Site icon Vistara News

Self Harming : ನೇಣಿಗೆ ಕೊರಳೊಡ್ಡಿದ ಕಾರ್ಕಳದ ಕಾನ್ಸ್‌ಟೇಬಲ್‌; ಹೆಚ್ಚಿದ ಪೊಲೀಸ್‌ ಆತ್ಮಹತ್ಯೆ!

Udupi Constable self

ಉಡುಪಿ: ಇತ್ತೀಚೆಗೆ ಪೊಲೀಸ್‌ ಇಲಾಖೆಯಲ್ಲಿ ಸಿಬ್ಬಂದಿ ಆತ್ಮಹತ್ಯೆ (Self Harming) ಮಾಡಿಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಕೆಲವರು ಮಾನಸಿಕ ಖಿನ್ನತೆಗೆ, ಸಾಲಭಾದೆಗೆ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಉಳಿದ ಪ್ರಕರಣಗಳಲ್ಲಿ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಉಡುಪಿಯ ಕಾರ್ಕಳ ತಾಲೂಕಿನ‌ ಮಿಯ್ಯಾರು ಬಳಿ ಪೊಲೀಸ್ ಪೇದೆ (Udupi Constable) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎಚ್.ಸಿ ಪ್ರಶಾಂತ್ (48) ನೇಣಿಗೆ ಶರಣಾದವರು.

ಮೃತ ಕಾರ್ಕಳದ ಕಾನ್ಸ್‌ಟೇಬಲ್‌ ಎಚ್.ಸಿ ಪ್ರಶಾಂತ್

ಕಾರ್ಕಳ ನಗರ ಠಾಣೆಯಲ್ಲಿ ಕಾನ್ಸ್‌ಟೇಬಲ್‌ ಆಗಿದ್ದ ಎಚ್‌ಸಿ ಪ್ರಶಾಂತ್ ತಮ್ಮ ನಿವಾಸದಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇಲಾಖೆಯಲ್ಲಿ ಹೆಚ್ಚಿದ ಸೂಸೈಡ್‌ ಕೇಸ್‌

ಇತ್ತೀಚೆಗೆ ಜುಲೈ 13ರಂದು ಹುಬ್ಬಳ್ಳಿಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ (Police Constable) ಆತ್ಮಹತ್ಯೆ (self harming) ಮಾಡಿಕೊಂಡಿದ್ದರು. ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಗ್ರಾಮದ ಮಲ್ಲಿಕಾರ್ಜುನ್ ರುದ್ರಾಪುರ ಎಂಬುವವರು ಮೃತರು. ಕಳೆದ ಎರಡು ವರ್ಷಗಳ ಹಿಂದಷ್ಟೇ ಬೆಂಡಿಗೇರಿ ಪೊಲೀಸ್ ಠಾಣೆಗೆ ವರ್ಗಾವಣೆ ಆಗಿದ್ದ ಕಾನ್ಸ್‌ಟೇಬಲ್ ಮಲ್ಲಿಕಾರ್ಜುನ್ ಠಾಣೆಯ ಹಿಂಬದಿಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಕಳೆದ ಮೇ 21ರಂದು ಕಲಬುರಗಿ ನಗರದ ಡಿಎಆರ್ ಹೆಡ್ ಕ್ವಾರ್ಟರ್ಸ್‌ನಲ್ಲಿ ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆಗೆ ಶರಣಾಗಿದ್ದರು. ಪಾಂಡುರಂಗ (47) ನೇಣು ಬಿಗಿದುಕೊಂಡು ಮೃತಪಟ್ಟವರು. ಪಾಂಡುರಂಗ ಕಲಬುರಗಿಯ ಚಿಂಚೋಳಿ ತಾಲೂಕಿನ ಚಿಮ್ಮನಚೋಡ್ ಗ್ರಾಮದ ನಿವಾಸಿ ಆಗಿದ್ದರು. ಇವರ ಪ್ರಕರಣದಲ್ಲೂ ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

ಇದನ್ನೂ ಓದಿ: Assault Case : ದಾರೀಲಿ ಕಂಡ ಲೇಡಿ ಟೆಕ್ಕಿ ನಂಬರ್‌ ಕೇಳಿದ ಪುಂಡರು; ಕೊಡದ್ದಕ್ಕೆ ಕಾರನ್ನೇ ಪುಡಿಗಟ್ಟಿದರು!

ಕಳೆದ ಏಪ್ರಿಲ್‌ 30ರಂದು ಮಾನಸಿಕ ಖಿನ್ನತೆಯಿಂದ (Mental depression) ಬಳಲುತ್ತಿದ್ದ ಪೊಲೀಸ್ ಹೆಡ್‌ ಕಾನ್ಸ್‌ಟೇಬಲ್‌ (Kudur Police Station) ಉಮೇಶ್ (37) ಆತ್ಮಹತ್ಯೆ ಮಾಡಿಕೊಂಡಿದ್ದರು. ಕುದೂರು ಠಾಣೆಯ ಹೆಡ್‌ ಕಾನ್ಸ್‌ಟೇಬಲ್‌ ಆಗಿದ್ದ ಉಮೇಶ್‌ ಹಲಸಿನ ಮರಕ್ಕೆ ನೇಣು ಬಿಗಿದುಕೊಂಡಿದ್ದರು.

ಕಳೆದ ಮೇ 4ರಂದು ಕಲಬುರಗಿಯ ಚಿತ್ತಾಪುರ ತಹಸೀಲ್ದಾರ್‌ ಕಚೇರಿ ಟೆರೇಸ್ ಮೇಲೆ ಕಾನ್ಸ್‌ಟೇಬಲ್‌ವೊಬ್ಬರ ( police Constable) ಮೃತದೇಹವೊಂದು ಪತ್ತೆ ಆಗಿತ್ತು. ಕಾನ್ಸ್‌ಟೇಬಲ್‌ ಮಲ್ಲಿಕಾರ್ಜುನ್‌ ಎಂಬುವವರ ಹಣೆಗೆ ಗುಂಡೇಟು ಬಿದ್ದಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಇತರೆ ಸಿಬ್ಬಂದಿ ಹೌರಹಾರಿದ್ದರು. ಕಾನ್ಸ್‌ಟೇಬಲ್‌ ಮಲ್ಲಿಕಾರ್ಜುನ್ ಅವರು ತಾವೇ 303 ರೈಫಲ್‌ನಿಂದ ಹಣೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಮೃತದೇಹದ ಪಕ್ಕದಲ್ಲಿ 303 ರೈಫಲ್ ಕೂಡ ಪತ್ತೆ ಆಗಿತ್ತು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version