Site icon Vistara News

Sexual harrassment | 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಗರ್ಭಿಣಿ ಆದ ನಂತರ ಬೆಳಕಿಗೆ

sexual assault

ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಗ್ರಾಮವೊಂದರಲ್ಲಿ ೧೩ ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ (Sexual harrassment) ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂವರು ಕಾಮುಕರು ಸೇರಿ ಈ ಪುಟ್ಟ ಬಾಲಕಿಯನ್ನು ಪುಸಲಾಯಿಸಿ ಈ ಕೃತ್ಯ ಎಸಗಿದ್ದಾರೆ.

ಅದೇ ಗ್ರಾಮದ ಸ್ವಾಗತ್, ಸುದರ್ಶನ್, ಪಾಪಣ್ಣ ಅವರೇ ಈ ಕೃತ್ಯ ಎಸಗಿದ ದುಷ್ಕರ್ಮಿಗಳು. ಕೆಲವು ತಿಂಗಳ ಹಿಂದೆ ಈ ಪೈಶಾಚಿಕ ಕೃತ್ಯ ನಡೆದಿದ್ದು, ಬಾಲಕಿ ಗರ್ಭ ಧರಿಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.

ಬಾಲಕಿಯ ವರ್ತನೆಗಳು, ದೇಹದಲ್ಲಿ ಆಗುತ್ತಿರುವ ಬದಲಾವಣೆಯನ್ನು ಗಮನಿಸಿದ ಮನೆಯವರು ವಿಚಾರಣೆ ನಡೆಸಿದಾಗ ಆಕೆ ತನ್ನ ಮೇಲಾದ ದೌರ್ಜನ್ಯದ ಕಥೆಯನ್ನು ಹೇಳಿದ್ದಾಳೆ. ಮನೆಯವರು ಕೂಡಲೇ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ತಿಳಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇದೀಗ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಲಾಗಿದೆ.

ಇದನ್ನೂ ಓದಿ | Sexual Assault | ಶಾಲೆಗೆ ಹೋಗಿದ್ದ ಬಾಲಕಿ ಅಪಹರಣ; ಗುಜರಾತಿಗೆ ಹೊತ್ತೊಯ್ದ ಯುವಕನಿಂದ ಅತ್ಯಾಚಾರ

Exit mobile version