Site icon Vistara News

Self Harming: ಎರಡನೇ ಸೀಗನಹಳ್ಳಿಯಲ್ಲಿ ಸಾಲಬಾಧೆಯಿಂದ ರೈತ ಮಹಿಳೆ ಆತ್ಮಹತ್ಯೆ

Farmer woman commits suicide in Hagaribommanahalli

ಹಗರಿಬೊಮ್ಮನಹಳ್ಳಿ: ಸಾಲ ಬಾಧೆಯಿಂದ ರೈತ ಮಹಿಳೆ (Farmer woman) ವಿಷ ಸೇವಿಸಿ ಆತ್ಮಹತ್ಯೆ (suicide) ಮಾಡಿಕೊಂಡಿರುವ ಘಟನೆ ತಾಲೂಕಿನ ಎರಡನೇ ಸೀಗನಹಳ್ಳಿಯಲ್ಲಿ ಶುಕ್ರವಾರ ಜರುಗಿದೆ. ಗ್ರಾಮದ ಕೊಳ್ಳಿ ಅನ್ನಕ್ಕ ಗಂಡ ಸೋಮಪ್ಪ (60) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಮೃತ ರೈತ ಮಹಿಳೆಯು ತಂಬ್ರಹಳ್ಳಿಯ ಎಸ್‌ಬಿಐ ಬ್ಯಾಂಕಿನಲ್ಲಿ 4 ಲಕ್ಷ ರೂಗಳಿಗೂ ಹೆಚ್ಚು ಸಾಲ ಪಡೆದದ್ದು, ಖಾಸಗಿಯಾಗಿಯೂ ಕೆಲ ಕಡೆ ಸಾಲವನ್ನು ಪಡೆದಿದ್ದರು. ಅಲ್ಲದೆ ಇವರಿಗಿದ್ದ 4 ಎಕರೆ ಕೃಷಿ ಭೂಮಿಯಲ್ಲಿ ಸತತ ಮೂರು ವರ್ಷಗಳ ಕಾಲ ಈರುಳ್ಳಿಯನ್ನು ಬೆಳೆಯಲು ಹೋಗಿ ನಷ್ಟ ಅನುಭವಿಸಿದ್ದರು. ಇತರೆ ಬೆಳೆಯಲು ಹೋಗಿ ಸಕಾಲಕ್ಕೆ ಮಳೆಯಾಗದೆ ವರ್ಷ ನಷ್ಟ ಅನುಭವಿಸಿದ್ದರು ಎನ್ನಲಾಗಿದೆ.

ಇದನ್ನೂ ಓದಿ: PRITAM Bull: ಪ್ರವಾಹದಲ್ಲಿ ಸಿಲುಕಿದ ಗೂಳಿಗಳ ರಕ್ಷಣೆ; ಒಂದು ಗೂಳಿ ಬೆಲೆ BMW ಕಾರಿನ ಬೆಲೆಗೆ ಸಮ

ಈ ಬಗ್ಗೆ ಮೃತ ರೈತ ಮಹಿಳೆಯ ಪುತ್ರ ನೀಡಿದ ದೂರಿನ ಮೇರೆಗೆ ಹಗರಿಬೊಮ್ಮನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳಕ್ಕೆ ಹಗರಿಬೊಮ್ಮನಹಳ್ಳಿ ತಹಸೀಲ್ದಾರ್ ಚಂದ್ರಶೇಖರ್ ಗಾಳಿ ಮತ್ತು ಕೃಷಿ ಇಲಾಖೆ ಅಧಿಕಾರಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲಿಸಿದರು.

Exit mobile version