Site icon Vistara News

Self Harming : ನಕಲು ಮಾಡುವಾಗ ಸಿಕ್ಕಿಬಿದ್ದ; ಮರ್ಯಾದೆಗೆ ಅಂಜಿ 14ನೇ ಮಹಡಿಯಿಂದ ಜಿಗಿದ ವಿದ್ಯಾರ್ಥಿ

student self harming in Bengaluru

ಬೆಂಗಳೂರು: ಇಲ್ಲಿನ ಗಿರಿನಗರ ಬಳಿಯ ಪಿಇಎಸ್‌ ಕಾಲೇಜಿನ (PES College) ವಿದ್ಯಾರ್ಥಿಯೊಬ್ಬ ಮಹಡಿ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದಿತ್ಯ ಪ್ರಭು (19) ಆತ್ಮಹತ್ಯೆ (Self Harming) ಮಾಡಿಕೊಂಡ ವಿದ್ಯಾರ್ಥಿ.

ಮಂಗಳೂರು ಮೂಲದ ಆದಿತ್ಯ ಪ್ರಭು ಪಿಇಎಸ್‌ ಕಾಲೇಜಿನಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ. ಕಾಲೇಜಿನಲ್ಲಿ ಇತ್ತೀಚೆಗೆ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ವೇಳೆ ಆದಿತ್ಯ ಪರೀಕ್ಷೆಯಲ್ಲಿ ಮೊಬೈಲ್ ಬಳಸಿ ನಕಲು ಮಾಡುತ್ತಿದ್ದ. ಇದನ್ನು ಗಮನಿಸಿದ ಉಪನ್ಯಾಸಕಿಯೊಬ್ಬರು ಆದಿತ್ಯನಿಂದ ಮೊಬೈಲ್‌ ಕಿತ್ತುಕೊಂಡಿದ್ದರು.

ಸ್ಥಳಕ್ಕಾಗಮಿಸಿ ಪರಿಶೀಲಿಸಿದ ಗಿರಿನಗರ ಪೊಲೀಸರು

ಬಳಿಕ ಆದಿತ್ಯನ ತಾಯಿಗೆ ಕರೆ ಮಾಡಿ ನಕಲು ವಿಷಯವನ್ನು ತಿಳಿಸಿದರು. ಜತೆಗೆ ಆದಿತ್ಯನಿಗೆ ಕೌನ್ಸಿಲಿಂಗ್‌ ಮಾಡಲು ಆಡಳಿತ ಮಂಡಳಿ ತಯಾರಿ ಮಾಡಿಕೊಂಡಿದ್ದರು. ಆದರೆ ಅಷ್ಟರಲ್ಲಿ ಆತುರಕ್ಕೆ ಬಿದ್ದ ಆದಿತ್ಯ ಈ ವಿಚಾರ ಎಲ್ಲರಿಗೂ ತಿಳಿದರೆ ಮರ್ಯಾದೆ ಹೋಗುತ್ತದೆ ಎಂದು ಹೆದರಿದ್ದಾನೆ. ಇದರಿಂದ ಮನನೊಂದ ಆದಿತ್ಯ ಕಾಲೇಜಿನ 14 ಮಹಡಿಯಿಂದ ಹಾರಿ ಮೃತಪಟ್ಟಿದ್ದಾನೆ.

ಸ್ಥಳಕ್ಕೆ ಗಿರಿನಗರ ಪೊಲೀಸರು, ಡಿಸಿಪಿ ಕೃಷ್ಟಕಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version