Site icon Vistara News

Sexual assault | ಅತ್ಯಾಚಾರಕ್ಕೆ ಯತ್ನಿಸಲು ಬಂದು ಮಹಿಳೆಗೆ ಥಳಿಸಿದ; ದೂರು ದಾಖಲಿಸಿಕೊಳ್ಳಲು ಮೀನಮೇಷ

Sexual Assault, Neet Student gang raped in kota Says Police

ದೊಡ್ಡಬಳ್ಳಾಪುರ: ಇಲ್ಲಿನ ದಡಿಘಟ್ಟಮಡಗು ಗ್ರಾಮದಲ್ಲಿ ಅದೇ ಗ್ರಾಮದ ನರಸೆಗೌಡ ಎಂಬಾತ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ತೀವ್ರ ವಿರೋಧ ವ್ಯಕ್ತಪಡಿಸಿದ್ದಕ್ಕೆ ಆಕೆಗೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ (Sexual assault) ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಗ್ರಾಮದ ನರಸೆಗೌಡ ಅಮಾನವೀಯ ಕೃತ್ಯ ಎಸಗಿದ್ದು, ಸಂತ್ರಸ್ತೆ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ನೆಲಕ್ಕೆ ಬಿಳಿಸಿ ಕಲ್ಲು, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ, ಕೈ ಕಾಲು, ತೊಡೆ ಮುಖಕ್ಕೆ ಖಾಸಗಿ ಅಂಗಗಳಿಗೆ ಹೊಡೆದಿದ್ದಾನೆ. ದುರಂತ ಎಂಬಂತೆ ಪತಿಯ ಅಟ್ಟಹಾಸಕ್ಕೆ‌ ನರಸೆಗೌಡನ ಪತ್ನಿ ಮುತ್ತಮ್ಮ ಸಾಥ್ ನೀಡಿದ್ದಳು ಎಂಬ ಆರೋಪವೂ ಇದೆ.

ಕಳೆದ‌ ಭಾನುವಾರ ಈ ಘಟನೆ ನಡೆದಿದ್ದು, ಹಲ್ಲೆ ನಡೆದು ವಾರ ಕಳೆದರೂ ಪೊಲೀಸರು ದೂರು ದಾಖಲಿಸಿಕೊಳ್ಳಲು ಮೀನಮೇಷ ಎಣಿಸುತ್ತಿದ್ದಾರೆ. ದೊಡ್ಡಬಳ್ಳಾಪುರ ಮಹಿಳಾ ಠಾಣೆ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ಹಾಕಿದ್ದಾರೆ. ವಿರೋಧ ಹೆಚ್ಚಾಗುತ್ತಿದ್ದಂತೆ ಶುಕ್ರವಾರ (ನ.25) ರಂದು ಘಟನೆ ಕುರಿತು ನರಸೆಗೌಡ ಮತ್ತು ಮುತ್ತಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ. ತೀವ್ರ ಗಾಯಗೊಂಡಿರುವ ಸಂತ್ರಸ್ತ ಮಹಿಳೆಯನ್ನು ದೊಡ್ಡಬಳ್ಳಾಪುರ ಸರ್ಕಾರಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ | Shivamogga News | ಆನೆ ಬಿಡಾರಕ್ಕಾಗಿ ಸೊಪ್ಪು ಕೀಳುವಾಗ ಮರದಿಂದ ಕಾಲು ಜಾರಿ ಬಿದ್ದು ವ್ಯಕ್ತಿ ಸಾವು

Exit mobile version