Site icon Vistara News

Shimoga News | 2ಎ ಮೀಸಲಾತಿ ರಕ್ಷಣೆ ಜ.22ರಂದು ಬೃಹತ್ ಹಕ್ಕೊತ್ತಾಯ ಸಮಾವೇಶ

Narayana Hitarakshana horata Samiti hakkothaya samavesha

ಶಿವಮೊಗ್ಗ: ಹಿಂದುಳಿದ ಜಾತಿಗಳ 2ಎ ಮೀಸಲಾತಿ ರಕ್ಷಣೆ, ಸಮಾಜದ ಅಭಿವೃದ್ಧಿಗಾಗಿ ನಿಗಮ ಮಂಡಳಿ ಹಾಗೂ ಮುಳುಗಡೆ ಸಂತ್ರಸ್ತರ ಪುನರ್ವಸತಿ ಕುರಿತು ಬೃಹತ್ ಹಕ್ಕೊತ್ತಾಯ ಸಮಾವೇಶವನ್ನು ಶಿವಮೊಗ್ಗ (Shimoga News) ನಗರದ ಸೈನ್ಸ್ ಮೈದಾನದಲ್ಲಿ ಭಾನುವಾರ (ಜ.22) ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ನಾರಾಯಣ ಗುರು ಸಮಾಜ ಹಿತರಕ್ಷಣಾ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ತಿಳಿಸಿದ್ದಾರೆ.

ಶಿವಮೊಗ್ಗದ ಶ್ರೀ ನಾರಾಯಣ ಗುರು ವಿಚಾರ ವೇದಿಕೆ ಇವರ ಆಶ್ರಯದಲ್ಲಿ ಶ್ರೀ ನಾರಾಯಣ ಗುರು ಸಮಾಜ ಹಿತರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಈ ಸಮಾವೇಶವನ್ನು ಏರ್ಪಡಿಸಲಾಗಿದೆ ಎಂದು ಅವರು ಮಂಗಳವಾರ (ಜ.೩) ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇದನ್ನೂ ಓದಿ | Vehicle Fitness Certificate | ವಾಣಿಜ್ಯ ವಾಹನಗಳ ಎಫ್‌ಸಿ ನವೀಕರಣಕ್ಕೆ ಪೊಲೀಸ್ ಇಲಾಖೆಯ ಎನ್‌ಒಸಿ‌ ಕಡ್ಡಾಯ?

ಈಡಿಗ, ಬಿಲ್ಲವ, ನಾಮಧಾರಿ, ಪೂಜಾರಿ, ನಾಡರ್, ಗಾಣಿಗ ಮೊದಲಾದ 26 ಪಂಗಡಗಳು ಸೇರಿದಂತೆ ಹಿಂದುಳಿದ ಜಾತಿಗಳ ಸಮುದಾಯದ 100ಕ್ಕೂ ಮೇಲ್ಪಟ್ಟ ಪಂಗಡಗಳ 2ಎ ಮೀಸಲಾತಿಯು ಇಂದು ಸರ್ಕಾರದ ಪ್ರಬಲ ರಾಜಕೀಯ ಸಮುದಾಯಗಳ ಓಲೈಕೆ ನೀತಿಯಿಂದಾಗಿ ಕೈತಪ್ಪಿ ಹೋಗುವ ಮುಂಚೆ ನಾವು ಜಾಗೃತರಾಗಬೇಕಾಗಿದೆ. ಇಂದು ನಮ್ಮ ಮಕ್ಕಳ ಭವಿಷ್ಯವನ್ನು ರಕ್ಷಿಸಿಕೊಳ್ಳದಿದ್ದರೆ ಮುಂದಿನ ಜನಾಂಗ ನಮ್ಮನ್ನು ಕ್ಷಮಿಸುವುದಿಲ್ಲ ಎಂದರು.

ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.22ರಂದು ಶಿವಮೊಗ್ಗದ ಈಡಿಗ ಭವನದಿಂದ ಬೆಳಗ್ಗೆ 10 ಗಂಟೆಗೆ ಮೆರವಣಿಗೆ ಮೂಲಕ ಸಹಸ್ರಾರು ಸಂಖ್ಯೆಯಲ್ಲಿ ಸಮಾಜ ಬಾಂಧವರು ಸೈನ್ಸ್ ಮೈದಾನ ತಲುಪಲಿದ್ದಾರೆ. ಅಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, 50 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದರು.

ಇದನ್ನೂ ಓದಿ | Yuzvendra Chahal | ಭಾರತ ಪರ ಹೊಸ ದಾಖಲೆ ಬರೆಯುವ ಹಾದಿಯಲ್ಲಿ ಸ್ಪಿನ್ನರ್ ಯಜ್ವೇಂದ್ರ ಚಹಲ್​

Exit mobile version