Site icon Vistara News

Shakti Scheme: ಶಕ್ತಿ ಯೋಜನೆಯಿಂದ ಹುಟ್ಟಿಕೊಂಡ ವಿಚಿತ್ರ ಸಮಸ್ಯೆ! ನಿರ್ವಾಹಕರ ಕೊರಳಿಗೇ ಉರುಳು

shakti scheme karnataka

ಉಡುಪಿ: ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ (Free bus travel) ಒದಗಿಸುವ ಶಕ್ತಿ ಯೋಜನೆಯಿಂದ (Shakti Scheme) ಹುಟ್ಟಿಕೊಂಡಿರುವ ವಿಚಿತ್ರ ಸಮಸ್ಯೆಯೊಂದಯು ಹಲವು ಬಸ್‌ ನಿರ್ವಾಹಕರ ಉದ್ಯೋಗಕ್ಕೆ ಕುತ್ತಾಗಿದೆ.

ಈ ವಿಲಕ್ಷಣ ಘಟನೆ ಉಡುಪಿಯಲ್ಲಿ ನಡೆದಿರುವುದು ಹೀಗೆ: ಮಹಿಳೆಯೊಬ್ಬರು ಒಂದು ಬಸ್‌ನಲ್ಲಿ ಉಚಿತ ಪ್ರಯಾಣದ ಟಿಕೆಟ್ ಪಡೆದು ಇನ್ನೊಂದು ಬಸ್ ಏರಿದ್ದರು. ಭಟ್ಕಳದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಮಹಿಳೆ, ಉಡುಪಿಯಲ್ಲಿ ಬಸ್ಸಿನಿಂದ ಇಳಿದು ನೇರ ಧರ್ಮಸ್ಥಳಕ್ಕೆ ತೆರಳುವ ಇನ್ನೊಂದು ಬಸ್ ಏರಿದ್ದರು. ಮೊದಲಿನ ಬಸ್‌ನಲ್ಲಿ ಸೀಟು ಫುಲ್ ಆಗಿದ್ದ ಕಾರಣ, ಖಾಲಿ ಇದ್ದ ಇನ್ನೊಂದು ಬಸ್‌ಗೆ ಶಿಫ್ಟ್ ಆಗಿದ್ದರು. ಆದರೆ ಮೊದಲಿನ ಬಸ್ಸಿನ ಕಂಡಕ್ಟರ್, ಡ್ರೈವರ್‌ಗೆ ಮಾಹಿತಿ ನೀಡಿರಲಿಲ್ಲ.

ಇದರಿಂದಾಗಿ ಬಸ್ ಚೆಕಿಂಗ್ ಸಂದರ್ಭ ಎರಡೂ ಬಸ್ ನಿರ್ವಾಹಕರಿಗೆ ಆಪತ್ತು ಎದುರಾಗಿತ್ತು. ರಾಜ್ಯದಲ್ಲಿ ಇಂತಹ ಘಟನೆಗಳಿಂದ ಇದುವರೆಗೂ ಸುಮಾರು 300 ನಿರ್ವಾಹಕರು ಸಸ್ಪೆಂಡ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಶಕ್ತಿ ಯೋಜನೆಯಿಂದ ಬಡ ಬಸ್ ನಿರ್ವಾಹಕರ ಕೆಲಸಕ್ಕೆ ಕತ್ತರಿ ಬೀಳುತ್ತಿದೆ ಎನ್ನುವ ಆರೋಪ ಇದರಿಂದ ಕೇಳಿಬಂದಿದೆ.

ಕೆಟ್ಟು ನಿಲ್ಲುತ್ತಿರುವ ಬಸ್ಸುಗಳು, ಶಕ್ತಿ ಯೋಜನೆ ಕಾರಣ?

ಬೆಂಗಳೂರು: ಶಕ್ತಿ ಯೋಜನೆ ಜಾರಿ ಮಾಡಿ ಬಸ್ ನಿರ್ವಹಣೆಯನ್ನು ಸರ್ಕಾರ ಮರೆಯಿತೇ ಎಂಬ ಪ್ರಶ್ನೆ ಎದುರಾಗಿದೆ. ಸಿಲಿಕಾನ್ ಸಿಟಿ ರಸ್ತೆಗಳಲ್ಲಿ ಬಿಎಂಟಿಸಿ ಬಸ್ಸುಗಳು ಕೆಟ್ಟು ನಿಲ್ಲುತ್ತಿವೆ. ಬೆಂಗಳೂರಿನ ಟ್ರಾಫಿಕ್‌ಗೆ ಮತ್ತಷ್ಟು ʻಶಕ್ತಿ’ ತುಂಬುತ್ತಿರುವ ಬಸ್ಸುಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿರುವುದರಿಂದ ಟ್ರಾಫಿಕ್ ಜಾಮ್ ಕೂಡ ಆಗುತ್ತಿದೆ.

ಟ್ರಾಫಿಕ್ ಪೊಲೀಸ್ ಪೇಜ್‌ನಲ್ಲಿ ಪ್ರತಿನಿತ್ಯ ಇಂಥ ಹಲವು ಪ್ರಕರಣಗಳು ಉಲ್ಲೇಖವಾಗುತ್ತಿವೆ. ಈ ಹಿಂದೆ ಬೆಂಕಿ ಅವಘಡದಿಂದ ಕುಖ್ಯಾತಿ ಹೊಂದಿದ ಬಸ್ಸುಗಳು ಈಗ ತಾಂತ್ರಿಕ ದೋಷದ ಸಮಸ್ಯೆ ಎದುರಿಸುತ್ತಿವೆ. ಶಕ್ತಿ ಯೋಜನೆಗಾಗಿ ಹಣಕಾಸು ತೆಗೆದಿಡುತ್ತಿರುವ ಇಲಾಖೆ, ನಿರ್ವಹಣೆಗೆ ಕಡಿತ ಮಾಡಿದೆ ಎನ್ನಲಾಗುತ್ತಿದೆ. ಅದರಿಂದಾಗಿ ಈ ಸಮಸ್ಯೆ ಉಂಟಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ. ವೋಲ್ವೋ, ಎಲೆಕ್ಟ್ರಿಕ್ ಬಸ್‌ಗಳಿಗೂ ದುರಸ್ತಿ ಸಮಸ್ಯೆ ತಪ್ಪಿಲ್ಲ.

ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಸಾರಿಗೆ ಸಚಿವರು ಹಾರಿಕೆಯ ಉತ್ತರ ನೀಡಿದ್ದಾರೆ. ʼಬಸ್ಸುಗಳು ಸಾವಿರಾರು ಕಿ.ಮೀ ಓಡಾಡುತ್ತೆ. ಓಡಾಡಿದಾಗ ಕೆಟ್ಟು ನಿಲ್ಲೋದು ಸಹಜʼ ಎಂದಿದ್ದಾರೆ.

ಇದನ್ನೂ ಓದಿ: Shakti Scheme : ಶಕ್ತಿ ಯೋಜನೆಗೆ 3 ತಿಂಗಳು; 1,352 ಕೋಟಿ ರೂಪಾಯಿ ಮೌಲ್ಯದಲ್ಲಿ ಮಹಿಳಾ ಸಂಚಾರ!

Exit mobile version