Site icon Vistara News

Shankarnag Natakothsava: ರಂಗಪಯಣ ಬಳಗದಿಂದ ನ.20ರಿಂದ ʻಶಂಕರ್‌ ನಾಗ್‌ ನಾಟಕೋತ್ಸವʼ

Shankarnag Natakothsava

ಬೆಂಗಳೂರು: ʼರಂಗ ಪಯಣʼ ಬಳಗದಿಂದ ಶಂಕರ್‌ ನಾಗ್‌ ನಾಟಕೋತ್ಸವವು (Shankarnag Natakothsava) ಇದೇ ನವೆಂಬರ್ 20ರಿಂದ 24ರ ತನಕ ನಡೆಯಲಿದೆ. ನಾಟಕಗಳು ಮತ್ತು ಸಾಮಾಜಿಕ ಚಿಂತನೆಯುಳ್ಳ ಕಾರ್ಯಕ್ರಮಗಳು ನಡೆಯಲಿವೆ. ಶಂಕರ್‌ ನಾಗ್‌ ನಾಟಕೋತ್ಸವದಲ್ಲಿ ಈ ಬಾರಿ ಹೊರಗಿನಿಂದ ಹಲವಾರು ಕಲಾವಿದರು ಪಾಲ್ಗೊಳ್ಳಲು ಬರುತ್ತಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ʼಶಂಕರ್‌ನಾಗ್‌ ನಾಟಕೋತ್ಸವʼ ನಡೆಯುತ್ತಿದೆ.

ಐದು ದಿನಗಳ ಈ ನಾಟಕೋತ್ಸವದಲ್ಲಿ ಒಂದೊಂದು ದಿನ ಸದಭಿರುಚಿಯ ನಾಟಕ ಪ್ರದರ್ಶನ ಇರಲಿದೆ. ʼಸೋಮಾಲಿಯಾ ಕಡಲ್ಗಳ್ಳರುʼ, ʼಬದುಕು ಜಟಕಾ ಬಂಡಿʼ, ʼಗುಲಾಬಿ ಗ್ಯಾಂಗ್‌ʼ, ʼಮಹಾಬಲಯ್ಯನ ಕೋಟುʼ, ʼಆಲ್‌ ರೈಟ್‌ ಮಂತ್ರ ಮಾಂಗಲ್ಯʼ, ನಕ್ಷತ್ರ ಧೂಳು ನಾಟಕಗಳು ನಡೆಯಲಿವೆ.

ಯಾವ್ಯಾವ ದಿನ ಏನೆಲ್ಲ ಕಾರ್ಯಕ್ರಮಗಳು?

ನವೆಂಬರ್ 20, 2023

ಸಂಜೆ 6:00ಕ್ಕೆ: ರಂಗ ಗೀತೆಗಳು
ಸಂಜೆ 6.30ಕ್ಕೆ: ಉದ್ಘಾಟನಾ ಸಮಾರಂಭ
ಸಂಜೆ 7.30ಕ್ಕೆ ನಾಟಕ: ಸೋಮಾಲಿಯಾ ಕಡಲ್ಗಳ್ಳರು
ತಂಡ: ರಂಗಪಯಣ (ರಿ), ರಚನೆ, ಸಂಗೀತ, ನಿರ್ದೇಶನ: ರಾಜ್ ಗುರು

ನವೆಂಬರ್ 21, 2023

ಸಂಜೆ 5:00ಕ್ಕೆ: ಪುಸ್ತಕ ಬಿಡುಗಡೆ “ನನ್ನೊಳಗಿನ ಕಡಲು”
6.05ಕ್ಕೆ: ನಮ್ಮ ನಾಟಕ – ನಿಮ್ಮ ಮಾತು (ಗುಲಾಬಿ ಗ್ಯಾಂಗು 100ರ ಸಂಭ್ರಮ ಪ್ರಯುಕ್ತ ಸಂವಾದ ಕಾರ್ಯಕ್ರಮ)
7.15ಕ್ಕೆ: ನಾಟಕ: ಬದುಕು ಜಟಕಾ ಬಂಡಿ
ತಂಡ: ಸಾತ್ವಿಕ, ರಚನೆ : ರಾಜ್ ಗುರು, ವಿನ್ಯಾಸ/ಸಂಗೀತ/ನಿರ್ದೇಶನ: ಕೃಷ್ಣಮೂರ್ತಿ ಕವತ್ತಾರ್

ನವೆಂಬರ್‌ 22, 2023

ಸಂಜೆ 5:00ಕ್ಕೆ : ನಾಗರಕಟ್ಟೆ
6.00ಕ್ಕೆ ನಾಟಕ : ನಕ್ಷತ್ರದ ಧೂಳು
ತಂಡ : ರಂಗ ಕನಸು (ರಿ) ಮಂಡಲಗೇರಾ, ರಚನೆ : ಹರ್ಷಕುಮಾರ್ ಕುಗ್ವೆ, ನಿರ್ದೇಶನ : ಪ್ರವೀಣ್ ರೆಡ್ಡಿ ಗುಂಜಹಳ್ಳಿ
7.30ಕ್ಕೆ : ನಾಟಕ: ಗುಲಾಬಿ ಗ್ಯಾಂಗು (100ನೇ ಪ್ರದರ್ಶನ)
ರಂಗರೂಪ : ಪ್ರವೀಣ್ ಸೂಡ, ರಚನೆ/ಸಂಗೀತ/ನಿರ್ದೇಶನ: ರಾಜ್ ಗುರು

ನವೆಂಬರ್ 23, 2023

ಸಂಜೆ 5:00ಕ್ಕೆ: ಕಾವ್ಯ ಕಾರಣ (ಕಾವ್ಯಗಳ ಓದು)
6.05ಕ್ಕೆ: ‘ಏಕತಾರಿಯ ನಡಿಗೆ ಸಾಧನಕೇರಿಯ ಕಡೆಗೆ’ (ಹಾಡಿನ ಕಾರ್ಯಕ್ರಮ)
7.15: ನಾಟಕ : “ಮಹಾಬಲಯ್ಯನ ಕೋಟು”
ತಂಡ : ನಮ್ಮ ಹಳ್ಳಿ ಥಿಯೇಟರ್ (ರಿ), ಮೂಲ ರಚನೆ : ನಿಕೋಲಾಯ್ ಗೊಗೋಲ್ ರಂಗ ರೂಪ/ನಿರ್ದೇಶನ : ಪ್ರೊ. ಎಸ್. ಸಿ. ಗೌರಿಶಂಕರ್

ನವೆಂಬರ್ 24, 2023

ಸಂಜೆ 5.30 ಕ್ಕೆ : ರಂಗಗೀತೆಗಳು
6.00ಕ್ಕೆ : ಸಮಾರೋಪ ಸಮಾರಂಭ
7.05ಕ್ಕೆ : ನಾಟಕ – ಆಲ್ ರೈಟ್ ಮಂತ್ರಮಾಂಗಲ್ಯ
ತಂಡ: ಜಿ ಪಿ ಐ ಇ ಆರ್ ರಂಗತಂಡ ಮೈಸೂರು, ರಚನೆ: ಗಣೇಶ್ ಅಮೀನಗಡ, ನಿರ್ದೇಶನ: ಮೈಮ್ ರಮೇಶ್ ರಂಗಾಯಣ

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version