Site icon Vistara News

Sexual harrassment | ಶಾಲೆಯಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಪೋಕ್ಸೊ ಕಾಯಿದೆಯಡಿ ದೈಹಿಕ ಶಿಕ್ಷಕ ಅರೆಸ್ಟ್‌

sexual assault

ಬೆಂಗಳೂರು: ಹೆಬ್ಬಾಳ ಠಾಣೆ ವ್ಯಾಪ್ತಿಯಲ್ಲಿರುವ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ದೈಹಿಕ ಶಿಕ್ಷಕನನ್ನು ಬಂಧಿಸಲಾಗಿದೆ.

ಪೋಕ್ಸೊ ಕಾಯಿದೆಯಡಿ ಬಂಧಿತನಾಗಿರುವ ಶಿಕ್ಷಕನನ್ನು ಆಂಜಿನಪ್ಪ (೫೦) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿ ಮನೆಯಲ್ಲಿ ಮಂಕಾಗಿದ್ದ ಸಂದರ್ಭದಲ್ಲಿ ವಿಚಾರಿಸಿದ ಈ ಸಂಗತಿ ಬೆಳಕಿಗೆ ಬಂದಿದ್ದು, ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈಗ ಆರೋಪಿಯನ್ನು ಬಂಧಿಸಲಾಗಿದೆ.
ಈ ನಡುವೆ ಇದೇ ಶಿಕ್ಷಕ ಇನ್ನೂ ಹಲವು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವುದು, ಕಿರುಕುಳ ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನೂ ಮೂವರು ವಿದ್ಯಾರ್ಥಿನಿಯರು ಆಂಜಿನಪ್ಪ ವಿರುದ್ಧ ದೂರು ನೀಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ಹೆಬ್ಬಾಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪತ್ನಿಯ ಕೊಂದವನಿಗೆ ಜೀವಾವಧಿ ಶಿಕ್ಷೆ
೨೦೧೫ರ ಫೆಬ್ರವರಿಯಲ್ಲಿ ಪೀಣ್ಯ ಠಾಣಾ ವ್ಯಾಪ್ತಿಯಲ್ಲಿ ಪತ್ನಿಯನ್ನು ಕೊಂದು ಹಾಕಿದ್ದ ವ್ಯಕ್ತಿಯೊಬ್ಬನಿಗೆ ಕೋರ್ಟ್‌ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಪರಶುರಾಮ ದೇಸಾಯಿ ಎಂಬಾತ ಪತ್ನಿ ಯಲ್ಲಮ್ಮ ವರದಕ್ಷಿಣೆ ತರಲು ನಿರಾಕರಿಸಿದಳೆಂಬ ಕಾರಣಕ್ಕೆ ಆಕೆಯನ್ನು ಇರಿದು ಕೊಂದು ಹಾಕಿದ್ದ. ಇದೀಗ 72ನೇ‌ ಸಿಸಿಹೆಚ್ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ | Sexual harrassement | ಬಾಲಕಿಯ ಮುಂದೆ ಖಾಸಗಿ ಭಾಗಗಳ ಪ್ರದರ್ಶನ ಮಾಡಿದವನಿಗೆ ಠಾಣೆಯಲ್ಲೇ ಜಾಮೀನು!

Exit mobile version