ಬೆಂಗಳೂರು: ಇಲ್ಲಿನ ಕೋಣನಕುಂಟೆಯಲ್ಲಿ ಅಪರಿಚಿತನೊಬ್ಬ ಯುವತಿಗೆ ಪತ್ರ ಬರೆದು ಕಿರುಕುಳ ನೀಡುತ್ತಿರುವ ವಿಚಿತ್ರ ಪ್ರಕರಣವೊಂದು (Sexual Assault) ಪೊಲೀಸರ ಮುಂದೆ ಬಂದಿದೆ.
ಯುವತಿಯ ಮನೆ ಬಾಗಿಲ ಮುಂದೆ ಪತ್ರ ಬರೆದಿಟ್ಟು, ಪರೋಕ್ಷವಾಗಿ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಫ್ಲ್ಯಾಟ್‌ನ ಬಾಗಿಲಿನ ಬಳಿ ಲೆಟರ್ ಇಟ್ಟು, ಕಾಲಿಂಗ್ ಬೆಲ್ ಒತ್ತಿ ಬಳಿಕ ವ್ಯಕ್ತಿ ಪರಾರಿ ಆಗಿದ್ದಾನೆ. ಮನೆಯ ಕಾಲಿಂಗ್ ಬೆಲ್ ಕೇಳಿ ಡೋರ್ ಓಪನ್ ಮಾಡಿದ್ದ ಮಹಿಳೆಗೆ ಲೆಟರ್ ಬಿಟ್ಟರೆ ಬೇರೆ ಯಾರೂ ಕಂಡಿರಲಿಲ್ಲ. ಲೆಟರ್ ತೆಗೆದು ನೋಡಿದರೆ ಅಸಭ್ಯವಾಗಿ ಬರೆದಿರುವುದು ಕಂಡುಬಂದಿದೆ.
ʻನನಗೆ ಸರ್ವೀಸ್ ಕೊಡುತ್ತೀರಾ? ಹಾಗಾದರೆ, ಬೇಸ್ಮೆಂಟ್‌ಗೆ ಬನ್ನಿʼ ಎಂದು ಪತ್ರದಲ್ಲಿ ಬರೆದಿತ್ತು. ಜತೆಗೆ ಒಂದು ದಿನಕ್ಕೆ 50 ಸಾವಿರ ಕೊಡುವುದಾಗಿಯೂ ಬರೆದಿದ್ದ! ಈ ಸಂಬಂಧ ಯುವತಿ ಅಪಾರ್ಟ್ಮೆಂಟ್‌ನ ಸಿಬ್ಬಂದಿ ಗಮನಕ್ಕೆ ತಂದಿದ್ದು, ಲೆಟರ್ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಅಪಾರ್ಟ್ಮೆಂಟ್‌ನಲ್ಲಿ ಇರುವವರನ್ನು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ | Farmer Suicide | ಸಾಲ ಬಾಧೆ ತಾಳಲಾರದೆ ಕೆರೆಗೆ ಹಾರಿ ರೈತ ಆತ್ಮಹತ್ಯೆ