ರಾಯಚೂರು: ಉಪನ್ಯಾಸಕನೊಬ್ಬನ ಲೈಂಗಿಕ ಕಿರುಕುಳಕ್ಕೆ (Sexual harrassment) ಕಾಲೇಜು ವಿದ್ಯಾರ್ಥಿನಿ ಬಲಿಯಾಗಿದ್ದಾಳೆ. ೧೭ ವರ್ಷದ ಬಾಲಕಿಯನ್ನು ತನ್ನ ಲೈಂಗಿಕ ದಾಹಕ್ಕೆ ಬಳಸಿಕೊಂಡಿದ್ದ ಈತ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
ಘಟನೆ ನಡೆದಿರುವುದು ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದಲ್ಲಿ. ಇಲ್ಲಿನ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿದ್ದ ೧೭ ವರ್ಷದ ಬಾಲಕಿ ಹಾಸ್ಟೆಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೇ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರ ಕೇರ್ ಟೇಕರ್ ಕೂಡಾ ಆಗಿ ಕೆಲಸ ಮಾಡುತ್ತಿದ್ದ ಉಪನ್ಯಾಸಕ ಆಕೆಯ ಮೆಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಖಾಸಗಿ ಕಾಲೇಜಿಗೆ ಸೇರಿದ ಹಾಸ್ಟಲ್ ಇದಾಗಿದ್ದು, ಅಲ್ಲಿದ್ದ ಬಾಲಕಿಯನ್ನು ಈ ಉಪನ್ಯಾಸಕ ಪುಸಲಾಯಿಸಿ, ಆಮಿಷ ಒಡ್ಡಿ ಬಹುಕಾಲದಿಂದ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದ ಎಂದು ಹೇಳಲಾಗಿದೆ. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದ ಬಾಲಕಿಯನ್ನು ಆತ ಆಗಾದ ತನ್ನ ಕೋಣೆಗೆ ಕರೆಸಿಕೊಂಡು ಲೈಂಗಿಕ ಕಿರಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಇದೀಗ ಘಟನೆಯಿಂದ ಆಕ್ರೋಶಿತರಾಗಿರುವ ಪೋಷಕರು ಮತ್ತು ಸಂಬಂಧಿಕರು ವಸತಿ ಶಾಲೆಗೆ ಮುತ್ತಿಗೆ ಹಾಕಿದ್ದಾರೆ. ಘಟನೆಯ ಬಳಿಕ ಉಪನ್ಯಾಸಕ ಪರಾರಿಯಾಗಿದ್ದಾನೆ. ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : Sexual harrassment | ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಹೈಸ್ಕೂಲ್ ಹೆಡ್‌ಮಾಸ್ಟರ್ ಮೇಲೆ ಪೋಕ್ಸೋ ಕೇಸ್