ದಾವಣಗೆರೆ: ಸೋಶಿಯಲ್ ಮೀಡಿಯಾದಲ್ಲಿ (Social Media) ಖಾಸಗಿ ವಿಡಿಯೊ ಟ್ರೋಲ್ (Troll Video) ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿಗಳು ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ. ನಗರದ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಬ್ಬರು ಮಹಡಿ ಮೇಲೆ ಏಕಾಂತದಲ್ಲಿ ಇದ್ದರು. ಯಾರೋ ಕಿಡಿಗೇಡಿಗಳು ಇದನ್ನೂ ಮೊಬೈಲ್‌ನಲ್ಲಿ ಸೆರೆಯಿಡಿದು ವೈರಲ್ ಮಾಡಿದ್ದರು.
ಖಾಸಗಿ ವಿಡಿಯೊ ವೈರಲ್ ಆಗುತ್ತಿದ್ದಂತೆ ಮನನೊಂದು ತುಂಬಿಗೆರೆ ಗ್ರಾಮದ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಇತ್ತ ಆಲೂರಟ್ಟಿ ತಾಂಡಾದ ರತನ್ (20) ನಿನ್ನೆ (ಜು.29) ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ. ಆದರೆ ಆತನೂ ರಾತ್ರಿ ಹಾಸ್ಟೆಲ್ ಸಮೀಪದಲ್ಲಿದ್ದ ಮರಕ್ಕೆ ನೇಣಿ ಬಿಗಿದುಕೊಂಡು ಮೃತಪಟ್ಟಿದ್ದಾನೆ.
ಇದನ್ನೂ ಓದಿ: ಪಟಾಕಿ ಗೋದಾಮು ಬೆಂಕಿಗಾಹುತಿ; 9 ಸಾವು, ನೂರಕ್ಕೂ ಹೆಚ್ಚು ಮಂದಿ ಗಂಭೀರ
ಬೆಳಗ್ಗೆ (ಜು.29) ಮರದಲ್ಲಿ ಯುವಕನ ಶವ ನೇತಾಡುತ್ತಿರುವುದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮೃತದೇಹವನ್ನು ಕೆಳಗಿಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಇಬ್ಬರು ಬಿ.ಕಾಂ ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಮಕ್ಕಳ ವಿಡಿಯೊ ವೈರಲ್ ಮಾಡಿದವರ ವಿರುದ್ಧ ಪೋಷಕರು ಪ್ರತ್ಯೇಕ ದೂರು ದಾಖಲು ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ