ಬೆಂಗಳೂರು ಗ್ರಾಮಾಂತರ: ಶಾಸಕ ಶರತ್ ಬಚ್ಚೇಗೌಡ ಹುಟ್ಟುಹಬ್ಬದಲ್ಲಿ ಝಣ ಝಣ ಕಾಂಚಾಣ ಸದ್ದು ಮಾಡಿದೆ. ತಮ್ಮ ನೆಚ್ಚಿನ ನಾಯಕನಿಗೆ ಅಭಿಮಾನಿಗಳು ಹೂವಿನ ಜತೆ ನೋಟುಗಳ ಸುರಿಮಳೆಗೈದಿರುವುದು (Cash shower) ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ಬೆಂಡಿಗಾನಹಳ್ಳಿ ನಡೆದಿದೆ.
ಶಾಸಕ ಶರತ್ ಬಚ್ಚೇಗೌಡ ಹುಟ್ಟುಹಬ್ಬ ಆಚರಣೆ ವೇಳೆ ಹೂ ಜತೆಗೆ ಹಣದ ಮಳೆ ಸುರಿಸಿ, ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಹಣದ ಮಳೆ ಸುರಿಯುತ್ತಿದ್ದಂತೆ ಎಚ್ಚೆತ್ತ ಶಾಸಕ ಶರತ್ ಬಚ್ಚೇಗೌಡ, ಕೆಳಕ್ಕೆ ಬಿದ್ದ ಹಣವನ್ನ ಸ್ವತಃ ಕೈಗೆತ್ತಿಕೊಂಡು ಜನರಿಗೆ ನೀಡಿದ್ದಾರೆ. ನಂತರ ಹಣ ಹಾಕದಂತೆ ಅಭಿಮಾನಿಗಳಿಗೆ ತಾಕೀತು ಮಾಡಿದ್ದಾರೆ.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೃಹತ್ ಸೇಬಿನ ಹಾರದೊಂದಿಗೆ ಶಾಸಕ ಶರತ್ ಬಚ್ಚೇಗೌಡ ಅವರಿಗೆ ಸ್ವಾಗತ ಕೋರಲಾಗಿದೆ. ಈ ವೇಳೆ ಹೂವಿನ ಜತೆಗೆ ನೋಟಿನ ಮಳೆ ಸುರಿಸಲಾಗಿದೆ. ಆದರೆ, ಸಂಭ್ರಮಾಚರಣೆ ವೇಳೆ ನೋಟಿನ ಸುರಿಮಳೆ ಮಾಡಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಹುಟ್ಟು ಹಬ್ಬವನ್ನು ಬೆಂಬಲಿಗರೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡಿರುವ ಶರತ್ ಬಚ್ಚೇಗೌಡ ಅವರು ಮುತ್ಸಂದ್ರ ಮತ್ತು ಸೂಲಿಬೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ ಒಂದರಂತೆ 2 ಆಂಬ್ಯುಲೆನ್ಸ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಒಟ್ಟು 30 ಲಕ್ಷ ರೂ. ಮೌಲ್ಯದ ಎರಡು ಮಿನಿ ಆ್ಯಂಬುಲೆನ್ಸ್‌ಗಳನ್ನು ಶಾಸಕರು ನೀಡಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಹೈದರಾಬಾದ್ನಲ್ಲಿ ಸಚಿವ ಶಿವಾನಂದ ಪಾಟೀಲ್ ಭಾಗವಹಿಸಿದ್ದ ನಡೆದ ವಿವಾಹ ಕಾರ್ಯಕ್ರಮದಲ್ಲಿ ನೋಟಿನ ಸುರಿಮಳೆಗೈದ ಘಟನೆ ನಡೆದಿತ್ತು. ಕವ್ವಾಲಿ ವೀಕ್ಷಿಸುತ್ತಿದ್ದ ವೇಳೆ ಸಚಿವ ಶಿವಾನಂದ ಪಾಟೀಲ್ ಮೇಲೆ ವ್ಯಕ್ತಿಯೊಬ್ಬರು ನೋಟುಗಳ ಮಳೆಗೈದಿದ್ದರು. ಆದರೆ, ಯಾವುದೇ ಪ್ರತಿರೋಧ ತೋರದಿದ್ದ ಹಿನ್ನೆಲೆಯಲ್ಲಿ ಸಚಿವರ ವಿರುದ್ಧ ವಿರೋಧ ಪಕ್ಷಗಳ ನಾಯಕರು ಆಕ್ರೋಶ ಹೊರಹಾಕಿದ್ದರು. ರಾಜ್ಯದಲ್ಲಿ ಒಂದೆಡೆ ಬರಗಾಲವಿದ್ದರೆ, ಮತ್ತೊಂದೆಡೆ ನಾಡಿನ ಜನರಿಂದ ಲೂಟಿ ಮಾಡಿದ ಹಣದಲ್ಲಿ ಮಂತ್ರಿಗಳು ಮಜಾ ಉಡಾಯಿಸುತ್ತಿದ್ದಾರೆ ಎಂದು ವಿಪಕ್ಷಗಳು ಕಿಡಿಕಾರಿದ್ದವು. ಇದೀಗ ಶರತ್ ಬಚ್ಚೇಗೌಡ ಹುಟ್ಟುಹಬ್ಬದಲ್ಲಿ ನೋಟಿನ ಸುರಿಮಳೆಗೈದಿರುವುದು ಕಂಡುಬಂದಿದೆ.
ಇದನ್ನೂ ಓದಿ | Congress politics: ಮಧು ಬಂಗಾರಪ್ಪಗೆ ಅಹಂ ತಲೆಗೇರಿದೆ; ಕಾಂಗ್ರೆಸ್ ಶಾಸಕ ಬೇಳೂರು ವಾಗ್ದಾಳಿ
ತಮ್ಮ ಹುಟ್ಟು ಹಬ್ಬವನ್ನು ಬೆಂಬಲಿಗರೊಂದಿಗೆ ಅದ್ಧೂರಿಯಾಗಿ ಆಚರಿಸಿಕೊಂಡ ಶರತ್ ಬಚ್ಚೇಗೌಡ ಅವರು ಮುತ್ಸಂದ್ರ ಮತ್ತು ಸೂಲಿಬೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ ಒಂದರಂತೆ 2 ಆಂಬುಲೆನ್ಸ್ಗಳನ್ನು ಕೊಡುಗೆಯಾಗಿ ನೀಡಿದರು. ಇನ್ನು ರೋಗಿಗಳ ಜೀವ ಉಳಿಸಲಿಕ್ಕೆ ಈ ಆಂಬುಲೆನ್ಸ್ ಸದ್ಬಳಕೆ ಆಗಲಿ ಎಂದು ಶಾಸಕ ಶರತ್ ಬಚ್ಚೇಗೌಡ ಹಾರೈಸಿದರು. ಒಟ್ಟು 30 ಲಕ್ಷ ರೂ. ಮೌಲ್ಯದ ಎರಡು ಮಿನಿ ಆ್ಯಂಬುಲೆನ್ಸ್‌ಗಳನ್ನು ವಿತರಣೆ ಮಾಡಿದ ನಂತರ, ಆಯಾ ಗ್ರಾಮ ಪಂಚಾಯತಿ ವತಿಯಿಂದ ಆ್ಯಂಬುಲೆನ್ಸ್‌ಗಳನ್ನು ನಿರ್ವಹಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ