Site icon Vistara News

Self Harming : ಪತ್ನಿಯ ಪರಸಂಗಕ್ಕೆ ಬೇಸತ್ತು ನೇಣು ಬಿಗಿದು ಆತ್ಮಹತ್ಯೆ

Wife llicit relationship Husband self harming

ಚಿಕ್ಕಬಳ್ಳಾಪುರ : ಇಲ್ಲಿನ ಗುವ್ವಲಕಾನಹಳ್ಳಿ ಗ್ರಾಮದಲ್ಲಿ ಪತಿಯೊಬ್ಬ ಪತ್ನಿಯ ಅನೈತಿಕ ಸಂಬಂಧಕ್ಕೆ (Illicit relationship) ಮನನೊಂದು ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾರೆ. ಸುರೇಶ್ (38) ಮೃತ ದುರ್ದೈವಿ. ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ಸುರೇಶ್‌ ನೇಣು ಬಿಗಿದುಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ಸುರೇಶ್‌ ವಾಟ್ಸ್‌ಪ್ ಆಡಿಯೊ ಮಾಡಿ‌ ಸ್ನೇಹಿತರಿಗೆ ಕಳುಹಿಸಿ ಬಳಿಕ ನೇಣಿಗೆ ಶರಣಾಗಿದ್ದಾರೆ. ಆಡಯೊದಲ್ಲಿ ಸಾವಿಗೆ ಕಾರಣ ಯಾರು ಎಂಬುದನ್ನು ತಿಳಿಸಿದ್ದಾರೆ. ಅಂಗನವಾಡಿ ಶಿಕ್ಷಕಿಯಾಗಿರುವ ಪತ್ನಿ ಹೇಮಾವತಿ ಹುನೇಗಲ್ ಗ್ರಾಮದ ಗಂಗಾಧರ್ ಜತೆ ಅನೈತಿಕ ಸಂಬಂಧ ಹೊಂದಿದ್ದರು ಎಂಬ ಆರೋಪವಿದೆ.

ಇದನ್ನೂ ಓದಿ: Self Harming : ನೇಣಿಗೆ ಕೊರಳೊಡ್ಡಿದ ಕಾರ್ಕಳದ ಕಾನ್ಸ್‌ಟೇಬಲ್‌; ಹೆಚ್ಚಿದ ಪೊಲೀಸ್‌ ಆತ್ಮಹತ್ಯೆ!

ಗಂಗಾಧರ್‌ ಹಾಗೂ ಹೇಮಾವತಿ

ಇದೆ ವಿಚಾರಕ್ಕೆ ನಿತ್ಯ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಅನೈತಿಕ ಸಂಬಂಧ ತಿಳಿಯುತ್ತಿದ್ದಂತೆ ಹೇಮಾ ವಿಚ್ಛೇಧನಕ್ಕೆ ಅರ್ಜಿ ಸಲ್ಲಿಸಿದ್ದರು. ನಿನ್ನೆ ಕೂಡ ಪತ್ನಿ ಹೇಮಾ ಗಂಗಾಧರ್‌ ಜತೆಗೆ ಓಡಾಡುತ್ತಿದ್ದನ್ನು ಕಂಡ ಸುರೇಶ್‌ ಅಂಗನವಾಡಿಗೆ ತೆರಳಿ ಗಲಾಟೆ ಮಾಡಿದ್ದ. ಹೀಗಾಗಿ ಹೇಮಾ ಹಾಗೂ ಗಂಗಾಧರ್‌ ಈ ಸಂಬಂಧ ದೂರು ನೀಡಿದ್ದರು. ನಿನ್ನೆ ಠಾಣೆಗೆ ಕರೆಸಿ ಸುರೇಶ್‌ಗೆ ಪೊಲೀಸರಿಂದ ಹಲ್ಲೆ ಮಾಡಿಸಿದ್ದಾರೆ. ಇದರಿಂದಲೇ ಮನನೊಂದ ಸುರೇಶ್ ಮನೆಗೆ ತೆರಳಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಸದ್ಯ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೇಮಾವತಿಯ ವಿಚಾರಣೆ ನಡೆಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಸಾಲಭಾದೆಗೆ ವಿಷ ಸೇವಿಸಿದ ಮಹಿಳೆ

ಚಿಕ್ಕೋಡಿಯ ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾಲಭಾದೆ ತಾಳಲಾರದೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಇಂದು ಮೃತಪಟ್ಟಿದ್ದಾರೆ. ‌ಲಗಮವ್ಬಾ ಬಾಗಿ (32) ಮೃತ ಮಹಿಳೆ. ಲಗಮವ್ವಾ ಹುಕ್ಕೇರಿ ತಾಲೂಕಿನ ಮದಹಳ್ಳಿ ನಿವಾಸಿ ಆಗಿದ್ದು, ತನ್ನ ಹಾಗೂ ಪತಿ ಹೆಸರಲ್ಲಿ ವಿವಿಧ ಸಂಘ ಸಂಸ್ಥೆ, ಬ್ಯಾಂಕ್‌ಗಳಲ್ಲಿ 6 ಲಕ್ಷ 30 ಸಾವಿರ ಸಾಲ ಮಾಡಿದ್ದರು. ಇದನ್ನೂ ತೀರಿಸಲು ಆಗದೆ ಕಳೆದ ಜುಲೈ 14ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೆ ಅಸ್ವಸ್ಥಗೊಂಡಿದ್ದ ಲಗಮವ್ವಾಳನ್ನು ಘಟಪ್ರಭಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಭಾನುವಾರ ಮೃತಪಟ್ಟಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version