Site icon Vistara News

Self Harming: ರನ್ನಿಂಗ್ ರೇಸ್​ನಲ್ಲಿ ಸೋಲು; ಕೀಟನಾಶಕ ಸೇವಿಸಿ ವಿದ್ಯಾರ್ಥಿನಿ ಸೂಸೈಡ್‌!

Nisha Losing the running race Student commits suicide after consuming pesticide

ಮಂಗಳೂರು: ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಬಹುಮಾನ ಸಿಗದ ವಿಚಾರಕ್ಕೆ ಖಿನ್ನತೆಗೆ ಜಾರಿದ ವಿದ್ಯಾರ್ಥಿನಿ ಕೀಟನಾಶಕ ಸೇವಿಸಿ ಆತ್ಮಹತ್ಯೆ (Self Harming) ಮಾಡಿಕೊಂಡಿದ್ದಾಳೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸಂಪ್ಯ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.

ನಿಶಾ (17) ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವ ವಿದ್ಯಾರ್ಥಿನಿ. ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ನಿಶಾ, ಬಿಹಾರದಲ್ಲಿ ರಾಷ್ಟ್ರಮಟ್ಟದ ರನ್ನಿಂಗ್ ರೇಸ್​ನಲ್ಲಿ ಸ್ಪರ್ಧಿಯಾಗಿದ್ದಳು. ಎರಡು ವಾರದ ಹಿಂದೆ ರಾಷ್ಟ್ರೀಯ ಕ್ರೀಡಾಕೂಟ ನಡೆದಿತ್ತು.

ರನ್ನಿಂಗ್ ರೇಸ್‌ನಲ್ಲಿ ಬಹುಮಾನ ಸಿಗದಿದ್ದಕ್ಕೆ ಬೇಸರಗೊಂಡಿದ್ದ ನಿಶಾ ಬೇಸರದಿಂದಲೇ ತನ್ನೂರಿಗೆ ಬಂದಿದ್ದಳು. ಸೋಲಿನ ಪೆಟ್ಟು ಅರಗಿಸಿಕೊಳ್ಳಲು ಆಗದ ನಿಶಾ ಖಿನ್ನತೆಗೆ ಒಳಗಾಗಿದ್ದಳು. ಇದರಿಂದ ಮನನೊಂದು ವಾರದ ಹಿಂದೆ ಮನೆಯಲ್ಲಿದ್ದ ಕೀಟನಾಶಕ ಸೇವಿಸಿದ್ದಳು. ತೀವ್ರ ಅಸ್ವಸ್ಥಳಾಗಿದ್ದ ನಿಶಾಳನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಶಾ ಮೃತಪಟ್ಟಿದ್ದಾಳೆ.

ಇದನ್ನೂ ಓದಿ: Murder Case : ನಿದ್ದೆಗೆ ಜಾರಿದ ಹೆಂಡ್ತಿಗೆ ದೊಣ್ಣೆಯಿಂದ ಹೊಡೆದು ಕೊಂದ ಗಂಡ!

ಬಸ್‌ ಸ್ಟ್ಯಾಂಡ್‌ನಲ್ಲಿ ಮಕ್ಕಳನ್ನು ಬಿಟ್ಟು ಸಮುದ್ರಕ್ಕೆ ಹಾರಿದ ಮಹಿಳೆ

ಕಾರವಾರ: ತನ್ನಿಬ್ಬರು ಗಂಡು ಮಕ್ಕಳನ್ನು ಬಸ್‌ ನಿಲ್ದಾಣದಲ್ಲಿ ಬಿಟ್ಟು ಮಹಿಳೆಯೊಬ್ಬರು ಸಮುದ್ರಕ್ಕೆ ಹಾರಿದ (Self Harming) ಘಟನೆ ನಡೆದಿದೆ. ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಡ್‌ಬಂದರ್ ಬಳಿ ಸಮುದ್ರದಲ್ಲಿ ಶನಿವಾರ ಸಂಜೆ ಈ ದುರ್ಘಟನೆ ನಡೆದಿದೆ.

ನಿವೇದಿತಾ ನಾಗರಾಜ ಭಂಡಾರಿ ಸಮುದ್ರಕ್ಕೆ ಹಾರಿದವರು. ಸಾಂತಗಲ್ ಗ್ರಾಮದ ನಿವಾಸಿಯಾಗಿರುವ ನಿವೇದಿತಾ ನಿನ್ನೆ ಶನಿವಾರ ಮನೆಯಿಂದ ಸ್ಕೂಟಿಯಲ್ಲಿ ಇಬ್ಬರೂ ಗಂಡುಮಕ್ಕಳನ್ನು ಕರೆತಂದಿದ್ದರು. ಕುಮಟಾದ ಪಿಕ್‌ಅಪ್ ಬಸ್‌ನಿಲ್ದಾಣದ ಬಳಿ ಮಕ್ಕಳನ್ನು ಬಿಟ್ಟು ವಾಪಸ್‌ ಬರುವುದಾಗಿ ಹೇಳಿ ತೆರಳಿದ್ದಾರೆ.

ಆತ್ಮಹತ್ಯೆಗೂ ಮುನ್ನ ಸ್ಕೂಟಿ ಡಿಕ್ಕಿಯೊಳಗೆ ತನ್ನ ಮಾಂಗಲ್ಯ ಸರ, ಕಾಲುಂಗುರ, ಮೊಬೈಲ್ ಇಟ್ಟು ಸಮುದ್ರಕ್ಕೆ ಹಾರಿದ್ದಾರೆ. ನಿವೇದಿತಾ ಸಮುದ್ರಕ್ಕೆ ಹಾರುವುದನ್ನು ಲೈಫ್‌ ಗಾರ್ಡ್‌ ಗಮನಿಸಿ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅಲೆಗಳ ಅಬ್ಬರ ಹೆಚ್ಚಿದ್ದರಿಂದ ಮಹಿಳೆ ಕಣ್ಮರೆಯಾಗಿದ್ದಾರೆ.

ಡೆತ್‌ನೋಟ್‌ ನೋಟ್‌ ಪತ್ತೆ

ಮಕ್ಕಳನ್ನ ಬಿಟ್ಟು ತಾಯಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಕೂಟಿಯಲ್ಲಿ ಮಹಿಳೆ ಬರೆದಿಟ್ಟ ಡೆತ್‌ನೋಟ್ ಪತ್ತೆ ಆಗಿದೆ. ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಕೊಂಡಿದ್ದಾರೆ. ಏನೋ ಸಾಧನೆ ಮಾಡಬೇಕು ಅಂದುಕೊಂಡಿದ್ದೆ, ಜೀವನ ಸಾವಿನ ಅಂಚಿಗೆ ಬಂದಿದೆ. ನನ್ನ ಹೆಣ ಸಿಗಬಾರದು ಅಂತಲೇ ಸಮುದ್ರಕ್ಕೆ ಹಾರುತ್ತಿರುವುದಾಗಿ ನಿವೇದಿತಾ ಭಂಡಾರಿ ಪತ್ರ ಬರೆದಿದ್ದಾರೆ.

ಸ್ಥಳಕ್ಕೆ ಕುಮಟಾ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಸಮುದ್ರದಲ್ಲಿ ಕಣ್ಮರೆಯಾಗಿರುವ ನಿವೇದಿಳಿಗಾಗಿ ಹುಡುಕಾಟ ಮುಂದುವರಿದಿದೆ. ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version