Site icon Vistara News

sexual assault: ಬಸ್ ನಿಲ್ದಾಣದಲ್ಲಿ ರಾತ್ರಿ ನಿಂತಿದ್ದ ಯುವತಿಯ ಕರೆದೊಯ್ದ ಯುವಕರಿಂದ ಅತ್ಯಾಚಾರ

Gang rape by friends

ವಿಜಯಪುರ: ಇಲ್ಲಿನ ನಗರ ಕೇಂದ್ರ ಬಸ್‌ ನಿಲ್ದಾಣದಲ್ಲಿ ನಿಂತಿದ್ದ ಯುವತಿಯನ್ನು ಮೂವರು ಯುವಕರು ಪುಸಲಾಯಿಸಿ ಅತ್ಯಾಚಾರವೆಸಗಿರುವ (sexual assault) ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಈಕೆ ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗುತ್ತಿದೆ.

ಕಳೆದ ಜನವರಿ 17ರ ತಡರಾತ್ರಿ ಘಟನೆ ನಡೆದಿದ್ದು, ಕೇಂದ್ರ ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿಯನ್ನು ಮೂವರು ಯುವಕರು ಪುಸಲಾಯಿಸಿ ನಗರದ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ.

ನಿರ್ಜನ ಪ್ರದೇಶದಲ್ಲಿ ಯುವತಿಯನ್ನು ಹೆದರಿಸಿ ಒಬ್ಬ ಕಾಮುಕ ಅತ್ಯಾಚಾರ ಮಾಡಿದ್ದು, ಮತ್ತಿಬ್ಬರು ಸಹಾಯ ಮಾಡಿದ್ದಾರೆ. ಬಳಿಕ ಯುವತಿಯನ್ನು ಬಿಟ್ಟು ಪರಾರಿ ಆಗಿದ್ದಾರೆ. ಮರುದಿನ ಬೆಳಗ್ಗೆ (ಜನವರಿ 18) ನರಳುತ್ತಿದ್ದ ಯುವತಿಯನ್ನು ಕಂಡ ಸ್ಥಳೀಯರು, ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.

ಕೂಡಲೇ ಸ್ಥಳಕ್ಕೆ ಆಗಮಿಸಿದ ವಿಜಯಪುರ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಯುವತಿಯನ್ನು ವಿಚಾರಣೆ ನಡೆಸಿದಾಗ ಅತ್ಯಾಚಾರ ವಿಚಾರ ಬಹಿರಂಗವಾಗಿದೆ. ಅಸ್ವಸ್ಥಳಾಗಿರುವ ಯುವತಿಗೆ ಪೊಲೀಸರು ಚಿಕಿತ್ಸೆ ಕೊಡಿಸಿದ್ದು, ಸರ್ಕಾರಿ ಸ್ವಾಮ್ಯದ ಸಾಂತ್ವನ ಕೇಂದ್ರದಲ್ಲಿಟ್ಟಿದ್ದಾರೆ.

ಆರೋಪಿಗಳಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿದಿದ್ದು, ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Pathaan Film | ʼಪಠಾಣ್‌ʼಗೆಂದು ಶಾರುಖ್‌ ಪಡೆದಿರುವ ಸಂಭಾವನೆ ಎಷ್ಟು ಗೊತ್ತಾ? ಅಕ್ಷಯ್‌ಗಿಂತ ಇಷ್ಟೊಂದು ಕಡಿಮೆನಾ!

Exit mobile version