Site icon Vistara News

Sexual harrassment | 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ದುಷ್ಕರ್ಮಿಗೆ ಪತ್ನಿಯಿಂದಲೂ ಬೆಂಬಲ?

Mylarappa sexual harrassment

ಧಾರವಾಡ: ತಾಲೂಕಿನ ಗ್ರಾಮವೊಂದರಲ್ಲಿ ಪಕ್ಕದ ಮನೆಯ ವ್ಯಕ್ತಿಯೇ ೧೭ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ (Sexual harrassment) ನಡೆಸಿದ್ದು, ಆತನಿಗೆ ಅವನ ಹೆಂಡತಿಯೂ ಬೆಂಬಲ ನೀಡಿದ್ದಾಳೆ ಎಂದು ಆರೋಪಿಸಲಾಗಿದೆ.

ಮೈಲಾರಪ್ಪ‌ ಚಿಕ್ಕುಂಬಿ ಎಂಬಾತನೇ ಬಾಲಕಿ ಮೇಲೆ ದೌರ್ಜನ್ಯ ನಡೆಸಿರುವ ಆರೋಪಿಯಾಗಿದ್ದಾನೆ. ಆರೋಪಿ ಮತ್ತು ಬಾಲಕಿ ಅಕ್ಕಪಕ್ಕದ ಮನೆಯಲ್ಲೇ ವಾಸಿಸುತ್ತಿದ್ದು, ಇದರ ಲಾಭವನ್ನು ಪಡೆದುಕೊಂಡ ಆರೋಪಿ ಆಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಪಕ್ಕದ ಮನೆಯ ವ್ಯಕ್ತಿ ಎಂಬ ನೆಲೆಯಲ್ಲಿ ಬಾಲಕಿ ಆತನೊಂದಿಗೆ ಗೌರವ ಭಾವದಿಂದ ಆತ್ಮೀಯವಾಗಿದ್ದರೆ ಆತ ಆಕೆಯನ್ನು ಪುಸಲಾಯಿಸಿ ದುರ್ಬಳಕೆ ಮಾಡಿಕೊಂಡಿದ್ದ ಎನ್ನಲಾಗಿದೆ. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಆರೋಪಿಯ ಪತ್ನಿ ಕೂಡಾ ಪ್ರೇರಣೆ ನೀಡಿರುವ ಆರೋಪ ವ್ಯಕ್ತವಾಗಿದೆ.

ಬಾಲಕಿಯ ತಾಯಿ ಆರೋಪಿ ಮೈಲಾರಪ್ಪ ಹಾಗೂ ಆತನ ಪತ್ನಿ ಲಕ್ಷ್ಮಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Sexual harrassement | ದಲಿತ ಮಹಿಳೆ ಮೇಲೆ ಅತ್ಯಾಚಾರ: ಸ್ಯಾಂಟ್ರೋ ರವಿ ಮೇಲೆ ಕೇಸ್‌, ರಾಜಕೀಯ ನಾಯಕರ ಆಪ್ತನೇ ಇವನು?

Exit mobile version