1. ಕಾಂಗ್ರೆಸ್‌ಗೆ ಕೈಕೊಟ್ಟ ಶೆಟ್ಟರ್; ಬಿ.ವೈ. ವಿಜಯೇಂದ್ರ ಮೊದಲ ಆಪರೇಷನ್ ಸಕ್ಸಸ್
ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shetter) ಘರ್ ವಾಪ್ಸಿ (Ghar Wapsi) ಆಗಿದೆ. ಈ ಮೂಲಕ ಕಾಂಗ್ರೆಸ್‌ಗೆ ಠಕ್ಕರ್ ನೀಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ (Karnataka Election) ಟಿಕೆಟ್ ಸಿಗದ ಕಾರಣ ಮುನಿಸಿಕೊಂಡು ಕಾಂಗ್ರೆಸ್ ಹೋಗಿದ್ದ ಶೆಟ್ಟರ್, ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರ್ಪಡೆಯಾಗುವುದಿಲ್ಲ ಎಂದು ಹೇಳಿಕೊಂಡು ಬರುತ್ತಲೇ ಇದ್ದರು. ಈ ಎಲ್ಲದರ ನಡುವೆಯೂ ಅವರನ್ನು ರಿವರ್ಸ್ ಆಪರೇಷನ್ ಮೂಲಕ ಮರಳಿ ಗೂಡಿಗೆ ತರಲಾಗಿದೆ. ಬಿ.ವೈ. ವಿಜಯೇಂದ್ರ (BY Vijayendra) ಅವರು ರಾಜ್ಯಾಧ್ಯಕ್ಷರಾದ ಬಳಿಕ ನಡೆಸಿದ ಮೊದಲ ಆಪರೇಷನ್ ಇದಾಗಿದ್ದು, ಸಕ್ಸಸ್ ಆಗಿದೆ. ಅವರು ಹೇಳಿದಂತೆಯೇ ಮಾಡಿ ತೋರಿಸಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : Jagadish Shettar: ಶೆಟ್ಟರ್ ಬಿಜೆಪಿ ಸೇರ್ಪಡೆ ಏಕೆ? ಆರ್. ಅಶೋಕ್ ಹೇಳಿದ್ದಾರೆ ನಿಜ ಕಾರಣ!
ಇದನ್ನೂ ಓದಿ : Jagadish Shetter: ಬಿಜೆಪಿ ಹೈಕಮಾಂಡ್ ಜಗದೀಶ್ ಶೆಟ್ಟರ್‌ಗೆ ನೀಡಿದ ಆ 3 ಆಫರ್ ಏನು?
ಇದನ್ನೂ ಓದಿ :
2.ಮತ್ತೆ ಬಿಜೆಪಿ ತೆಕ್ಕೆಗೆ ನಿತೀಶ್ ಕುಮಾರ್? ಮೈತ್ರಿ ಛಿದ್ರ, ಯುದ್ಧಕ್ಕೂ ಮೊದಲೇ ಶಸ್ತ್ರತ್ಯಾಗ!
ನವದೆಹಲಿ/ಪಟನಾ: ಲೋಕಸಭೆ ಚುನಾವಣೆಯಲ್ಲಿ ಶತಾಯ ಗತಾಯ ಬಿಜೆಪಿಯನ್ನು ಸೋಲಿಸುವ ದೃಷ್ಟಿಯಿಂದ ಸುಮಾರು 28 ಪಕ್ಷಗಳು ಒಗ್ಗೂಡಿ ರಚಿಸಿದ ಮೈತ್ರಿಕೂಟದಲ್ಲಿ (India Bloc) ಈಗ ಭಿನ್ನಮತದ ಬಿರುಗಾಳಿ ಬೀಸಿದೆ. ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ಟಿಎಂಸಿಯು ಈಗಾಗಲೇ ಇಂಡಿಯಾ ಒಕ್ಕೂಟದ ಜತೆಗಿನ ಕೊಂಡಿ ಕಳಚಿಕೊಂಡಿದೆ. ಪಂಜಾಬ್‌ನಲ್ಲಿ ಏಕಾಂಗಿಯಾಗಿ ಸ್ಪಂದಿಸುವುದಾಗಿ ಆಮ್ ಆದ್ಮಿ ಪಕ್ಷವೂ ಘೋಷಿಸಿದೆ. ಇದರ ಬೆನ್ನಲ್ಲೇ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರು ಮತ್ತೆ ಬಿಜೆಪಿ ಜತೆ ಕೈಜೋಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಇದು ಈಗ ಇಂಡಿಯಾ ಮೈತ್ರಿಕೂಟದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
3. ಮೊದಲ ದಿನವೇ ರಾಮಮಂದಿರಕ್ಕೆ 5 ಲಕ್ಷ ಜನ ಭೇಟಿ; 3 ಕೋಟಿ ರೂ. ಆದಾಯ
ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರವು (Ram Mandir) ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಲಕ್ಷಾಂತರ ಭಕ್ತರು ಅಯೋಧ್ಯೆಯಲ್ಲಿ (Ayodhya) ಬೀಡುಬಿಟ್ಟಿದ್ದು, ‘ಬಾಲಕ ರಾಮ’ನ (ರಾಮಲಲ್ಲಾ) ದರ್ಶನಕ್ಕೆ ಹಾತೊರೆಯುತ್ತಿದ್ದಾರೆ. ಇನ್ನು ರಾಮಮಂದಿರವು ಭಕ್ತರ ದರ್ಶನಕ್ಕೆ ಮುಕ್ತವಾದ ಜನವರಿ 23ರಂದು ಬರೋಬ್ಬರಿ 5 ಲಕ್ಷ ಜನ ದರ್ಶನ ಪಡೆದಿದ್ದಾರೆ ಹಾಗೂ ಒಂದೇ ದಿನದಲ್ಲಿ 3.17 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ ಎಂದು ರಾಮಮಂದಿರ ಟ್ರಸ್ಟ್ ಮಾಹಿತಿ ನೀಡಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
4. ಒಪಿಎಸ್ ಜಾರಿ; ಅರೆಬರೆ, ತರಾತುರಿ ಆದೇಶವೆಂದ ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: 2006ರ ಏಪ್ರಿಲ್ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆ ಮೂಲಕ ಆಯ್ಕೆಯಾದ ನೌಕರರು, ರಾಷ್ಟ್ರೀಯ ಪಿಂಚಣಿ ಯೋಜನೆ (National pension scheme-NPS) ವ್ಯಾಪ್ತಿಯಿಂದ ಹಳೆಯ ಪಿಂಚಣಿ ಯೋಜನೆಗೆ (Old Pension Scheme-OPS) ಬದಲಾಗಲು ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆದರೆ, ಇದು ಅರೆಬರೆ, ತರಾತುರಿ ಆದೇಶ ಹೊರಡಿಸಿದೆಯೇ ಹೊರತು, ಸರ್ಕಾರಿ ನೌಕರರ ಮೇಲೆ ಪ್ರೀತಿ ಉಕ್ಕಿ ಅಲ್ಲ ಎಂದ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
5. ಪರಿಸರದ ನಾಡಿಮಿಡಿತ ಅರಿತ ನಾ. ಡಿಸೋಜ ಮುಡಿಗೆ ಪಂಪ ಪ್ರಶಸ್ತಿ ಕಿರೀಟ
ಬೆಂಗಳೂರು: ದ್ವೀಪ, ಮುಳುಗಡೆ, ಕಾಡಿನ ಬೆಂಕಿ ಸೇರಿದಂತೆ ಹತ್ತಾರು ಕಾದಂಬರಿಗಳ ಮೂಲಕ ಪರಿಸರದ ನೋವಿಗೆ ದನಿಯಾದ ಖ್ಯಾತ ಸಾಹಿತಿ ನಾ. ಡಿಸೋಜ (Writer Na. Dsouza) ಅವರನ್ನು ಕರ್ನಾಟಕ ಸರ್ಕಾರ (Karnataka Government) ನೀಡುವ 2023-24ನೇ ಸಾಲಿನ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ (Prestigious Pampa Award) ಆಯ್ಕೆ ಮಾಡಲಾಗಿದೆ. ಕನ್ನಡದ ಆದಿ ಕವಿ ಪಂಪನ ಹೆಸರಿನಲ್ಲಿ ನೀಡಲಾಗುವ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, 1987ರಿಂದ ಕನ್ನಡ ಸಾಹಿತ್ಯ ಲೋಕದ ಅನನ್ಯ ಸಾಧಕರಿಗೆ ಇದನ್ನು ನೀಡಲಾಗುತ್ತಿದೆ. ಕುವೆಂಪು ಅವರು ಈ ಪ್ರಶಸ್ತಿ ಸ್ವೀಕರಿಸಿದ ಮೊದಲ ಸಾಹಿತಿ. ಇದು ಐದು ಲಕ್ಷ ರೂ. ನಗದು ಮತ್ತು ಫಲಕವನ್ನು ಒಳಗೊಂಡಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
6. ಉತ್ತರ ಕರ್ನಾಟಕದಲ್ಲಿ ಭಾರಿ ಚಳಿ; ಉಳಿದೆಡೆ ಹೇಗಿದೆ ವಾತಾವರಣ?
ಬೆಂಗಳೂರು: ಮುಂದಿನ 24 ಗಂಟೆ ರಾಜ್ಯದ ಅಲ್ಲಲ್ಲಿ ಚಳಿಯ ವಾತಾವರಣ ಇರಲಿದೆ. ಕನಿಷ್ಠ ತಾಪಮಾನದಲ್ಲೂ ಇಳಿಕೆ ಕಾಣಲಿದೆ. ಉತ್ತರ ಕರ್ನಾಟಕ ಭಾಗದ ಕೆಲವು ಕಡೆ ಭಾರಿ ಪ್ರಮಾಣದಲ್ಲಿ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ತನ್ನ ಮುನ್ಸೂಚನಾ ವರದಿಯಲ್ಲಿ ಹೇಳಿದೆ. ಇದಲ್ಲದೆ, ದಕ್ಷಿಣ ಒಳನಾಡು (South Inland), ಕರಾವಳಿ (Coastal Karnataka) ಮತ್ತು ಮಲೆನಾಡು (Malnad Karnataka) ಜಿಲ್ಲೆಗಳಲ್ಲಿ ಒಣ ಹವೆಯ ಜತೆಗೆ ಕೆಲವು ಕಡೆ ಚಳಿ ತನ್ನ ಪ್ರದರ್ಶನವನ್ನು ಮುಂದುವರಿಸಲಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
7. ದೇಶದ ಏಳಿಗೆ ನೋಡಿ ಮತ ನೀಡಿ; ಫಸ್ಟ್ ಟೈಮ್ ಮತದಾರರಿಗೆ ಮೋದಿ ಕಿವಿಮಾತು
ನವದೆಹಲಿ: “ದೇಶದ ಏಳಿಗೆಗಾಗಿ ಯುವ ಮತದಾರರು ತಪ್ಪದೆ ಮತ ಚಲಾಯಿಸಬೇಕು” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮೊದಲ ಸಲ ಮತದಾನ ಮಾಡುತ್ತಿರುವವರಿಗೆ (First Time Voters) ಕಿವಿಮಾತು ಹೇಳಿದ್ದಾರೆ. ರಾಷ್ಟ್ರೀಯ ಮತದಾರರ ಹಿನ್ನೆಲೆಯಲ್ಲಿ ಆಯೋಜಿಸಿದ್ದ ನಮೋ ನವಮತದಾತ ಸಮ್ಮೇಳನದಲ್ಲಿ ವರ್ಚ್ಯುವಲ್ ವೇದಿಕೆ ಮೂಲಕ ಫಸ್ಟ್ ಟೈಮ್ ಮತದಾರರನ್ನು ಉದ್ದೇಶಿಸಿ ಮೋದಿ ಮಾತನಾಡಿದರು. ಇದೇ ವೇಳೆ ಅವರು ದೇಶದ ಜನತೆಗೆ ರಾಷ್ಟ್ರೀಯ ಮತದಾರರ ದಿನದ (National Voters Day) ಶುಭಾಶಯ ಕೋರಿದರು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಇದನ್ನೂ ಓದಿ : ಎಲ್ಲರೂ ಮೋದಿಯನ್ನೇ ಆಯ್ಕೆ ಮಾಡ್ತಾರೆ, ಚುನಾವಣೆಗಾಗಿ ಬಿಜೆಪಿ ಹೊಸ ‘ಹಾಡು’; ಕೇಳಿ
8. ವಿರಾಟ್ ಕೊಹ್ಲಿಗೆ ಐಸಿಸಿಯಿಂದ ಸಿಕ್ಕಿತು ಮತ್ತೊಂದು ಗೌರವ
ಬೆಂಗಳೂರು: 2023ನೇ ಸಾಲಿನ ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಭಾಜನರಾಗಿದ್ದಾರೆ. ಅವರು ತಂಡದ ಸಹ ಆಟಗಾರರಾದ ಶುಬ್ಮನ್ ಗಿಲ್ ಮತ್ತು ಮೊಹಮ್ಮದ್ ಶಮಿ ಅವರನ್ನು ಹಿಂದಿಕ್ಕಿ ನಾಲ್ಕನೇ ಬಾರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ 2012, 2017 ಮತ್ತು 2018 ರಲ್ಲಿ ಈ ಪ್ರಶಸ್ತಿಯನ್ನು ಪಡೆದಿದ್ದ ಕೊಹ್ಲಿ ಈಗ ಮತ್ತೊಮ್ಮೆ ಪ್ರತಿಷ್ಠಿತ ಗೌರ ಪಡೆದುಕೊಂಡಿದ್ದಾರೆ. ಇಲ್ಲಿಯೂ ವಿರಾಟ್ ಕೊಹ್ಲಿಯದ್ದು ಸಾಧನೆಯಾಗಿದೆ. ನಾಲ್ಕು ಬಾರಿ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ದಕ್ಷಿಣ ಆಫ್ರಿಕಾದ ದಂತಕಥೆ ಎಬಿ ಡಿವಿಲಿಯರ್ಸ್ ಅವರ ಮೂರು ಪ್ರಶಸ್ತಿಗಳನ್ನು ಪಡೆದಿದ್ದು, ಆರ್ಸಿಬಿ ಸಹ ಆಟಗಾರನ ದಾಖಲೆಯನ್ನು ಮೀರಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
9. ದರ್ಶನ್ ಜತೆಗಿನ ಫೋಟೊ ಹಂಚಿಕೊಂಡ ಪವಿತ್ರಗೌಡ; ವಿಜಯಲಕ್ಷ್ಮಿ ಕೆಂಡಾಮಂಡಲ!
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan Thoogudeepa) ಹಾಗೂ ಪುತ್ರ ವಿನೀಶ್ ಜತೆಗಿನ ಫೋಟೊವನ್ನು ಪತ್ನಿ ವಿಜಯಲಕ್ಷ್ಮಿ ಇನ್‌ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ದರ್ಶನ್ ಜತೆ ಇರುವ ಪೋಟೊಗಳನ್ನ ಫ್ಯಾಷನ್ ಡಿಸೈನರ್ ಎಂದೆನಿಸಿಕೊಂಡಿರುವ ಪವಿತ್ರಗೌಡ ಪೋಸ್ಟ್ ಮಾಡಿದ್ದಾರೆ. ಮಾತ್ರವಲ್ಲ ದರ್ಶನ್ ಜತೆ ಇರುವ ಹಲವು ಫೋಟೊಗಳ ರೀಲ್ಸ್ ಹಂಚಿಕೊಂಡು ʻನಮ್ಮ ಸಂಬಂಧಕ್ಕೆ 10 ವರ್ಷಗಳಾಗಿವೆʼಎಂದು ಪವಿತ್ರಾ ಗೌಡ ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ. ತಮ್ಮ 10 ವರ್ಷಗಳ ರಿಲೇಶನ್‌ಶಿಪ್ ಸಂಭ್ರಮದ ಪೋಸ್ಟ್ ಮಾಡಿದ್ದ ಪವಿತ್ರಾ ವಿರುದ್ಧ ವಿಜಯಲಕ್ಷ್ಮಿ ಆಕ್ರೋಶ ಹೊರಹಾಕಿದ್ದಾರೆ. ಕಾನೂನು ಹೋರಾಟಕ್ಕಿಳಿಯುತ್ತೇನೆ ಎಂದು ಇದೀಗ ಸೋಷಿಯಲ್ ಮೀಡಿಯಾ ಮೂಲಕ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.
10. ಈ ವ್ಯಕ್ತಿಯ ವಯಸ್ಸು 93, ಆದರೆ ದೇಹ ಮಾತ್ರ 40ರ ಹರೆಯದ್ದು! ಇದು ಹೇಗೆ ಸಾಧ್ಯ?
ನವದೆಹಲಿ: 93 ವರ್ಷದ ವ್ಯಕ್ತಿಯೊಬ್ಬರು (93 Year old man) 40 ವರ್ಷದ ವ್ಯಕ್ತಿಯ ರೀತಿಯಂತೆ ತಮ್ಮ ದೇಹವನ್ನು ನಿರ್ವಹಣೆ ಮಾಡಿಕೊಂಡಿದ್ದಾರೆ(40 Year old man)! ಹೌದು, ಐರಿಸ್ ಮೂಲದ ರಿಚರ್ಡ್ ಮೊರ್ಗನ್ (Richard Morgan) ಅವರು ವಯಸ್ಸಿಗೆ ಮರು ವ್ಯಾಖ್ಯಾನ ಮಾಡಿದ್ದಾರೆ. ತಮ್ಮ 70ರ ಹರೆಯದಲ್ಲಿ ರೋಯಿಂಗ್(ಜಲಕ್ರೀಡೆ) ಕೈಗೆತ್ತಿಕೊಂಡಿದ್ದರೂ(rowing), ಅವರು ನಾಲ್ಕು ಬಾರಿ ಒಳಾಂಗಣ ರೋಯಿಂಗ್ ಚಾಂಪಿಯನ್ ಕೂಡ ಆಗಿದ್ದಾರೆ ಮತ್ತು ಈಗ ತಮ್ಮ ಯೌವನದ ಹೃದಯ ಮತ್ತು ಮೈಕಟ್ಟು ಮೂಲಕ ವಿಜ್ಞಾನಿಗಳನ್ನು ಬೆರಗುಗೊಳಿಸಿದ್ದಾರೆ(Fitness). ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ.