ಶಿವಮೊಗ್ಗ: ಟೂರಿಸ್ಟ್ ಟ್ಯಾಕ್ಸಿ ಚಾಲಕ (Tourist Taxi driver) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆಯೊಂದು ಶಿವಮೊಗ್ಗ ನಗರದಲ್ಲಿ (Shivamogga news) ನಡೆದಿದೆ. ಇಲ್ಲಿನ ವಿನೋಬನಗರ ಬಡಾವಣೆಯ 2ನೇ ಹಂತದಲ್ಲಿರುವ ಮನೆಯ ನಿವಾಸಿಯಾಗಿರುವ ಸುರೇಶ್ (45) ಆತ್ಮಹತ್ಯೆ ಮಾಡಿಕೊಂಡ ಟ್ಯಾಕ್ಸಿ ಚಾಲಕ. ಅವರು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.
ಟೂರಿಸ್ಟ್ ಟ್ಯಾಕ್ಸಿ ಚಾಲನೆ ಮಾಡಿಕೊಂಡಿದ್ದ ಸುರೇಶ್ ಅವರು ಸೋಮವಾರ ರಾತ್ರಿ ಮನೆಗೆ ಬಂದು ಊಟ ಮಾಡಿ ಕೊಠಡಿ ಸೇರಿಕೊಂಡಿದ್ದರು. ಸ್ವಲ್ಪ ಖಿನ್ನರಾಗಿದ್ದ ಅವರು ಬ್ಯುಸಿಯಾಗಿದ್ದು, ಊಟ ಮಾಡಿದ ಕೂಡಲೇ ಹೋಗಿ ಮಲಗಿಕೊಂಡಿದ್ದರು.
ಮುಂಜಾನೆ ಹೊತ್ತು ಕೊಠಡಿಯಲ್ಲಿ ದೀಪ ಉರಿಯುತ್ತಿದ್ದುದನ್ನು ಗಮನಿಸಿದ ಪತ್ನಿ ಕೊಠಡಿಯೊಳಗೆ ಹೋಗಿ ನೋಡಿದರು. ಆಗ ಸುರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದರು ಬಯಲಿಗೆ ಬಂದಿತ್ತು.
ಆದರೆ, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯೆಯ ಹಿಂದಿನ ಕಾರಣಗಳನ್ನು ಪರಿಶೀಲಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಳೆ ಮತ್ತಿತರ ಕಾರಣಗಳಿಗಾಗಿ ಬಾಡಿಗೆ ಕಡಿಮೆಯಾಗಿರುವುದು ಚಾಲಕರನ್ನು ಕಂಗೆಡಿಸಿದೆ. ಆದರೆ, ಸುರೇಶ್ ಅವರ ಸಾವಿಗೂ ಇದಕ್ಕೂ ಸಂಬಂಧವಿದೆಯಾ ಎನ್ನುವುದ ಗೊತ್ತಿಲ್ಲ.
ಇದನ್ನೂ ಓದಿ: Self Harming : ಅಮ್ಮ ಮೊಬೈಲ್ ಚಾರ್ಜರ್ ಕೊಟ್ಟಿಲ್ಲ ಎಂಬ ಬೇಸರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪಿಯುಸಿ ಹುಡುಗ
ಕೇದಾರನಾಥದಲ್ಲಿ ಚಿಕ್ಕಮಗಳೂರು ಮೂಲದ ಯುವಕ ಸಾವು
ಚಿಕ್ಕಮಗಳೂರು: ಕೇದಾರನಾಥ ಯಾತ್ರೆಗೆ (Kedaranatha yatre) ತೆರಳಿದ್ದ ಚಿಕ್ಕಮಗಳೂರು (Chikkamagaluru News) ಮೂಲದ ಯುವಕ ಅಲ್ಲಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದ ಯುವಕ ಗಿರೀಶ್ (25) ಮೃತ ಯುವಕ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಅಡುಗೆ ವೃತ್ತಿ ಮಾಡುತ್ತಿದ್ದ ಗಿರೀಶ್ ಅವರು ಕಳೆದ ವಾರ ಮೂಡಿಗೆರೆಯಿಂದ ಕೇದಾರನಾಥ ಯಾತ್ರೆಗೆ ತೆರಳಿದ್ದರು. ಕೇದಾರನಾಥದಲ್ಲಿ ಅಸ್ವಸ್ಥಗೊಂಡ ಅವರನ್ನು ಅಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರಿಷಿಕೇಶ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿರುವ ಗಿರೀಶ್ ಮೃತ ದೇಹವನ್ನು ಅದೇ ಆಸ್ಪತ್ರೆಯಲ್ಲಿ ಇಡಲಾಗಿದೆ. ಕೇದಾರನಾಥ ಪೊಲೀಸರು ಗಿರೀಶ್ ಸಾವನ್ನಪ್ಪಿರುವ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ಬಂದಿದೆ. ಇಲ್ಲಿಂದ ಅವರ ಕುಟುಂಬಿಕರು ಕೇದಾರನಾಥಕ್ಕೆ ಪ್ರಯಾಣಿಸಿದ್ದಾರೆ.
ಗಿರೀಶ್ ಅವರು ಒಬ್ಬರೇ ಹೋಗಿದ್ದರೇ ಅಥವಾ ಯಾವುದಾದರೂ ತಂಡದ ಜತೆಗೆ ಹೋಗಿದ್ದರೇ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ. ಮೂಡಿಗೆರೆ ಪೊಲೀಸರು ಕೂಡಾ ಪ್ರಕರಣದ ಮೇಲೆ ನಿಗಾ ಇಟ್ಟಿದ್ದಾರೆ.
ಇದನ್ನೂ ಓದಿ: Physical Abuse: ಸೋಶಿಯಲ್ ಮೀಡಿಯಾದಲ್ಲಿ ಗೆಳೆತನ; ಪ್ರೀತಿಯ ನಾಟಕವಾಡಿ ವಿದ್ಯಾರ್ಥಿನಿಯ ಗ್ಯಾಂಗ್‌ರೇಪ್