ತುಮಕೂರು/ಕಲಬುರಗಿ: ತುಮಕೂರಿನ ಶಿರಾಗೇಟ್ ಎಚ್ಎಂಎಸ್ ಶಾಲೆ ಬಳಿ ವ್ಯಕ್ತಿಯೊಬ್ಬನ ಶವ ಪತ್ತೆ (Deadbody Found) ಆಗಿದೆ. ಮೃತನನ್ನು ಗ್ಯಾಸ್ ವಿಜಯ್ ಎಂದು ಗುರುತಿಸಲಾಗಿದೆ. ಈತ ತುಮಕೂರಿನ ಅರಳಿಮರಪಾಳ್ಯದ ನಿವಾಸಿ (Self Harming) ಆಗಿದ್ದು, ಆಟೋ ಚಾಲಕನಾಗಿದ್ದ (Auto Driver) ಎನ್ನಲಾಗಿದೆ.
ವಿಜಯ್ ಮೃತದೇಹದ ಪಕ್ಕದಲ್ಲೇ ವಿಷದ ಬಾಟಲ್ ಪತ್ತೆ ಆಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ತುಮಕೂರು ನಗರ ಪೊಲೀಸರು ಭೇಟಿ ನೀಡಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ
ಕಲಬುರಗಿ ಜಿಲ್ಲೆಯ ಚಿಂಚೊಳಿ ತಾಲುಕಿನ ಕನಕಪುರ ಗ್ರಾಮದಲ್ಲಿ ಸಾಲಭಾದೆ ತಾಳಲಾರದೆ ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಲ್ಲೇಶ್ ಮೃತ ದುರ್ದೈವಿ.
ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲಮಾಡಿಕೊಂಡಿದ್ದ ರೈತ ಮಲ್ಲೇಶ್ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Electric Shock : ವಿದ್ಯುತ್ ಪ್ರವಹಿಸಿ ಚೆಸ್ಕಾಂ ಲೈನ್ ಮ್ಯಾನ್ ದುರ್ಮರಣ
ಕೋಲಾರದಲ್ಲಿ ಅರಣ್ಯ ಒತ್ತುವರಿ ಗಲಾಟೆ; ರೈತ ಪತಿ ಬಂಧನ ಖಂಡಿಸಿ ವಿಷ ಸೇವಿಸಿದ ಪತ್ನಿಯರು!
ಕೋಲಾರ: ರಾಜ್ಯದಲ್ಲಿ ಅರಣ್ಯ ಇಲಾಖೆ (Forest Department) ಹಾಗೂ ರೈತರ ಸಂಘರ್ಷ ಮುಂದುವರಿದಿದೆ. ಅರಣ್ಯ ಒತ್ತುವರಿ (Forest encroachment) ತೆರವು ಕಾರ್ಯಾಚರಣೆ ವೇಳೆ ಅಡ್ಡಿಪಡಿಸಿದ, ಹಲ್ಲೆ ನಡೆಸಿದ ಆರೋಪದ ಮೇಲೆ 19 ಜನರನ್ನು ಪೊಲೀಸರು (Farmers Arrest) ಬಂಧಿಸಿದ್ದರು. ಬಂಧನಕ್ಕೊಳಗಾದವರಲ್ಲಿ ಇಬ್ಬರು ರೈತರ ಪತ್ನಿಯರು ಭಾನುವಾರ (ಸೆಪ್ಟೆಂಬರ್ 10) ವಿಷ ಸೇವಿಸಿ ಆತ್ಮಹತ್ಯೆಗೆ (Self Harming) ಯತ್ನಿಸಿದ್ದಾರೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಾರಮಾಕಲಹಳ್ಳಿ ಹಾಗೂ ಪಾಳ್ಯ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾರಮಾಕಲಹಳ್ಳಿ ಗ್ರಾಮದ ರೈತ ಮಹಿಳೆ ಲಕ್ಷ್ಮೀದೇವಮ್ಮ ವೆಂಕಟರೆಡ್ಡಿ, ಪಾಳ್ಯ ಗ್ರಾಮದ ರೈತ ಮಹಿಳೆ ಶಾಮಲಾ ಗೋಪಾಲರೆಡ್ಡಿ ಅವರು ವಿಷ ಸೇವನೆ ಮಾಡಿದ ಮಹಿಳೆಯರಾಗಿದ್ದಾರೆ.
ತಮ್ಮ ಪತಿಯನ್ನು ಪೊಲೀಸರು ಬಂಧಿಸಿದ್ದನ್ನು ಖಂಡಿಸಿ ರೈತ ಮಹಿಳೆಯರು ವಿಷ ಸೇವನೆ ಮಾಡಿದ್ದಾರೆ. ಈದೀಗ ಸರ್ಕಾರದ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ವಿಷ ಸೇವನೆ ಮಾಡಿರುವ ಮಹಿಳೆಯರನ್ನು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರಿಬ್ಬರೂ ಅಪಾಯದಿಂದ ಪಾರಾಗಿದ್ದಾರೆ.
ಜೆಸಿಬಿ ಪುಡಿಗಟ್ಟಿದ್ದ ರೈತರು
ಅರಣ್ಯ ಒತ್ತುವರಿ ಕಾರ್ಯಾಚರಣೆ ಸ್ಥಳಕ್ಕೆ ಕೋಲಾರ ಸಂಸದ ಮುನಿಸ್ವಾಮಿ ಭೇಟಿ ನೀಡಿದ್ದರು. ಈ ವೇಳೆ ರೈತರು, ರೈತ ಮಹಿಳೆಯರು ಸೇರಿದಂತೆ ಹಲವು ಮುಖಂಡರು ಆಕ್ರೋಶಗೊಂಡಿದ್ದರು. ಅರಣ್ಯ ಒತ್ತುವರಿ ಜಾಗವನ್ನು ತೆರವು ಮಾಡುವ ವೇಳೆ ರೈತರೆಲ್ಲರು ಸೇರಿ ಜೆಸಿಬಿಗಳ ಮೇಲೆ ದಾಳಿ ಮಾಡಿದ್ದರು. ಕಲ್ಲು, ದೊಣ್ಣೆ ಯಿಂದ ಹೊಡೆದು ಪುಡಿಪುಡಿ ಮಾಡಿದ್ದರು.
19 ಜನರ ಬಂಧನ
ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಜೆಸಿಬಿ ಮಾಲೀಕರಿಂದ 3 ಎಫ್‌ಐಆರ್ ದಾಖಲು ಮಾಡಲಾಗಿತ್ತು. ಎಫ್‌ಐಆರ್ ದಾಖಲಾಗುತ್ತಿದ್ದಂತೆ ರಾತ್ರೋ ರಾತ್ರಿ 19 ಜನರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಹೊರ ಜಿಲ್ಲೆಯ ಜೈಲಿಗೆ ಸ್ಥಳಾಂತರ ಮಾಡಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭೂಮಿಯೂ ಇಲ್ಲ, ಪತಿಯೂ ಇಲ್ಲ ಎಂದು ನೊಂದ ರೈತ ಮಹಿಳೆಯರಿಬ್ಬರು ವಿಷ ಸೇವನೆ ಮಾಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ