ಧಾರವಾಡ/ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೊಲೆ ಆರೋಪಿಯೊಬ್ಬ ನೇಣಿಗೆ (Self Harming) ಶರಣಾಗಿದ್ದಾನೆ. ಪರಸಪ್ಪ (50) ಮೃತ ವ್ಯಕ್ತಿ. ಹುಬ್ಬಳ್ಳಿಯ ಸಿಲ್ವರ್ ಟೌನ್‌ನಲ್ಲಿ ನಿನ್ನೆ (ಸೆ.27) ಮೌಲಾಲಿ ಎಂಬಾತನ ಬರ್ಬರ ಹತ್ಯೆಯಾಗಿತ್ತು. ಇದರ ಪ್ರಮುಖ ಆರೋಪಿ ಪರಸಪ್ಪ ಎಂದು ಶಂಕಿಸಲಾಗಿತ್ತು.
ಉತ್ತರ ಕನ್ನಡದ ಮುಂಡಗೋಡ ತಾಲೂಕಿನ ಮರಗಡಿ ಗ್ರಾಮದ ಮೌಲಾಲಿ ಗೌಂಡಿ ಕೆಲಸ ಮಾಡುತ್ತಿದ್ದ. ಹೀಗಾಗಿ ಹುಬ್ಬಳ್ಳಿಗೆ ಬಂದಿದ್ದ. ಮೌಲಾಲಿ ಕಟ್ಟಡ ಕಾರ್ಮಿಕನಾಗಿದ್ದರೆ, ಈ ಪರಸಪ್ಪ ಕಟ್ಟಡದ ವಾಚ್‌ಮೆನ್ ಆಗಿದ್ದ. ಆದರೆ ನಿರ್ಮಾಣ ಹಂತದ ಕಟ್ಟಡದಲ್ಲಿ ಮಲಗಿದ್ದಲೇ ರಕ್ತಸಿಕ್ತವಾಗಿದ್ದ.
ಮೌಲಾಲಿ ಕೊಲೆಯ ನಂತರ ಪರಸಪ್ಪ ತಲೆಮರೆಸಿಕೊಂಡಿದ್ದ. ಪೊಲೀಸರು ಈತನ ಹುಡುಕಾಟದಲ್ಲಿದ್ದರು. ಆದರೆ ಗುರುವಾರ (ಸೆ.28) ಅಪೂರ್ವ ನಗರದ ರಸ್ತೆಯಲ್ಲಿರುವ ಮರಕ್ಕೆ ನೇಣು ಹಾಕಿಕೊಂಡಿದ್ದಾರನೆ. ಮಲಾಲಿ ಹತ್ಯೆ ಹಿಂದೆ ಅನೈತಿಕ ಸಂಬಂಧದ ಕಾರಣ ಇತ್ತು ಎನ್ನಲಾಗಿದೆ. ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಇದನ್ನೂ ಓದಿ: Manipur Violence: ಹತ ಬಾಲಕ, ಬಾಲಕಿ ಅಪಹರಣಕಾರರ ಕೈಗೆ ಸಿಕ್ಕಿದ್ದು ಹೇಗೆ? ಹಿಂದಿದೆಯೇ ಪ್ರೇಮ ಕತೆ?
ನೇಣಿಗೆ ಶರಣಾದ ರೈತ
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾಮದೇವ ಪಡಸುಣಗಿ (50) ಮೃತ ದುರ್ದೈವಿ.
ನಾಮದೇವ 4 ಎಕರೆ ಜಮೀನಿನಲ್ಲಿ ವಿವಿಧ ಬೆಳೆ ಬೆಳೆದಿದ್ದರು. ಆದರೆ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬ್ಯಾಂಕ್ ಸೇರಿ ವಿವಿಧೆಡೆ 3 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದಾರೆ. ಸದ್ಯ ಸಾಲ ತೀರಿಸಲಾಗದೇ ರೈತ ನವಲಗುಂದ ತನ್ನ ಹೊಲದಲ್ಲೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ