Site icon Vistara News

Self Harming : ಅಮ್ಮ ಮೊಬೈಲ್‌ ಚಾರ್ಜರ್‌ ಕೊಟ್ಟಿಲ್ಲ ಎಂಬ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪಿಯುಸಿ ಹುಡುಗ

Self Harming

ತುಮಕೂರು: ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಷಯಗಳಿಗಾಗಿ ಪ್ರಾಣ ಕಳೆದುಕೊಳ್ಳುವ ಚಾಳಿ (Self Harming) ಹೆಚ್ಚುತ್ತದೆ. ತಕ್ಷಣದ ಮಾನಸಿಕ ನೋವೋ, ಸಿಟ್ಟಿನ ಕಾರಣಕ್ಕೋ ಪ್ರಾಣವನ್ನೇ ಕಳೆದುಕೊಳ್ಳುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿವೆ. ಇಲ್ಲೊಬ್ಬ ಪಿಯುಸಿ ವಿದ್ಯಾರ್ಥಿ (PUC Student) ಅಮ್ಮ ಮೊಬೈಲ್ ಚಾರ್ಜರ್ (Mobile Charger) ಕೊಡಲಿಲ್ಲ ಎಂಬ ಬೇಸರದಲ್ಲಿ ನೇಣಿಗೇ ಶರಣಾಗಿದ್ದಾನೆ (Student suicide).

ತುಮಕೂರು ಜಿಲ್ಲೆಯ (Tumkur News) ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿಂಗರೆಡ್ಡಿಹಳ್ಳಿಯಲ್ಲಿ ಈ ದುರಂತ ನಡೆದಿದ್ದು, ನಿಖಿಲ್ ಗೌಡ (18) ಎಂಬಾತನೇ ನೇಣಿಗೆ ಶರಣಾಗಿರುವ ಯುವಕ.

ಆಶಾ ಕಾರ್ಯಕರ್ತೆಯಾಗಿರುವ ವರಲಕ್ಷ್ಮಮ್ಮ ಪುತ್ರ ನಿಖಿಲ್ ಗೌಡ ಪಾವಗಡ ಪಟ್ಟಣದ ಶಾಂತಿ ಎಸ್ಎಸ್ ಕೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ.

ಜುಲೈ 3೦ರಂದು ಭಾನುವಾರ ರಜೆ ಇದ್ದ ಕಾರಣ ನಿಖಿಲ್‌ ಮನೆಯಲ್ಲಿಯೇ ಇದ್ದ. ಈ ವೇಳೆ ತಾಯಿಯೊಂದಿಗೆ ನನಗೆ ಅದು ಕೊಡಿಸಿಲ್ಲ, ಇದು ಕೊಡಿಸಿಲ್ಲ ಎಂದು ಗಲಾಟೆ ಮಾಡಿದ್ದ. ಕೊನೆಗೆ ತಾಯಿಯ ಬಳಿ ನನಗೆ ಮೊಬೈಲ್ ಚಾರ್ಜರ್ ಕೊಡು ಎಂದು ಕೇಳಿದ್ದಾನೆ. ಆಗ ಅಮ್ಮ ನನ್ನ ಹತ್ತಿರ ಮೊಬೈಲ್ ಚಾರ್ಜರ್ ಇಲ್ಲವೆಂದು ಹೇಳಿದ್ದರು.

ಇಷ್ಟಾದ ಬಳಿಕ ತಾಯಿ ವರಲಕ್ಷ್ಮಮ್ಮ ಅವರು ಅಲ್ಲೇ ಹತ್ತಿರದ ಮನೆಯೊಂದರಲ್ಲಿ ಹೂ ಕಟ್ಟಲು ಹೋಗಿದ್ದರು. ಸ್ವಲ್ಪ ಹೊತ್ತು ಹೂವು ಕಟ್ಟಿ ಬಳಿಕ ವಾಪಸ್‌ ಮನೆಗೆ ಬಂದರು. ಬಂದಾಗ ಬಾಗಿಲು ಹಾಕಿತ್ತು. ಅವರು ಬಾಗಿಲು ಬಡಿದರೂ ನಿಖಿಲ್‌ ಗೌಡ ಬಾಗಿಲು ತೆಗೆಯಲಿಲ್ಲ.

ಅನುಮಾನಗೊಂಡು ಸ್ಥಳೀಯರ ಸಹಾಯದಿಂದ ಬಾಗಿಲು ಒಡೆದು ನೋಡಿದಾಗ ನಿಖಿಲ್‌ ಗೌಡ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಬಳಿಕ ಊರಿನ ಜನರೆಲ್ಲ ಸೇರಿ ಹೆಣವನ್ನು ಕೆಳಗಿಳಿಸಿ ಪೊಲೀಸರಿಗೆ ತಿಳಿಸಿದರು.

ಅಪ್ಪ ಇಲ್ಲ, ಅಮ್ಮನೇ ಇಲ್ಲ

ನಿಜವೆಂದರೆ ವರಲಕ್ಷ್ಮಮ್ಮ ಅವರು ಕಳೆದ ಎಂಟು ವರ್ಷಗಳಿಂದ ವರಲಕ್ಷ್ಮಮ್ಮ ಅವರು ಭಾರಿ ಕಷ್ಟದಿಂದ ಮಗನನ್ನು ಬೆಳೆಸಿದ್ದರು. ನಿಖಿಲ್‌ ಗೌಡನ ತಂದೆ ಎಂಟು ವರ್ಷದ ಹಿಂದೆಯೇ ಸಾವನ್ನಪ್ಪಿದ್ದಾರೆ. ಆ ಬಳಿಕ ತಾಯಿ ವರಲಕ್ಷ್ಮಮ್ಮ ಅವರು ಆಶಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಾ ಕುಟುಂಬ ನಿರ್ವಹಿಸುತ್ತಿದ್ದರು. ವರಲಕ್ಷ್ಮಮ್ಮ ಅವರಿಗೆ ತುಮಕೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮತ್ತೊಬ್ಬ ಪುತ್ರಿ ಇದ್ದಾರೆ. ಸ್ಥಳಕ್ಕೆ ವೈ.ಎನ್.ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: Self Harming: 3 ತಿಂಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದ ನವದಂಪತಿ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆ

ತುಮಕೂರು: ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಷಯಗಳಿಗಾಗಿ ಪ್ರಾಣ ಕಳೆದುಕೊಳ್ಳುವ ಚಾಳಿ (Self Harming) ಹೆಚ್ಚುತ್ತದೆ. ತಕ್ಷಣದ ಮಾನಸಿಕ ನೋವೋ, ಸಿಟ್ಟಿನ ಕಾರಣಕ್ಕೋ ಪ್ರಾಣವನ್ನೇ ಕಳೆದುಕೊಳ್ಳುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿವೆ. ಇಲ್ಲೊಬ್ಬ ಪಿಯುಸಿ ವಿದ್ಯಾರ್ಥಿ (PUC Student) ಅಮ್ಮ ಮೊಬೈಲ್ ಚಾರ್ಜರ್ (Mobile Charger) ಕೊಡಲಿಲ್ಲ ಎಂಬ ಬೇಸರದಲ್ಲಿ ನೇಣಿಗೇ ಶರಣಾಗಿದ್ದಾನೆ (Student suicide).

ತುಮಕೂರು ಜಿಲ್ಲೆಯ (Tumkur News) ಪಾವಗಡ ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿಂಗರೆಡ್ಡಿಹಳ್ಳಿಯಲ್ಲಿ ಈ ದುರಂತ ನಡೆದಿದ್ದು, ನಿಖಿಲ್ ಗೌಡ (18) ಎಂಬಾತನೇ ನೇಣಿಗೆ ಶರಣಾಗಿರುವ ಯುವಕ.

Exit mobile version