ಚಿಕ್ಕಬಳ್ಳಾಪುರ : ಇಲ್ಲಿನ ಬಾಗೇಪಲ್ಲಿ ಪಟ್ಟಣದಲ್ಲಿರುವ ಮಾನವ ಹಕ್ಕುಗಳ ರಕ್ಷಣಾ ಮತ್ತು ಭ್ರಷ್ಟಾಚಾರ ನಿಗ್ರಹ ತಂಡ ಕಚೇರಿಯಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು (Self Harming) ಮೃತಪಟ್ಟಿರುವ ಘಟನೆ ನಡೆದಿದೆ. ಜಿ.ಶ್ರೀನಿವಾಸ್ ಮೃತ ದುರ್ದೈವಿ.
ಶ್ರೀನಿವಾಸ್ ಬಾಗೇಪಲ್ಲಿ ಪಟ್ಟಣದ ವಾರ್ಡ್ ಒಂದರ ನಿವಾಸಿ ಆಗಿದ್ದಾರೆ. ಡೆತ್‌ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಖಾಸಗಿ ಕಛೇರಿಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದರಿಂದ ಅನುಮಾನ ಸೃಷ್ಟಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದ್ದಾರೆ. ಸ್ಥಳಕ್ಕೆ ಬಾಗೇಪಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಗಾಗಿ ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣವನ್ನು ದಾಖಲು ಮಾಡಲಾಗಿದೆ.
ಇದನ್ನೂ ಓದಿ: Self Harming : ಮತ್ತೊಬ್ಬಳನ್ನು ಮೋಹಿಸಿದ ಪತಿರಾಯ; ಬೇಸತ್ತು ವಿಷ ಸೇವಿಸಿದಳು
ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ
ಹಾವೇರಿ ತಾಲೂಕಿನ ಗುತ್ತಲ ಸಮೀಪದ ಗುಯಿಲಗುಂದಿ ಗ್ರಾಮದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರುದ್ರಗೌಡ ಭರಮಗೌಡ್ರ (61) ಮೃತ ದುರ್ದೈವಿ.
ಸಾಲಭಾದೆ ತಾಳಲಾರದೆ ಮನನೊಂದಿದ್ದ ರುದ್ರಗೌಡ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾವೇರಿಯ ಪಿಎಲ್‌ಡಿ ಬ್ಯಾಂಕ್, ಬೆಳವಗಿ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್, ರಾಣೇಬೆನ್ನೂರ ಇಕ್ವಿಟಾಸ್ ಫೈನಾನ್ಸ್ ಬ್ಯಾಂಕ್‌ಗಳಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದರು.
ರೇಷ್ಮೆ ಬೆಳೆ ಹಾಗೂ ಪ್ರವಾಹದಿಂದ ಗೋವಿನಜೋಳ, ಹತ್ತಿ ಬೆಳೆ ಹಾನಿಯಾಗಿತ್ತು. ಇದರಿಂದ ರೈತ ರುದ್ರಗೌಡ ಕಂಗಾಲಾಗಿದ್ದರು. ಹೀಗಾಗಿ ಆಗಸ್ಟ್ 6ರಂದು ಮನನೊಂದು ವಿಷ ಕುಡಿದಿದ್ದರು, ಕೂಡಲೇ ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಂಗಳವಾರದಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ