Site icon Vistara News

Boy drowned : ಗೆಳೆಯರೊಂದಿಗೆ ವಿಕ್ಟೋರಿಯಾ ಮಹಾರಾಣಿ ಕೆರೆಗೆ ಈಜಲು ತೆರಳಿದ್ದ‌ ಬಾಲಕ ಶವವಾಗಿ ಪತ್ತೆ

gadaga boy drowned

#image_title

ಗದಗ: ಗೆಳೆಯರೊಂದಿಗೆ ಈಜಲು ತೆರಳಿದ್ದ‌ ಬಾಲಕ ಶವವಾಗಿ (Boy drowned) ಪತ್ತೆಯಾಗಿದ್ದಾನೆ. ಗದಗ ಜಿಲ್ಲೆ ಡಂಬಳ ಗ್ರಾಮದ ವಿಕ್ಟೋರಿಯಾ‌ ಮಹಾರಾಣಿ ಕೆರೆಯಲ್ಲಿ ಘಟನೆ ನಡೆದಿದ್ದು, ಅರುಣ ಸಿದ್ಧಪ್ಪ ಯತ್ನಳ್ಳಿ (17) ಎಂಬ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ.

ಅರುಣ ಸಿದ್ಧಪ್ಪ ಮಂಗಳವಾರ ತನ್ನ ಮೂವರು ಗೆಳೆಯರೊಂದಿಗೆ ಕೆರೆಗೆ ಈಜಲು ತೆರಳಿದ್ದ. ಈ ವೇಳೆ ಕೆರೆಯಲ್ಲಿನ ಗುಂಡಿಯಲ್ಲಿ‌ ಸಿಲುಕಿ ನೀರಿನಲ್ಲಿ ಮುಳಗಿದ್ದ. ಮಂಗಳವಾರ ಸಂಜೆಯವರೆಗೆ ನಿರಂತರ ಶೋಧ ಕಾರ್ಯ ನಡೆಸಿದ್ದರೂ ಬಾಲಕ ಪತ್ತೆಯಾಗಿರಲಿಲ್ಲ. ಬುಧವಾರ ನುರಿತ ಈಜುಗಾರರ ಮೂಲಕ ಜಾಲಾಡಿದಾಗ ಆತನ ಶವ ಪತ್ತೆಯಾಗಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಸವಾರನಿಗೆ ಗಂಭೀರ ಗಾಯ

ರಿಪ್ಪನ್‌ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪಟ್ಟಣ ಸಮೀಪದ ಮೂಗೂಡ್ತಿ ಗ್ರಾಮದಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು (Road accident) ಓರ್ವ ವ್ಯಕ್ತಿಗೆ ಗಂಭೀರ ಗಾಯವಾಗಿರುವ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ.

ಮೂಗೂಡ್ತಿ – ತಳಲೆ ಮಾರ್ಗದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಸುಳಗೋಡು ಗ್ರಾಮದ ನಿವಾಸಿ ಮಂಜುನಾಥ್ ಎಂಬುವವರಿಗೆ ಗಂಭೀರ ಗಾಯಗಳಾಗಿದೆ. ಹಿಂಬದಿಯ ಬೈಕ್ ಸವಾರ ಕುಮಾರ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ತಳಲೆ ಮಾರ್ಗದ ಇಳಿಜಾರಿನಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಬೃಹತ್ ಮರ ಬಿದ್ದ ಹಿನ್ನೆಲೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಸಿಲುಕಿಕೊಂಡಿದ್ದಾರೆ. ತಕ್ಷಣ ಸ್ಥಳೀಯರು ಹಾಗೂ ಹೆದ್ದಾರಿಪುರ ಗ್ರಾಪಂ ಸದಸ್ಯ ಪ್ರವೀಣ್ ಸುಳುಗೋಡು ಇಬ್ಬರನ್ನು ಹೊರತೆಗೆದು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ.

ಮಂಜುನಾಥ್ ಎಂಬುವವರ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿರುವುದರಿಂದ ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಹಿನ್ನಲೆಯಲ್ಲಿ ಮೂಗೂಡ್ತಿ-ತಳಲೆ ಸಂಚಾರ ವ್ಯತ್ಯಯವಾಗಿದ್ದು, ಮರ ತೆರವುಗೊಳಿಸುವ ಕಾರ್ಯಾಚರಣೆ ಇನ್ನಷ್ಟೇ ನಡೆಯಬೇಕಾಗಿದೆ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ : Youth drowned: ಸ್ನೇಹಿತರೊಂದಿಗೆ ಈಜಲು ಹೋದ ಸಾಯಿರಾಮ್ ಕಾಲೇಜು ವಿದ್ಯಾರ್ಥಿ ನೀರುಪಾಲು

Exit mobile version