ಬೆಂಗಳೂರು: ಇಲ್ಲಿನ ಬೆಂಗಳೂರು ಟರ್ಫ್ ಕ್ಲಬ್ ಮಾಜಿ ಅಧ್ಯಕ್ಷನಿಂದ ಲೈಂಗಿಕ ಕಿರುಕುಳ (Sexual harassment) ಆರೋಪ ಕೇಳಿ ಬಂದಿದೆ. ಬಿಟಿಸಿ ಮಾಜಿ ಅಧ್ಯಕ್ಷ ಹರೀಂದರ್ ಶೆಟ್ಟಿ ವಿರುದ್ದ ಎಫ್‌ಐಆರ್ ದಾಖಲಾಗಿದ್ದು, ಬಾಣಸವಾಡಿ ಠಾಣೆ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಹೆಣ್ಣೂರು ಬಾಣಸವಾಡಿ ಕಾಸ್ಮೋಪಾಲಿಟನ್ ಕ್ಲಬ್ ಸೆಕ್ರೆಟರಿ ಆಗಿರುವ ಹರೀಂದರ್ ಶೆಟ್ಟಿ, ಕ್ಲಬ್ ಸದಸ್ಯೆಗೆ ಲೈಂಗಿಕ ಕಿರುಕಳ ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಶೆಟ್ಟಿ ವಿರುದ್ಧ ಐಪಿಸಿ ಸೆಕ್ಷನ್ 354 ಅಡಿಯಲ್ಲಿ ಕೇಸ್ ಹಾಕಲಾಗಿದೆ.
ಕಾಲ್ ಮಾಡಿ ಟಾರ್ಚರ್
ಆರೋಪಿ ಶೆಟ್ಟಿ ಚೇಂಬರ್‌ಗೆ ಕರೆಯಿಸಿಕೊಂಡು ಕಿರುಕುಳ ನೀಡುತ್ತಿದ್ದು, 2022ರ ಜುಲೈನಿಂದ ಸಂತ್ರಸ್ತೆಗೆ ಕರೆ ಮಾಡಿ ಟಾರ್ಚರ್ ನೀಡುತ್ತಿದ್ದಾರೆ. ಸಲುಗೆ ಬೆಳೆಸುವ ಉದ್ದೇಶದಿಂದ ಕರೆ ಮಾಡಿ ಕರೆಯುತ್ತಿದ್ದರು ಎಂದು ದೂರಿರುವ ಸಂತ್ರಸ್ತೆ, ಮೆಸೇಜ್ ಮಾಡಿ ಬೇರೆ ಬೇರೆ ಕ್ಲಬ್‌ಗೆ ಬರಲು ಒತ್ತಾಯಿಸಿದ್ದಾರೆ ಎಂಬ ಸಂಗತಿಯನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸೆಂಚೂರಿ ಕ್ಲಬ್, ಬೌರಿಂಗ್ ಕ್ಲಬ್ ಮುಂತಾದ ಕಡೆ ಸಂಜೆ ಹೊತ್ತು ಬರಲು ಹೇಳುತ್ತಿದ್ದರು. ಇದಕ್ಕೆ ಒಪ್ಪದೆ ಇದ್ದಾಗ ಸಂತ್ರಸ್ತೆಗೆ ಬೇರೆ ಬೇರೆ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದರು. ಜತೆಗೆ ಜಯ ಕರ್ನಾಟಕ ಸಂಘಟನೆಯವರನ್ನು ಮನೆಯ ಬಳಿ ಕಳಿಸಿ ಗಲಾಟೆ ಮಾಡಿಸುವ ಬೆದರಿಕೆ ಹಾಕಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ | Coronavirus | ಕೋವಿಡ್ ಬಗ್ಗೆ ಓವರ್ ಆ್ಯಕ್ಟಿಂಗ್ ಮಾಡಬಾರದು ಎಂದ ಆರ್. ಅಶೋಕ್: ಹೀಗೆ ಹೇಳಿದ್ದು ಡಾ. ಸುಧಾಕರ್ ಅವರಿಗಾ?