣ (Mother and daughter dead) ಕಳೆದುಕೊಂಡಿದ್ದರೆ, ಒಬ್ಬ ಮಗಳು ಈಜಿ ದಡ ಸೇರಿ (One girl survived) ಬದುಕುಳಿದಿದ್ದಾಳೆ.

ಚಿಕ್ಕಬಳ್ಳಾಪುರ ತಾಲೂಕಿನ (Chikkaballapura News) ಸೇಟ್ ದಿನ್ನೆ ಬಳಿ‌ ಈ ಘಟನೆ ನಡೆದಿದೆ. 5 ವರ್ಷದ ಹೆಣ್ಣು‌ ಮಗು ಶ್ರೀನಿಧಿ ಹಾಗೂ ತಾಯಿ ನಾಗಮ್ಮ (39) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಏಳು ವರ್ಷದ ಮಗು ಗಂಗೋತ್ರಿ ನೀರಿನಲ್ಲಿ ಮುಳುಗುವಾಗ ಭಯವಾಗಿ ಕೈಕಾಲು ಬಡಿದು ಈಜಿ ದಡ ಸೇರಿ ಬದುಕುಳಿದಿದ್ದಾಳೆ.

ಇದನ್ನೂ ಓದಿ: Viral Video: ಇದು ಕೆನ್ನೆಗೆ ಮುತ್ತನ್ನಿಟ್ಟು ಮುದ್ದಾಡುವ ಬೆಕ್ಕು; ವೈರಲ್‌ ಆಗ್ತಿದೆ ಈ ವಿಡಿಯೊ

ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಮೃತದೇಹಗಳನ್ನು ಮೇಲಕ್ಕೆತ್ತುವ ಕಾರ್ಯಾಚರಣೆಯಲ್ಲಿ

ನಾಗಮ್ಮ ಅವರಿಗೆ ಎಂಟು ವರ್ಷದ ಹಿಂದೆ ಮದುವೆಯಾಗಿದ್ದು, ಮನೆಯಲ್ಲಿ ನಿತ್ಯ ಜಗಳ ಆಗುತ್ತಿತ್ತು ಎಂದು ಹೇಳಲಾಗುತ್ತಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದಿದ್ದ ಆಕೆ ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು.

ಈ ನಡುವೆ ಅವರು ಮನೆಯಲ್ಲಿ ಯಾರಿಗೂ ಗೊತ್ತಿಲ್ಲದಂತೆ ಜಮೀನಿನ ಮಧ್ಯಭಾಗದಲ್ಲಿರುವ ದೊಡ್ಡ ಬಾವಿಯ ಬಳಿಗೆ ಬಂದಿದ್ದರು. ಅಲ್ಲಿ ತನ್ನ ಇಬ್ಬರೂ ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಹಾರಿದ್ದರು. ಪುಟ್ಟ ಮಗು ಮತ್ತು ತಾಯಿ ಮೃತಪಟ್ಟರು. ಈ ನಡುವೆ, ಈ ಯಾವ ವಿಚಾರಗಳೂ ಗೊತ್ತಿಲ್ಲದ ಏಳು ವರ್ಷದ ಗಂಗೋತ್ರಿ ಒಮ್ಮಿಂದೊಮ್ಮೆಗೆ ಬಾವಿಗೆ ಬಿದ್ದಾಗ ಭಯಗೊಂಡಿದ್ದಳು. ಅಲ್ಲೇ ಕಾಲು ಬಡಿದಾಡಿಕೊಂಡು ಅತ್ತಿತ್ತ ಓಡಾಡಿದ್ದಾಳೆ.

ಇದು ಮೆಟ್ಟಿಲುಗಳಿರುವ ದೊಡ್ಡ ಬಾವಿ. ಗಂಗೋತ್ರಿ ಕಾಲು ಬಡಿಯುತ್ತಾ ಆ ಮೆಟ್ಟಿಲುಗಳ ಕಡೆಗೆ ಬಂದು ಆ ಮೆಟ್ಟಿಲು ಹತ್ತಿ ಮೇಲೆ ಬಂದು ಬೊಬ್ಬೆ ಹೊಡೆದಿದ್ದಾಳೆ. ಆಗ ಊರಿನ ಜನರಿಗೆ ವಿಷಯ ಗೊತ್ತಾಗಿದೆ. ಕೂಡಲೇ ಅವರೆಲ್ಲ ಓಡೋಡಿ ಬಂದು ಇಣುಕಿದಾಗ ತಾಯಿ ಮತ್ತು ಮಗು ಸಾವನ್ನಪ್ಪಿದರು. ಈ ನಡುವೆ ಅಗ್ನಿಶಾಮಕ ದಳ ಹಾಗು ಇತರರು ಸೇರಿ ಶವವನ್ನು ಮೇಲಕ್ಕೆ ಎತ್ತಲಾಯಿತು. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು, ತನಿಖೆ ನಡೆಯುತ್ತಿದೆ. ಗಂಡನ ಮನೆಯವರ ವಿಚಾರಣೆ ನಡೆಯುತ್ತಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version