ಶಿವಮೊಗ್ಗ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಎಕ್ಸಾಸ್ಟ್ ಫ್ಯಾನ್ ಮುರಿದು ಒಳ ನುಗ್ಗಿ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈತ ಒಟ್ಟು 8 ಮನೆಗಳನ್ನು ಕಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ. ಚಿನ್ನಾಭರಣ ಸೇರಿ 7.77 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅಣ್ಣಾನಗರ 1 ನೇ ಅಡ್ಡರಸ್ತೆಯ ನಿವಾಸಿ ಸದ್ದಾಂ (31) ಬಂಧಿತ. ಅದೇ ರಸ್ತೆಯ ಬಸವರಾಜಪ್ಪ ಎಂಬುವವರ ಮನೆಯಲ್ಲಿ ಸದ್ದಾಂ ಕಳ್ಳತನ ಮಾಡಿದ್ದ.
ಇದನ್ನೂ ಓದಿ | Siddheshwar Swamiji | ಇಲ್ಲಿವೆ ಸಿದ್ದೇಶ್ವರ ಸ್ವಾಮೀಜಿ ಅವರ ಸರಳ ಜೀವನದಿಂದ ಹಿಡಿದು ಕಾಯಕ ಯೋಗಿವರೆಗಿನ ಫೋಟೊಗಳು
ನ.28 ರಂದು ಬಸವರಾಜಪ್ಪ ಅವರು ಪತ್ನಿಯೊಂದಿಗೆ ತಮ್ಮ ತೋಟಕ್ಕೆ ತೆರಳಿದ್ದರು. ಡಿ.2ರಂದು ಮರಳಿ ಬಂದಾಗ ಮನೆಯ ಬಾಗಿಲು ಹಾಕಿದಂತೆಯೇ ಇತ್ತು. ಬೆಡ್ ರೂಂಗೆ ಹೋದಾಗ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಪರಿಶೀಲಿಸಿದಾಗ ಎಕ್ಸಾಸ್ಟ್ ಫ್ಯಾನ್ ಮುರಿದು ಯಾರೋ ಒಳಗೆ ಪ್ರವೇಶ ಮಾಡಿರುವುದು ಗೊತ್ತಾಗಿದೆ. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಸದ್ದಾಂನನ್ನು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಈತ 8 ಮನೆಗಳ್ಳತನ ಮಾಡಿದ ಬಗ್ಗೆ ಬಾಯಿಬಿಟ್ಟಿದ್ದಾನೆ. ಬಂಧಿತನಿಂದ 7.22 ಲಕ್ಷ ರೂ. ಮೌಲ್ಯದ 144.50 ಗ್ರಾಂ ತೂಕದ ಚಿನ್ನಾಭರಣ, 21,700 ರೂ. ಮೌಲ್ಯದ 310 ಗ್ರಾಂ ತೂಕದ ಬೆಳ್ಳಿ ವಸ್ತುಗಳು, ಒಂದು ಮೊಬೈಲ್ ಫೋನ್, ಒಂದು ವಾಚ್, 2 ಟಿವಿಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಒಟ್ಟು ಮೌಲ್ಯ 7.77 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ | Nonstrike Run Out | ನಾನ್ಸ್ಟ್ರೈಕ್ನಲ್ಲಿ ರನ್ ಔಟ್ ಮಾಡಲು ಹೋಗಿ ತಾವೇ ಮೋಸ ಹೋದ ಆ್ಯಡಂ ಜಂಪಾ!