ಬೆಂಗಳೂರು: ಶಕ್ತಿ ಯೋಜನೆ (Shakti Scheme) ಬಂದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ಸುದ್ದಿ ಆಗುತ್ತಲೆ ಇದೆ. ಸೀಟ್‌ಗಾಗಿ ಜಗಳವು ಸಾಮಾನ್ಯವಾಗಿದೆ. ಮಹಿಳಾ ಪ್ರಯಾಣಿಕರನ್ನು ನಿಂದನೆ ಮಾಡಿದರೆ ಅಂತಹ ಚಾಲಕ, ನಿರ್ವಾಹಕರನ್ನು ಅಮಾನತು ಮಾಡುವ ಎಚ್ಚರಿಕೆಯನ್ನು ನೀಡಿತ್ತು. ಇದೀಗ ಪೋಷಕರೊಬ್ಬರು ಕಂಡಕ್ಟರ್ ಹಾಗೂ ಪ್ರಯಾಣಿಕರಿಬ್ಬರ ವಿರುದ್ಧ (Assault Case) ಠಾಣೆ ಮೆಟ್ಟಿಲೇರಿದ್ದಾರೆ.
ವಿದ್ಯಾರ್ಥಿಯೊಬ್ಬಳು ದೊಮ್ಮಲೂರುನಿಂದ ಕಾರ್ಪೊರೇಷನ್ ಹೋಗಲು ಬಿಎಂಟಿಸಿ ಬಸ್ ಹತ್ತಿದ್ದಳು. ಈ ವೇಳೆ ಕಂಡಕ್ಟರ್ ಬಂದಾಗ ವಿದ್ಯಾರ್ಥಿನಿ ತನ್ನ ಬಳಿಯಿದ್ದ ಆಧಾರ್ ಕಾರ್ಡ್ ತೋರಿಸಿದ್ದಾಳೆ. ಈ ವೇಳೆ ಆಧಾರ್ ಕಾರ್ಡ್‌ನಲ್ಲಿ ಕನ್ನಡ ಇರಬೇಕು, ಟಿಕೆಟ್ ತೆಗೆದುಕೋ ಇಲ್ಲವಾದರೆ ಇಳಿಯೆಂದು ಒತ್ತಾಯಿಸಿದ್ದಾರೆ. ಆಗ ತಕ್ಷಣ ಹಣ ಕೊಟ್ಟು ಟಿಕೆಟ್‌ನ್ನು ತೆಗೆದುಕೊಂಡಿದ್ದಾಳೆ.
ಇಷ್ಟಕ್ಕೆ ಸುಮ್ಮನಾಗದ ಕಂಡಕ್ಟರ್ ವಿದ್ಯಾರ್ಥಿಯ ಕೈಯಿಂದ ಆಧಾರ್ ಕಾರ್ಡ್ ಕಸಿದುಕೊಂಡು ಬಸ್‌ನಲ್ಲಿದ್ದ ಇತರೆ ಪ್ರಯಾಣಿಕರಿಗೆ ತೋರಿಸಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಬಾಲಕಿ ಬೇರೆಯವರಿಗೆ ಯಾಕೆ ಆಧಾರ್‌ಕಾರ್ಡ್ ತೋರಿಸುತ್ತೀರಿ ಎಂದು ಪ್ರಶ್ನಿಸಿದ್ದಾಳೆ. ಈ ವೇಳೆ ಅಲ್ಲಿದ್ದ ಪ್ರಯಾಣಿಕರಿಬ್ಬರು ನಿರ್ವಾಹಕರಿಗೆ ಸಾಥ್ ನೀಡಿ, ವಿದ್ಯಾರ್ಥಿನಿಗೆ ಮನಬಂದಂತೆ ಬೈದಿದ್ದಾರೆ.
ಹಣ ಕೊಟ್ಟು ಟಿಕೆಟ್ ತಗೊಂಡಿದ್ದರೂ, ಟಿಕೆಟ್ ಹರಿದ ಆರೋಪವೂ ಕೇಳಿ ಬಂದಿದೆ. ವಿದ್ಯಾರ್ಥಿನಿ ತಾನು ಇಳಿಯಬೇಕಿದ್ದ ನಿಲ್ದಾಣಕ್ಕೆ ಇಳಿಸದೇ ಬೇರೆ ಜಾಗದಲ್ಲಿ ಇಳಿಸಿದ್ದಾರೆ ಎನ್ನಲಾಗಿದೆ. ಕಂಡಕ್ಟರ್‌ಗೆ ಸಾಥ್ ಕೊಟ್ಟು, ಬಾಲಕಿಯನ್ನು ಕತ್ತು ಹಿಡಿದು ಹೊರದಬ್ಬಲು ಇಬ್ಬರು ಪ್ಯಾಸಂಜೆರ್‌ಗಳು ಸಾಥ್ ನೀಡಿದರು ಎನ್ನಲಾಗಿದೆ.
ಇದನ್ನೂ ಓದಿ: Rabies disease : ನನ್ನ ಅಂತ್ಯಕ್ರಿಯೆಗೆ ನೀನು ಬಾ ಎಂದು ಹೇಳುತ್ತಲೇ ಜೀವ ಬಿಟ್ಟ ಪ್ರೇಮಿ!
ಇತ್ತ ನಿಮ್ಮಪ್ಪ ಸಿಎಂ ಆ..? ಪಿಎಂ ಆ..? ನಿನ್ ವಿಡಿಯೊ ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕಿಬಿಡುತ್ತೇವೆ ಎಂದು ವಿದ್ಯಾರ್ಥಿನಿಗೆ ಇಬ್ಬರು ಪ್ರಯಾಣಿಕರು ಬೆದರಿಸಿದ್ದಾರೆ. ಜತೆಗೆ ಯಾರಿಗೆ ಬೇಕಾದರೂ ದೂರು ಕೊಡು ಎಂದು ಫೋನ್ ನಂಬರ್‌ನನ್ನು ಕೊಟ್ಟಿದ್ದಾನೆ. ಮಾತ್ರವಲ್ಲದೆ ಈ ಹುಡುಗಿನಾ ಕೆಳಗೆ ಇಳಿಸಿ ಬಿಡಿ ಎಂದಿದ್ದಾರೆ.
ಸದ್ಯ ಈ ಬಗ್ಗೆ ಹಲಸೂರು ಠಾಣೆಯಲ್ಲಿ ಪೋಷಕರು ದೂರು ನೀಡಿದ್ದಾರೆ. ವಿದ್ಯಾರ್ಥಿನಿಯೊಂದಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಅಸಭ್ಯವಾಗಿ ವರ್ತಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ವಿದ್ಯಾರ್ಥಿನಿಯಿಂದ ಏಕ ವಚನ ಪ್ರಯೋಗ
ಇನ್ನು ಈ ಪ್ರಕರಣದಲ್ಲಿ ವಿದ್ಯಾರ್ಥಿನಿಯು ಕಂಡಕ್ಟರ್‌ಗೆ ನಿಂದಿಸಿದ್ದಾರೆ ಎನ್ನಲಾಗಿದೆ. ಏಕ ವಚನದಲ್ಲಿ ಮಾತಾನಾಡಿದ್ದರಿಂದ ಸಿಟಿಗೆದ್ದು ಇತರೆ ಪ್ರಯಾಣಿಕರು ವಿದ್ಯಾರ್ಥನಿಗೆ ಬೈದಿದ್ದಾರೆ. ಈ ಸಂಬಂಧ ಪ್ರಯಾಣಿಕರು ವಿಡಿಯೊವನ್ನು ಮಾಡಿಕೊಂಡು ವಿದ್ಯಾರ್ಥಿನಿಗೆ ಬುದ್ಧಿವಾದ ಹೇಳಿದ್ದಾರೆ. ಇಬ್ಬರ ನಡುವಿನ ವಾಗ್ವಾದ ವಿಡಿಯೊ ವೈರಲ್ ಆಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ