Site icon Vistara News

Self Harming: ಇಬ್ಬರು ಪುಟ್ಟ ಮಕ್ಕಳ ಜತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

Self Harming

ಶಿವಮೊಗ್ಗ: ಇಬ್ಬರು ಪುಟ್ಟ ಮಕ್ಕಳ ಜತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಕೈ ಗ್ರಾಮದಲ್ಲಿ ನಡೆದಿದೆ. ಚಂಪಕಾಪುರ ನಿವಾಸಿ ರಾಜೇಶ್ ಎಂಬುವವರ ಪತ್ನಿ ವಾಣಿ (32), ಮಕ್ಕಳಾದ ಸಮರ್ಥ(12), ಸಂಪದ (6) ಮೃತರು.

ಗುರುವಾರ ರಾತ್ರಿ ಘಟನೆ ನಡೆದಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾವಿಯಿಂದ ಮೃತದೇಹಗಳನ್ನು ಹೊರತೆಗೆದು ನಗರ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ | Theft Case : ಬೆಂಗಳೂರಿನಲ್ಲಿ ಪ್ರೇಯಸಿಗಾಗಿ ಕಳ್ಳತನಕ್ಕೆ ಇಳಿದ ಪ್ರಿಯತಮ! ಮದುವೆಯಾಗಲು ಹೊರಟವರು ಜೈಲುಪಾಲು

ಚಲಿಸುತ್ತಿದ್ದ ಸ್ಕೂಟರ್‌ ಮೇಲೆ ತುಂಡಾಗಿ ಬಿದ್ದ ವಿದ್ಯುತ್‌ ತಂತಿ; ಸವಾರನ ಕುತ್ತಿಗೆಗೆ ತಂತಿ ಸಿಲುಕಿ ಗಂಭೀರ

ಸವಾರ ಶಶಿಧರ ಶೆಟ್ಟಿ

ಉಡುಪಿ: ಚಲಿಸುತ್ತಿದ್ದ ಸ್ಕೂಟರ್ (Road Accident) ಮೇಲೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಸವಾರನ ಕುತ್ತಿಗೆ ಸಿಲುಕಿದ ಘಟನೆ ಉಡುಪಿಯ ಮಣಿಪಾಲದಲ್ಲಿ ನಡೆದಿದೆ. ಮಣಿಪಾಲದಲ್ಲಿ ಮೆಸ್ಕಾಂ ಅವಾಂತರಕ್ಕೆ ಕುಟುಂಬವೊಂದು ಸಂಕಷ್ಟವನ್ನು ಎದುರಿಸುತ್ತಿದೆ.

ಸವಾರ ಶಶಿಧರ ಶೆಟ್ಟಿ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಶಶಿಧರ ಮಣಿಪಾಲ ಇಂಡಸ್ಟ್ರಿಯಲ್ ಏರಿಯಾದ ಮಣಿಪಾಲ ಸಂಸ್ಥೆಯ ಯುನಿಟ್ 5 ಉದ್ಯೋಗಿಯಾಗಿದ್ದಾರೆ. ಕುಂಜಾರುಗಿರಿ ನಿವಾಸಿಯಾಗಿರುವ ಶಶಿಧರ ಶೆಟ್ಟಿ ಅವರು ಪತ್ನಿ, ಮಗುವಿನೊಂದಿಗೆ ಸ್ಕೂಟರ್‌ನಲ್ಲಿ ಬರುತ್ತಿದ್ದರು. ಮಗನನ್ನು ಶಾಲೆಗೆ ಬಿಡಲು ತೆರಳುತ್ತಿದ್ದರು.

ಅಲೆವೂರಿನಿಂದ ಮಣಿಪಾಲದತ್ತ ಬರುವಾಗ ಇಂಡಸ್ಟ್ರಿಯಲ್ ಏರಿಯ ಬಸ್ ನಿಲ್ದಾಣದ ಬಳಿ ಏಕಾಏಕಿ ಬಂದ ಗಾಳಿ ಸಹಿತ ಮಳೆಗೆ ವಿದ್ಯುತ್‌ ತಂತಿ ತುಂಡಾಗಿದೆ. ಅದೇ ರಸ್ತೆಯಲ್ಲಿ ಬರುತ್ತಿದ್ದ ಶಶಿಧರ ಶೆಟ್ಟಿ ಅವರ ಕುತ್ತಿಗೆ ತಂತಿ ಸುತ್ತುವರಿದ ಪರಿಣಾಮ ಮಗು, ಪತ್ನಿ ಸಮೇತ ಕೆಳಗೆ ಬಿದ್ದಿದ್ದರು.

ಇದನ್ನೂ ಓದಿ: Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

ಕೂಡಲೇ ಸ್ಥಳೀಯರ ಸಹಾಯದೊಂದಿಗೆ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ಜುಲೈ 22 ರಂದು ಘಟನೆ ನಡೆದಿದ್ದು, 15 ದಿನ ಕಳೆದರೂ ಇನ್ನು ಆಸ್ಪತ್ರೆಯಲ್ಲಿ ಶಶಿಧರ್‌ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಸದ್ಯ ಕುತ್ತಿಗೆ ಕೆಳಭಾಗದಲ್ಲಿ ಸ್ಪರ್ಶ ಜ್ಞಾನವಿಲ್ಲ. ಇತ್ತ ಮೆಸ್ಕಾಂ ಸೂಕ್ತ ಪರಿಹಾರ ನೀಡಲು ನಿರಾಕರಿಸುತ್ತಿದೆ. ಹೀಗಾಗಿ ಕ್ರೌಡ್ ಫಂಡಿಂಗ್ ಮೂಲಕ ಶಶಿಧರ್‌ ಕುಟುಂಬ ಚಿಕಿತ್ಸೆಗೆ ಪ್ರಯತ್ನಿಸುತ್ತಿದೆ. ಸಂಪೂರ್ಣ ಚಿಕಿತ್ಸೆಗೆ ಸುಮಾರು 15 ಲಕ್ಷ ರೂಪಾಯಿ ಅಗತ್ಯತೆ ಇದೆ. ಸರಕಾರದ, ಮೆಸ್ಕಾಂ ಇಲಾಖೆ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

Exit mobile version