Site icon Vistara News

Theft case | ಏಳು ಮಂದಿ ಖತರ್ನಾಕ್‌ ಕಳ್ಳರು, ಸುಲಿಗೆಕೋರರ ಬಂಧನ: 2೦ ಲಕ್ಷ ಮೌಲ್ಯದ ಸೊತ್ತು ವಶ

Ballary kallaru

ಬಳ್ಳಾರಿ: ಮನೆಗಳ್ಳತನ, ಸರಗಳ್ಳತನ ಮತ್ತು ಸುಲಿಗೆ ಪ್ರಕರಣಕ್ಕೆ (Theft case) ಸಂಬಂಧಿಸಿದಂತೆ ಪೊಲೀಸರು ಏಳು ಆರೋಪಿಗಳನ್ನು ಬಂಧಿಸಿ, ಅವರಿಂದ ೨೨.೯೦ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ಕುಮಾರ್ ಬಂಡಾರು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬಳ್ಳಾರಿಯ ಬಂಡಿಹಟ್ಟಿಯಲ್ಲಿ ಮನೆಕಳ್ಳತನ ಮತ್ತು ವಿದ್ಯಾನಗರ, ಗಾಂಧಿನಗರ ಪ್ರದೇಶದಲ್ಲಿ ನಡೆದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಶರ್ಮಾಸ್, ಗಂಗಾಧರ್ ಮತ್ತು ಹನುಮಂತ ಎನ್ನುವ ಆರೋಪಿಗಳನ್ನು ಬಂಧಿಸಿ, ಮನೆಗಳ್ಳತನಕ್ಕೆ ಸಂಬಂಧಿಸಿದಂತೆ ೩೯೪ ಗ್ರಾಂ ಬಂಗಾರ, ೩೭೦ ಗ್ರಾಂ ಬೆಳ್ಳಿಯ ಆಭರಣ, ಒಂದು ಆಟೋ ಸೇರಿದಂತೆ ಒಟ್ಟು ೧೨.೯೦ ಲಕ್ಷ ಮೌಲ್ಯದ ವಸ್ತುಗಳನ್ನು ವಶಡಿಸಿಕೊಳ್ಳಲಾಗಿದೆ ಎಂದರು.

ಎರಡು ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ೯೦ ಗ್ರಾಂ ಬಂಗಾರ ಮತ್ತು ಸರಗಳ್ಳತನಕ್ಕೆ ಬಳಸಿದ ಒಂದು ಮೋಟರ್ ಸೈಕಲ್ ಸೇರಿದಂತೆ ೪.೮೫ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕುವೆಂಪು ನಗರದಲ್ಲಿ ಸೇವಕನಿಂದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಶೇಖರ್, ಮಾರುತಿ ಎನ್ನುವ ಆರೋಪಿಗಳನ್ನು ಬಂಧಿಸಿ, ಅವರಿಂದ ೩.೨೫ ಲಕ್ಷ ರೂ. ಮೌಲ್ಯದ ೬೫ ಗ್ರಾಂ ಬಂಗಾರ ವಶಪಡಿಸಿಕೊಳ್ಳಲಾಗಿದೆ. ಬಳ್ಳಾರಿ ಗೋಲ್ಡ್ ಸ್ಮಿತ್ ಬೀದಿ ಏರಿಯಾದಲ್ಲಿ ನಡೆದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ೧.೯೩ ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದರು.
ಪ್ರಕರಣ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದ ಕೌಲ್‌ ಬಜಾರ್‌ ಇನ್‌ಸ್ಪೆಕ್ಟರ್‌ ವಾಸು ಕುಮಾರ್ ತಂಡ ಮತ್ತು ಬ್ರೂಸ್‌ ಪೇಟೆ ಇನ್ಸ್‌ಪೆಕ್ಟರ್‌ ಷಣ್ಮುಖ ಅವರ ತಂಡವನ್ನು ಶ್ಲಾಘಿಸಿ, ಬಹುಮಾನ ಘೋಷಣೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ನಟರಾಜ್, ಡಿವೈಎಸ್ಪಿ ಶೇಖರಪ್ಪ ಇದ್ದರು.

ಇದನ್ನೂ ಓದಿ | Theft Case | ಕನ್ನ ಹಾಕುತ್ತಿದ್ದ ಅಳಿಯ, ಚಿನ್ನ ಮಾರುತ್ತಿದ್ದ ಅತ್ತೆ ಪೊಲೀಸರ ಬಲೆಗೆ

Exit mobile version