Yuzvendra Chahal | ಭಾರತ ಪರ ಹೊಸ ದಾಖಲೆ ಬರೆಯುವ ಹಾದಿಯಲ್ಲಿ ಸ್ಪಿನ್ನರ್ ಯಜ್ವೇಂದ್ರ ಚಹಲ್​ - Vistara News

ಕ್ರಿಕೆಟ್

Yuzvendra Chahal | ಭಾರತ ಪರ ಹೊಸ ದಾಖಲೆ ಬರೆಯುವ ಹಾದಿಯಲ್ಲಿ ಸ್ಪಿನ್ನರ್ ಯಜ್ವೇಂದ್ರ ಚಹಲ್​

ಯಜ್ವೇಂದ್ರ ಚಹಲ್​ (Yuzvendra Chahal) ನಾಲ್ಕು ವಿಕೆಟ್​ ಉರುಳಿಸಿದರೆ ಭಾರತ ಪರ ಟಿ20 ಮಾದರಿಯಲ್ಲಿ ಗರಿಷ್ಠ ವಿಕೆಟ್​ ಕಬಳಿಸಿದ ಸಾಧನೆ ಮಾಡಲಿದ್ದಾರೆ.

VISTARANEWS.COM


on

t20
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಟೀಮ್​ ಇಂಡಿಯಾದ ಬೌಲರ್​ ಯಜ್ವೇಂದ್ರ ಚಹಲ್ (Yuzvendra Chahal) ಅವರು ಭಾರತ ಕ್ರಿಕೆಟ್​ ತಂಡದ ಪರ ಹೊಸ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರು ನಾಲ್ಕು ವಿಕೆಟ್​ಗಳನ್ನು ಉರುಳಿಸಿದರೆ ಟಿ20 ಮಾದರಿಯಲ್ಲಿ ಭಾರತ ಪರ ಗರಿಷ್ಠ ವಿಕೆಟ್​ ಪಡೆದ ಸಾಧನೆ ಮಾಡಲಿದ್ದಾರೆ.

32 ವರ್ಷದ ಬಲಗೈ ಸ್ಪಿನ್ನರ್​ ಯಜ್ವೇಂದ್ರ ಚಹಲ್​ ಅವರು 71 ಪಂದ್ಯಗಳಲ್ಲಿ 87 ವಿಕೆಟ್​ಗಳನ್ನು ಉರುಳಿಸಿದ್ದಾರೆ. ಇನ್ನೂ ನಾಲ್ಕು ವಿಕೆಟ್​ಗಳನ್ನು ಉರುಳಿಸಿದರೆ ಅವರ ವಿಕೆಟ್​ಗಳ ಸಂಖ್ಯೆ 91ಕ್ಕೆ ಏರಿಕೆಯಾಗಲಿದೆ. ಭಾರತ ತಂಡದ ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ಅವರು ಪ್ರಸ್ತುತ 90 ವಿಕೆಟ್​ಗಳ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಚಹಲ್​ ನಾಲ್ಕು ವಿಕೆಟ್​ ಪಡೆದರೆ ಗರಿಷ್ಠ ವಿಕೆಟ್​ಗಳ ಸಾಧನೆ ಅವರ ಹೆಸರಲ್ಲಿ ದಾಖಲಾಗಲಿದೆ.

ಒಂದು ವೇಳೆ ಅವರು ಐದು ವಿಕೆಟ್​ ಕಬಳಿಸಿದರೆ ಮತ್ತೊಂದು ಎಲೈಗ್​ ಗುಂಪಿಗೆ ಸೇರ್ಪಡೆಯಾಗಲಿದ್ದಾರೆ. ತವರಿನಲ್ಲಿ ಆಡಿದ 35 ಪಂದ್ಯಗಳಲ್ಲಿ ಅವರು 45 ವಿಕೆಟ್​ ಉರುಳಿಸಿದ್ದು, ಐದು ವಿಕೆಟ್​ ಪಡೆದರೆ ತವರಿನ ವಿಕೆಟ್​ಗಳ ಅರ್ಧ ಶತಕ ಪೂರೈಸಲಿದ್ದಾರೆ.

ಇದನ್ನೂ ಓದಿ | IND VS SA | ಮೈದಾನದಲ್ಲೇ ಅಂಪೈರ್​ಗೆ ಗುದ್ದಿದ ಸ್ಪಿನ್ನರ್‌ ಯಜ್ವೇಂದ್ರ ಚಹಲ್​; ಏನಾಯಿತು ಅವರಿಗೆ?​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

India’s Jersey T20 World Cup: ಭಾರತ ತಂಡದ ಹೊಸ ಜೆರ್ಸಿ ಕಂಡು ಟ್ರೋಲ್​ ಮಾಡಿದ ನೆಟ್ಟಿಗರು

India’s Jersey T20 World Cup: ನೀಲಿ ಮತ್ತು ಕಿತ್ತಳೆ ಬಣ್ಣ ಮಿಶ್ರಿತ ಜೆರ್ಸಿಯಲ್ಲಿ ಅಂಗಿಯ ಭುಜಗಳು ಕಿತ್ತಳೆ ಬಣ್ಣದಲ್ಲಿದ್ದು, ಮೂರು ಬಿಳಿ ಬಣ್ಣದ ಪಟ್ಟಿಯನ್ನು ಹೊಂದಿದೆ. ಉಳಿದ ಭಾಗವು ನೀಲಿ ಬಣ್ಣದ್ದಾಗಿದೆ. ಶರ್ಟ್​ನ ಕಾಲರ್​ ಸುತ್ತಲೂ ತ್ರಿವರ್ಣದ ಪಟ್ಟಿ ಹೊಂದಿದೆ. ಬಹುತೇಕ ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೆ ಈ ಜೆರ್ಸಿ ಅಷ್ಟಾಗಿ ಇಷ್ಟವಾಗಿಲ್ಲ.

VISTARANEWS.COM


on

India’s Jersey T20 World Cup
Koo

ಮುಂಬಯಿ: ಮುಂಬರುವ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಗೆ ಟೀಮ್​ ಇಂಡಿಯಾದ ಹೊಸ ಜೆರ್ಸಿ(India’s Jersey T20 World Cup) ಸೋಮವಾರ ಪ್ರಕಟಗೊಂಡಿತ್ತು. ಇದೀಗ ಈ ನೂತನ ಜೆರ್ಸಿ ಕಂಡು ನೆಟ್ಟಿಗರು ಹಲವು ಮೀಮ್ಸ್​ಗಳ ಮೂಲಕ ಟ್ರೋಲ್​ ಮಾಡಲಾರಂಭಿಸಿದ್ದಾರೆ.

ಭಾರತ ತಂಡದ ಕಿಟ್​ ಪ್ರಯೋಜಕತ್ವ ಪಡೆದಿರುವ ಕ್ರೀಡಾ ಉಡುಪುಗಳ ಅಡಿಡಾಸ್​ ಕಂಪೆನಿ, ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಡಾಂಗಣದಲ್ಲಿ ಹೆಲಿಕಾಪ್ಟರ್ ಮೂಲಕ ದೈತ್ಯ ಗಾತ್ರದ ಹೊಸ ಜೆರ್ಸಿಯನ್ನು ಅನಾವರಣ ಮಾಡಲಾಗಿತ್ತು. ರೋಹಿತ್​ ಶರ್ಮ, ರವೀಂದ್ರ ಜಡೇಜಾ ಮತ್ತು ಕುಲ್​ದೀಪ್​ ಯಾದವ್​ ಒಳಗೊಂಡ ವಿಶೇಷ ವಿಡಿಯೊ ಇದಾಗಿತ್ತು.

ಹೊಸ ಜೆರ್ಸಿಯಲ್ಲಿ ರೋಹಿತ್​ ಶರ್ಮ, ವಿರಾಟ್ ಕೊಹ್ಲಿ, ಸೂರ್ಯಕುಮಾರ್​ ಯಾದವ್​, ಉಪನಾಯಕ ಹಾರ್ದಿಕ್​ ಪಾಂಡ್ಯ ಅವರ ಎಡಿಟೆಡ್​ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ಫೊಟೊ ಕಂಡ ಕೆಲ ನೆಟ್ಟಿಗರು ಇದು ಇಂಡಿಯನ್​ ಆಯಿಲ್​ ಕಂಪೆನಿಯ ಡ್ರೆಸ್​ನಂತಿದೆ,, ಹಾರ್ಫಿಕ್​ ಬಾಟಲ್​ ತರಾ ಇದೆ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಜೀತಾ​ಲಾಲ್​ ಚಂಪಕ್ಲಾಲ್ ಅವರಿಂದ ಸ್ಫೂರ್ತಿ ಪಡೆದು ಈ ಜೆರ್ಸಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ನೀಲಿ ಮತ್ತು ಕಿತ್ತಳೆ ಬಣ್ಣ ಮಿಶ್ರಿತ ಜೆರ್ಸಿಯಲ್ಲಿ ಅಂಗಿಯ ಭುಜಗಳು ಕಿತ್ತಳೆ ಬಣ್ಣದಲ್ಲಿದ್ದು, ಮೂರು ಬಿಳಿ ಬಣ್ಣದ ಪಟ್ಟಿಯನ್ನು ಹೊಂದಿದೆ. ಉಳಿದ ಭಾಗವು ನೀಲಿ ಬಣ್ಣದ್ದಾಗಿದೆ. ಶರ್ಟ್​ನ ಕಾಲರ್​ ಸುತ್ತಲೂ ತ್ರಿವರ್ಣದ ಪಟ್ಟಿ ಹೊಂದಿದೆ. ಬಹುತೇಕ ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೆ ಈ ಜೆರ್ಸಿ ಅಷ್ಟಾಗಿ ಇಷ್ಟವಾಗಿಲ್ಲ. ಇದೇ ಕಾರಣದಿಂದ ದಯವಿಟ್ಟು ಈ ಜೆರ್ಸಿಯನ್ನು ಬದಲಿಸಿ ಎಂದು ಬಿಸಿಸಿಐಗೆ ಸಲಹೆಯನ್ನೂ ನೀಡಿದ್ದಾರೆ. ಈ ಜೆರ್ಸಿ ಬದಲು 2019ರ ಏಕದಿನ ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಧರಿಸಿದ್ದ ಜೆರ್ಸಿ ಉತ್ತಮ ಎಂದು ನೆಟ್ಟಿಗರು ಹೇಳಿದ್ದಾರೆ.

ಇದನ್ನೂ ಓದಿ T20 World Cup 2024: ಟಿ20 ವಿಶ್ವಕಪ್​ಗೆ ಪ್ರಕಟಗೊಂಡ ಎಲ್ಲ ತಂಡಗಳ ಆಟಗಾರರ ಪಟ್ಟಿ

ಭಾರತ ತನ್ನ ಮೊದಲ ಪಂದ್ಯವನ್ನು ಜೂನ್‌ 5 ರಂದು ಐರ್ಲೆಂಡ್​ ವಿರುದ್ಧ ಆಡಲಿದೆ. ದ್ವಿತೀಯ ಪಂದ್ಯ ಜೂನ್‌ 9 ರಂದು ಪಾಕ್​ ವಿರುದ್ಧ ಆಡಲಿದ. ಭಾರತ ತನ್ನ ಎಲ್ಲ ಲೀಗ್‌ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಇದರಲ್ಲಿ ಮೂರು ಪಂದ್ಯಗಳು ನ್ಯೂಯಾರ್ಕ್‌ ಮತ್ತು ಒಂದು ಪಂದ್ಯ ಫ್ಲೋರಿಡಾದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು 55 ಪಂದ್ಯಗಳು ನಡೆಯಲಿವೆ. ಜೂನ್ 1ರಿಂದ 18ರವರೆಗೆ ಗುಂಪು ಹಂತದಲ್ಲಿ 40 ಪಂದ್ಯಗಳು ನಡೆದರೆ, ಜೂನ್ 19 ರಿಂದ 24 ರವರೆಗೆ ಸೂಪರ್ 8 ಪಂದ್ಯಗಳು ನಡೆಯಲಿವೆ. ಜೂನ್​ 29ಕ್ಕೆ ಫೈನಲ್​ ಪಂದ್ಯ ಸಾಗಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

Continue Reading

ಕ್ರೀಡೆ

MS Dhoni: ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಲು ಇದುವೇ ಪ್ರಮುಖ ಕಾರಣ

MS Dhoni: ಧೋನಿ ಸ್ನಾಯು ಸೆಳೆತದಿಂದ ಬಳಲುತ್ತಿದ್ದು ಹೆಚ್ಚು ಒತ್ತು ಬ್ಯಾಟಿಂಗ್​ ನಡೆಸಲು ಸಾಧ್ಯವಾಗದ ಕಾರಣ ಅವರು ಧರ್ಮಶಾಲಾದಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಆಡಿದ್ದಾರೆ ಎಂದು ತಿಳಿದು ಬಂದಿದೆ.

VISTARANEWS.COM


on

MS Dhoni
Koo

ಚೆನ್ನೈ: ಧರ್ಮಶಾಲಾದಲ್ಲಿ ನಡೆದಿದ್ದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಎಂಎಸ್ ಧೋನಿ(MS Dhoni) 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಿದ್ದರು. ಇದೇ ವಿಚಾರವಾಗಿ ಧೋನಿಯನ್ನು ಹಲವು ಮಾಜಿ ಆಟಗಾರರು ಟೀಕೆ ಮಾಡಿದ್ದರು. ಅನುಭವಿ ಆಟಗಾರನಾಗಿ ಈ ಕ್ರಮಾಂಕದಲ್ಲಿ ಆಡುವುದಾದರೆ ಚೆನ್ನೈ(Chennai Super Kings) ತಂಡ ಬೇರೆ ಆಟಗಾರನಿಗೆ ಅವಕಾಶ ನೀಡಿದರೆ ಉತ್ತಮ ಎಂದು ಮಾಜಿ ಆಟಗಾರ ಹರ್ಭಜನ್​ ಸಿಂಗ್​ ಹೇಳಿಕೆ ನೀಡಿದ್ದರು. ಆದರೆ ಧೋನಿ ಈ ಕ್ರಮಾಂಕದಲ್ಲಿ ಆಡಲು ಕಾರಣ ಏನೆಂಬುದು ತಡವಾಗಿ ಬೆಳಕಿಗೆ ಬಂದಿದೆ. ಧೋನಿ ಸ್ನಾಯು(Dhoni Muscle Tear) ನೋವಿನಿಂದ ಬಳಲುತ್ತಿದ್ದು ಹೆಚ್ಚು ಒತ್ತು ಬ್ಯಾಟಿಂಗ್​ ನಡೆಸಲು ಸಾಧ್ಯವಾಗದ ಕಾರಣ ಅವರು ಈ ನಿರ್ಧಾರ ಕೈಗೊಂಡಿದ್ದರು ತಂಡದ ಮೂಲಗಳು ಮಾಹಿತಿ ನೀಡಿದೆ.

ಧೋನಿ ಸ್ನಾಯು ಸೆಳೆತದ ನೋವಿನಿಂದ ಬಳಲುತ್ತಿದ್ದರೂ ಕೂಡ ಈ ನೋವನ್ನು ಮರೆಮಾಚಿ ಆಡುತ್ತಿದ್ದಾರೆ. ಈ ವಿಚಾರ ಯಾರಿಗೂ ತಿಳಿದಿಲ್ಲ. ನಾವು ವಾಸ್ತವಿಕವಾಗಿ ನಮ್ಮ ‘ಬಿ’ ತಂಡದೊಂದಿಗೆ ಆಡುತ್ತಿದ್ದೇವೆ. ಧೋನಿ ಅವರನ್ನು ಟೀಕಿಸುವವರಿಗೆ ಅವರು ಈ ತಂಡಕ್ಕಾಗಿ ಮಾಡುತ್ತಿರುವ ತ್ಯಾಗದ ಬಗ್ಗೆ ತಿಳಿದಿಲ್ಲ ”ಎಂದು ಸಿಎಸ್‌ಕೆ ಮೂಲಗಳು ತಳಿಸಿರುವುದಾಗಿ ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.

ಡೆವೊನ್ ಕಾನ್ವೇ ಲಭ್ಯವಿದ್ದರೆ ಅದು ಧೋನಿಗೆ ವಿಶ್ರಾಂತಿ ಪಡೆಯಲು ಮತ್ತು ಚೇತರಿಸಿಕೊಳ್ಳಲು ಸಹಾಯವಾಗುತ್ತಿತ್ತು. ಏಕೆಂದರೆ ಕಾನ್ವೆ ಅನುಭವಿ ವಿಕೆಟ್​ ಕೀಪರ್​ ಕಮ್​ ಬ್ಯಾಟರ್​ ಆಗಿದ್ದಾರೆ. ದುರಾದೃಷ್ಟವಶಾತ್ ಕಾನ್ವೆ ಹೆಬ್ಬೆರಳಿನ ಗಾಯದಿಂದಾಗಿ ಸಂಪೂರ್ಣವಾಗಿ ಐಪಿಎಲ್ ನಿಂದ ಹೊರಗುಳಿದಿದ್ದಾರೆ. ಹೀಗಾಗಿ ಧೋನಿಗೆ ಪರ್ಯಾಕ ವಿಕೆಟ್​ ಕೀಪರ್​ ಚೆನ್ನೈ ತಂಡದಲ್ಲಿಲ್ಲ. ತಂಡಕ್ಕೆ ಯಾವುದೇ ಹಿನ್ನಡೆಯಾಗಬಾರದೆಂದು ಧೋನಿ ತನ್ನ ನೋವಿನ ಮಧ್ಯೆಯೂ ಆಡುತ್ತಿದ್ದಾರೆ.

ಇದನ್ನೂ ಓದಿ IPL 2024: ಬಸ್‌ ಕಂಡಕ್ಟರ್‌ಗಳಿಗೆ ವಿಶೇಷ ಉಡುಗೊರೆ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್

ಈ ಬಾರಿಯ ಐಪಿಎಲ್​ನ ಮೊದಲ ಪಂದ್ಯದಲ್ಲಿಯೇ ಧೋನಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಕಂಡು ಬಂದಿತ್ತು. ಪಂದ್ಯದ ಬಳಿಕ ಅವರು ಹಲವು ಬಾರಿ ಕುಂಟುತಾ ನಡೆದ ವಿಡಿಯೊಗಳು ಕೂಡ ವೈರಲ್​ ಆಗಿತ್ತು. ಕಳೆದ ವರ್ಷ ಧೋನಿ ಗಾಯದ ಮಧ್ಯೆಯೇ ಸಂಪೂರ್ಣವಾಗಿ ನೋವು ನಿವಾರಕ ಪ್ಲಾಸ್ಟರ್​ ಸುತ್ತಿ ಟೂರ್ನಿ ಆಡಿದ್ದರು.

ತಂಡವನ್ನು 5 ಬಾರಿ ಚಾಂಪಿಯನ್​ ಮಾಡಿದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿಗೆ ಈ ಬಾರಿಯ ಐಪಿಎಲ್(IPL 2024)​ ಟೂರ್ನಿ ವಿದಾಯದ ಟೂರ್ನಿಯಾಗಲಿದೆ. ಈ ಮೂಲಕ ಧೋನಿ ಎಲ್ಲ ಮಾದರಿಯ ಕ್ರಿಕಟ್​ಗೂ ಗುಡ್​ಬೈ ಹೇಳಲಿದ್ದಾರೆ. ಇದೇ ಕಾರಣದಿಂದ ಅವರು ನಾಯಕತ್ವವನ್ನು ಋತುರಾಜ್​ ಗಾಯಕ್ವಾಡ್​ಗೆ ನೀಡಿದ್ದರು. ಧೋನಿ ಅವರು ಐಪಿಎಲ್​ ನಿವೃತ್ತಿಯಾದರೂ ಕೂಡ ಚೆನ್ನೈ ತಂಡದೊಂದಿಗಿನ ಒಡನಾಟ ಮಾತ್ರ ಮುಂದುವರಿಯುವ ಸಾಧ್ಯತೆ ಅಧಿಕವಾಗಿದೆ. ತಂಡದ ಮೆಂಟರ್​ ಆಗಿ ಅವರು ಕಾರ್ಯ ನಿರ್ವಹಿಸಬಹುದು. ಕಳೆದ ವರ್ಷವೇ ಧೋನಿ ಅವರು ಐಪಿಎಲ್​ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಮುಂದೆ ಹಾಕಿದ್ದರು.

Continue Reading

ಕ್ರೀಡೆ

T20 World Cup 2024: ಟಿ20 ವಿಶ್ವಕಪ್​ಗೆ ಪ್ರಕಟಗೊಂಡ ಎಲ್ಲ ತಂಡಗಳ ಆಟಗಾರರ ಪಟ್ಟಿ

T20 World Cup 2024: 20 ತಂಡಗಳ(t20 world cup 2024 teams) ಪೈಕಿ 7 ತಂಡಗಳು ಇನ್ನಷ್ಟೇ ತಂಡ ಪ್ರಕಟಿಸಬೇಕಿದೆ. ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಐರ್ಲೆಂಡ್, ನಮೀಬಿಯಾ, ನೆದರ್ಲ್ಯಾಂಡ್ಸ್, ಪಪುವಾ ನ್ಯೂ ಗಿನಿಯಾ ಈ ತಂಡಗಳಾಗಿವೆ.

VISTARANEWS.COM


on

T20 World Cup 2024
Koo

ದುಬೈ: ಬಹುನಿರೀಕ್ಷಿತ ಟಿ20 ವಿಶ್ವಕಪ್(T20 World Cup 2024)​ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ 20 ತಂಡಗಳ(t20 world cup 2024 teams) ಪೈಕಿ 7 ತಂಡಗಳು ಇನ್ನಷ್ಟೇ ತಂಡ ಪ್ರಕಟಿಸಬೇಕಿದೆ. ಉಳಿದ 13 ದೇಶಗಳು ತನ್ನ ಸಂಭಾವ್ಯ ತಂಡವನ್ನು ಪ್ರಕಟಿಸಿವೆ. ಇದೀಗ ಪ್ರಟಕಗೊಂಡಿರುವ ತಂಡಗಳ ಆಟಗಾರರ ಪಟ್ಟಿ ಇಂತಿದೆ.

ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಐರ್ಲೆಂಡ್, ನಮೀಬಿಯಾ, ನೆದರ್ಲ್ಯಾಂಡ್ಸ್, ಪಪುವಾ ನ್ಯೂ ಗಿನಿಯಾ ಇನ್ನಷ್ಟೇ ತಂಡ ಪ್ರಕಟಿಸಬೇಕಿರುವ ದೇಶಗಳು.

ಪ್ರಕಟಗೊಂಡ ತಂಡಗಳು


ಆಸ್ಟ್ರೇಲಿಯಾ ತಂಡ

ಮಿಚೆಲ್ ಮಾರ್ಷ್ (ನಾಯಕ), ಆ್ಯಶ್ಟನ್​ ಅಗರ್, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಿಚೆಲ್ ಸ್ಟಾರ್ಕ್, ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ.

ಇಂಗ್ಲೆಂಡ್​ ತಂಡ


ಜೋಸ್ ಬಟ್ಲರ್ (ನಾಯಕ), ಮೊಯಿನ್ ಅಲಿ, ಜೋಫ್ರಾ ಆರ್ಚರ್, ಜಾನಿ ಬೈರ್‌ಸ್ಟೋ, ಹ್ಯಾರಿ ಬ್ರೂಕ್, ಸ್ಯಾಮ್ ಕರ್ರಾನ್, ಬೆನ್ ಡಕೆಟ್, ಟಾಮ್ ಹಾರ್ಟ್ಲಿ, ವಿಲ್ ಜ್ಯಾಕ್ಸ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಆದಿಲ್ ರಶೀದ್, ಫಿಲ್ ಸಾಲ್ಟ್, ರೀಸ್ ಟೋಪ್ಲಿ, ಮಾರ್ಕ್ ವುಡ್.

ದಕ್ಷಿಣ ಆಫ್ರಿಕಾ ತಂಡ


ಐಡೆನ್ ಮಾರ್ಕ್ರಾಮ್ (ನಾಯಕ), ಒಟ್ನಿಯೆಲ್ ಬಾರ್ಟ್‌ಮ್ಯಾನ್, ಜೆರಾಲ್ಡ್ ಕೊಡ್ಜಿ, ಕ್ವಿಂಟನ್ ಡಿ ಕಾಕ್, ಜಾರ್ನ್ ಫಾರ್ಟುಯಿನ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಆನ್ರಿಚ್ ನಾರ್ಜೆ, ಕಗಿಸೊ ರಬಾಡಾ, ರಿಯಾನ್ ರಿಕೆಲ್ಟನ್, ಟ್ರೀಸ್ಟಾನ್ ಸ್ಟಬ್ಸ್​, ತಬ್ರೈಜ್ ಶಂಸಿ. ಮೀಸಲು ಆಟಗಾರು: ಲುಂಗಿ ಎನ್​ಗಿಡಿ, ಬರ್ಗರ್.

ಇದನ್ನೂ ಓದಿ T20 World Cup 2024: ಮಿನಿ ವಿಶ್ವಕಪ್​ ಸಮರಕ್ಕೆ ಡ್ರಾಪ್ -ಇನ್ ಪಿಚ್ ಅಳವಡಿಕೆ ಕಾರ್ಯ ಪೂರ್ಣ; ವಿಡಿಯೊ ವೈರಲ್​

ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

ಅಫಘಾನಿಸ್ಥಾನ ತಂಡ


ರಶೀದ್‌ ಖಾನ್‌ (ನಾಯಕ), ರೆಹಮಾನುಲ್ಲ ಗುರ್ಬಜ್‌, ಇಬ್ರಾಹಿಂ ಜದ್ರಾನ್‌, ಅಜ್ಮತುಲ್ಲ ಒಮರ್‌ಜಾಯ್‌, ನಜೀಬುಲ್ಲ ಜದ್ರಾನ್‌, ಮೊಹಮ್ಮದ್‌ ಇಶಾಖ್‌, ಮೊಹಮ್ಮದ್‌ ನಬಿ, ಗುಲ್ಬದಿನ್‌ ನೈಬ್‌, ಕರೀಂ ಜನ್ನತ್‌, ನಂಗ್ಯಾಲ್‌ ಖರೋಟಿ, ಮುಜೀಬ್‌ ಉರ್‌ ರೆಹಮಾನ್‌, ನೂರ್‌ ಅಹ್ಮದ್‌, ನವೀನ್‌ ಉಲ್‌ ಹಕ್‌, ಫ‌ಜಲ್‌ ಹಕ್‌ ಫಾರೂಖೀ, ಫ‌ರೀದ್‌ ಅಹ್ಮದ್‌ ಮಲಿಕ್‌. ಮೀಸಲು ಆಟಗಾರರು: ಸಾದಿಕ್‌ ಉಲ್ಲ ಅಟಲ್‌, ಹಜ್ರತುಲ್ಲ ಜಜಾಯ್‌, ಮೊಹಮ್ಮದ್‌ ಸಲೀಂ ಸಫಿ.

ನ್ಯೂಜಿಲ್ಯಾಂಡ್​ ತಂಡ


ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಟ್ರೆಂಟ್ ಬೌಲ್ಟ್, ಮೈಕೆಲ್ ಬ್ರೇಸ್‌ವೆಲ್, ಮಾರ್ಕ್ ಚಾಪ್‌ಮನ್, ಡೆವೊನ್ ಕಾನ್ವೆ, ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ. ಮೀಸಲು ಆಟಗಾರ: ಬೆನ್ ಸಿಯರ್ಸ್.

ಕೆನಾಡ ತಂಡ


ಸಾದ್ ಬಿನ್ ಜಾಫರ್ (ನಾಯಕ), ಆರನ್ ಜಾನ್ಸನ್, ದಿಲೋನ್ ಹೇಲಿಗರ್, ದಿಲ್‌ಪ್ರೀತ್ ಬಜ್ವಾ, ಹರ್ಷ್ ಠಾಕರ್, ಜೆರೆಮಿ ಗಾರ್ಡನ್, ಜುನೈದ್ ಸಿದ್ದಿಕಿ, ಕಲೀಮ್ ಸನಾ, ಕನ್ವರ್‌ಪಾಲ್ ತತ್‌ಗುರ್, ನವನೀತ್ ಧಲಿವಾಲ್, ನಿಕೋಲಸ್ ಕಿರ್ಟನ್, ಪರ್ಗತ್ ಸಿಂಗ್, ರವೀಂದರ್‌ಪಾಲ್ ಸಿಂಗ್, ರಾಯನ್‌ಖಾನ್‌ಸ್ಹಾನ್, ಶ್ವಾಖಾನ್‌ಸ್ಹಾನ್‌ಸ್ಯಾನ್. ಮೀಸಲು ಆಟಗಾರ: ತಜೀಂದರ್ ಸಿಂಗ್, ಆದಿತ್ಯ ವರದರಾಜನ್, ಅಮ್ಮರ್ ಖಾಲಿದ್, ಜತೀಂದರ್ ಮಥಾರು, ಪರ್ವೀನ್ ಕುಮಾರ್.

ನೇಪಾಳ ತಂಡ


ರೋಹಿತ್ ಪೌಡೆಲ್ (ನಾಯಕ), ಆಸಿಫ್ ಶೇಖ್, ಅನಿಲ್ ಕುಮಾರ್ ಸಾಹ್, ಕುಶಾಲ್ ಭುರ್ಟೆಲ್, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಲಲಿತ್ ರಾಜಬಂಶಿ, ಕರಣ್ ಕೆಸಿ, ಗುಲ್ಶನ್ ಝಾ, ಸೋಂಪಾಲ್ ಕಾಮಿ, ಪ್ರತಿಸ್ ಜಿಸಿ, ಸಂದೀಪ್ ಜೋರಾ, ಅಬಿನಾಶ್ ಬೋಹರಾ, ಸಾಗರ್ ಧಕಲ್, ಕಮಲ್ ಸಿಂಗ್ ಐರಿ.

ಒಮಾನ್​ ತಂಡ


ಅಕಿಬ್ ಇಲ್ಯಾಸ್ (ನಾಯಕ), ಜೀಶನ್ ಮಕ್ಸೂದ್, ಕಶ್ಯಪ್ ಪ್ರಜಾಪತಿ, ಪ್ರತೀಕ್ ಅಠವಲೆ (ವಿಕಿ), ಅಯಾನ್ ಖಾನ್, ಶೋಯೆಬ್ ಖಾನ್, ಮೊಹಮ್ಮದ್ ನದೀಮ್, ನಸೀಮ್ ಖುಷಿ (ವಿಕಿ), ಮೆಹ್ರಾನ್ ಖಾನ್, ಬಿಲಾಲ್ ಖಾನ್, ರಫಿಯುಲ್ಲಾ, ಕಲೀಮುಲ್ಲಾ, ಫಯಾಜ್ ಬಟ್, ಶಕೀಲ್ ಅಹ್ಮದ್ , ಖಾಲಿದ್ ಕೈಲ್. ಮೀಸಲು ಆಟಗಾರ: ಜತೀಂದರ್ ಸಿಂಗ್, ಸಮಯ್ ಶ್ರೀವಾಸ್ತವ, ಸುಫ್ಯಾನ್ ಮೆಹಮೂದ್, ಜೇ ಒಡೆದ್ರಾ.

ಸ್ಕಾಟ್ಲೆಂಡ್​ ತಂಡ


ರಿಚಿ ಬೆರಿಂಗ್ಟನ್ (ನಾಯಕ), ಮ್ಯಾಥ್ಯೂ ಕ್ರಾಸ್, ಬ್ರಾಡ್ ಕ್ಯೂರಿ, ಕ್ರಿಸ್ ಗ್ರೀವ್ಸ್, ಒಲಿ ಹೇರ್ಸ್, ಜ್ಯಾಕ್ ಜಾರ್ವಿಸ್, ಮೈಕೆಲ್ ಜೋನ್ಸ್, ಮೈಕೆಲ್ ಲೀಸ್ಕ್, ಬ್ರಾಂಡನ್ ಮೆಕ್‌ಮುಲ್ಲೆನ್, ಜಾರ್ಜ್ ಮನ್ಸೆ, ಸಫ್ಯಾನ್ ಷರೀಫ್, ಕ್ರಿಸ್ ಸೋಲ್, ಚಾರ್ಲಿ ಟಿಯರ್, ಮಾರ್ಕ್ ವ್ಯಾಟಲ್.

ಉಗಾಂಡ ತಂಡ

ಬ್ರಿಯಾನ್ ಮಸಾಬಾ (ನಾಯಕ), ಸೈಮನ್ ಸ್ಸೆಸಾಜಿ, ರೋಜರ್ ಮುಕಾಸಾ, ಕಾಸ್ಮಾಸ್ ಕ್ಯೆವುಟಾ, ದಿನೇಶ್ ನಕ್ರಾನಿ, ಫ್ರೆಡ್ ಅಚೆಲಮ್, ಕೆನ್ನೆತ್ ವೈಸ್ವಾ, ಅಲ್ಪೇಶ್ ರಾಮ್‌ಜಾನಿ, ಫ್ರಾಂಕ್ ನ್ಸುಬುಗಾ, ಹೆನ್ರಿ ಸೆನ್ಯೊಂಡೋ, ಬಿಲಾಲ್ ಹಸುನ್, ರಾಬಿನ್ಸನ್ ಒಬುಯಾ, ರಿಯಾಝತ್ ಅಲಿ ಮಿಯಾಜಿ, ರನಾಕ್​ ಪಟೇಲ್. ಪ್ರಯಾಣ ಮೀಸಲು: ಇನೋಸೆಂಟ್ ಮ್ವೆಬಾಜ್, ರೊನಾಲ್ಡ್ ಲುತಾಯಾ​.

ಅಮೆರಿಕ ತಂಡ

ಮೊನಾಂಕ್ ಪಟೇಲ್ (ನಾಯಕ), ಆರನ್ ಜೋನ್ಸ್ (ಉಪನಾಯಕ), ಆಂಡ್ರೀಸ್ ಗೌಸ್, ಕೋರಿ ಆಂಡರ್ಸನ್, ಅಲಿ ಖಾನ್, ಹರ್ಮೀತ್ ಸಿಂಗ್, ಜೆಸ್ಸಿ ಸಿಂಗ್, ಮಿಲಿಂದ್ ಕುಮಾರ್, ನಿಸರ್ಗ್ ಪಟೇಲ್, ನಿತೀಶ್ ಕುಮಾರ್, ನೋಷ್ಟುಶ್ ಕೆಂಜಿಗೆ, ಸೌರಭ್ ನೇತ್ರಲ್ವಾಕರ್, ಶಾಡ್ಲಿ ವ್ಯಾನ್ ಶಾಲ್ಕ್‌ವಿಕ್, ಸ್ಟೀವನ್ ಟೇಯ್ , ಶಯಾನ್ ಜಹಾಂಗೀರ್. ಮೀಸಲು ಆಟಗಾರರು: ಗಜಾನಂದ್ ಸಿಂಗ್, ಜುವಾನೊಯ್ ಡ್ರೈಸ್‌ಡೇಲ್, ಯಾಸಿರ್ ಮೊಹಮ್ಮದ್.

ವೆಸ್ಟ್​ ಇಂಡೀಸ್​ ತಂಡ


ರೋವ್‌ಮನ್ ಪೊವೆಲ್ (ನಾಯಕ), ಅಲ್ಜಾರಿ ಜೋಸೆಫ್, ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕೇಲ್ ಹೊಸೈನ್, ಶಮರ್ ಜೋಸೆಫ್, ಬ್ರಾಂಡನ್ ಕಿಂಗ್, ಗುಡಾಕೇಶ್ ಮೋಟಿ, ನಿಕೋಲಸ್ ಪೂರನ್, ಆಂಡ್ರೆ ರಸೆಲ್, ಶೆರ್ಫಾನ್ ರೊಥರ್‌ಫೋರ್ಡ್.

Continue Reading

ಕ್ರೀಡೆ

Dharamsala Stadium: ಧರ್ಮಶಾಲಾದಲ್ಲಿ ಅನಾವರಣಗೊಂಡ ದೇಶದ ಮೊದಲ ಹೈಬ್ರಿಡ್‌ ಕ್ರಿಕೆಟ್ ಪಿಚ್​ನ ವಿಶೇಷತೆ ಏನು?

Dharamsala Stadium: ಶೇ.95ರಷ್ಟು ನೈಸರ್ಗಿಕ ಟರ್ಫ್‌ ಜತೆಗೆ ಶೇ.5ರಷ್ಟು ಸಿಂಥೆಟಿಕ್‌ ಫೈಬರನ್ನು ಈ ಪಿಚ್‌ ಒಳಗೊಂಡಿರಲಿದೆ. ಹೈಬ್ರಿಡ್‌ ಪಿಚ್‌ ಸಾಮಾನ್ಯ ಪಿಚ್‌ಗಿಂತ ಹೆಚ್ಚು ಸಮಯ ಬಳಕೆಗೆ ಯೋಗ್ಯವಾಗಿರಲಿದೆ. ಚೆಂಡಿನ ಬೌನ್ಸ್‌ನಲ್ಲಿ ಯಾವುದೇ ಏರುಪೇರು ಇರುವುದಿಲ್ಲ.

VISTARANEWS.COM


on

Dharamsala Stadium
Koo

ಧರ್ಮಶಾಲಾ: ಸೋಮವಾರ ಹಿಮಾಚಲ ಪ್ರದೇಶ ಕ್ರಿಕೆಟ್‌ ಸಂಸ್ಥೆ (ಎಚ್‌ಪಿಸಿಎ)ಯ ಕ್ರೀಡಾಂಗಣದಲ್ಲಿ(Dharamsala Stadium) ಅನಾವರಣಗೊಳಿಸಲಾದ ಭಾರತದ ಮೊದಲ ಹೈಬ್ರಿಡ್‌ ಕ್ರಿಕೆಟ್‌ ಪಿಚ್‌ನ ವಿಶೇಷತೆ ಏನು? ಈ ಪಿಚ್​ನಿಂದ ಏನು ಲಾಭ? ಇದು ಹೇಗೆ ವರ್ತಿಸುತ್ತದೆ? ಹೀಗೆ ಹಲವು ಪ್ರಶ್ನೆಗಳು ಇದೀಗ ಕ್ರಿಕೆಟ್​ ಅಭಿಮಾನಿಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಉತ್ತ ಇಲ್ಲಿದೆ.

ಪಿಚ್​ ವಿಶೇಷತೆ

ನೆದರ್‌ಲೆಂಡ್ಸ್‌ ಮೂಲದ ಎಸ್‌ಐಎಸ್‌ ಸಂಸ್ಥೆಯು ಈ ಪಿಚ್‌ ಅಳವಡಿಕೆ ಮಾಡಿದ್ದು, ಶೇ.95ರಷ್ಟು ನೈಸರ್ಗಿಕ ಟರ್ಫ್‌ ಜತೆಗೆ ಶೇ.5ರಷ್ಟು ಸಿಂಥೆಟಿಕ್‌ ಫೈಬರನ್ನು ಈ ಪಿಚ್‌ ಒಳಗೊಂಡಿರಲಿದೆ. ಹೈಬ್ರಿಡ್‌ ಪಿಚ್‌ ಸಾಮಾನ್ಯ ಪಿಚ್‌ಗಿಂತ ಹೆಚ್ಚು ಸಮಯ ಬಳಕೆಗೆ ಯೋಗ್ಯವಾಗಿರಲಿದೆ. ಚೆಂಡಿನ ಬೌನ್ಸ್‌ನಲ್ಲಿ ಯಾವುದೇ ಏರುಪೇರು ಇರುವುದಿಲ್ಲ. ಪಿಚ್‌ ಮೇಲಿನ ತೇವಾಂಶವನ್ನು ಅಗತ್ಯ ಎನಿಸಿದಷ್ಟು ಮಟ್ಟಕ್ಕೆ ಕಾಯ್ದುಕೊಳ್ಳಬಹುದಾಗಿದೆ. ಇದರಿಂದಾಗಿ ಮೈದಾನ ಸಿಬ್ಬಂದಿಯ ಮೇಲಿನ ಒತ್ತಡ ಕಡಿಮೆಯಾಗಲಿದೆ. ಜತೆಗೆ ಆಟದ ಗುಣಮಟ್ಟವೂ ಹೆಚ್ಚಾಗಲಿದೆ. ಈಗಾಗಲೇ ಈ ಪಿಚ್​ಗಳು ಇಂಗ್ಲೆಂಡ್‌ನ ಐತಿಹಾಸಿಕ ಲಾರ್ಡ್ಸ್‌ ಹಾಗೂ ದಿ ಓವಲ್‌ ಕ್ರೀಡಾಂಗಣಗಳಲ್ಲಿ ಬಳಕೆಯಾಗುತ್ತಿದೆ.

ಐಪಿಎಲ್​ಗೆ ಬಳಕೆ ಇಲ್ಲ


ಈ ಪಿಚ್​ನಲ್ಲಿ ಸದ್ಯ ಐಪಿಎಲ್​ ಪಂದ್ಯಗಳು ನಡೆಯುವುದಿಲ್ಲ. ಕೇವಲ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ದೇಶೀಯ ಪಂದ್ಯಗಳು ಲಭ್ಯವಿಲ್ಲ. ಇತ್ತೀಚೆಗೆ ಟಿ20 ಹಾಗೂ ಏಕದಿನ ಪಂದ್ಯಗಳಿಗೆ ಹೈಬ್ರಿಡ್‌ ಪಿಚ್‌ಗಳ ಬಳಕೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆ (ಐಸಿಸಿ) ಒಪ್ಪಿಗೆ ನೀಡಿತ್ತು. ಹೈಬ್ರಿಡ್‌ ಪಿಚ್‌ಗಳ ಪರಿಚಯದಿಂದ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಕ್ರಾಂತಿಯಾಗುವುದಂತು ನಿಜ.

ಇದನ್ನೂ ಓದಿ IPL 2024: ಬಸ್‌ ಕಂಡಕ್ಟರ್‌ಗಳಿಗೆ ವಿಶೇಷ ಉಡುಗೊರೆ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್

ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಶನ್‌ ಸ್ಟೇಡಿಯಂ (ಎಚ್‌ಪಿಸಿಎ) ಪ್ರಕೃತಿಯ ಅತ್ಯಂತ ರಮಣೀಯ ಸ್ಟೇಡಿಯಂ ಆಗಿದ್ದು, ಹಿಮಾಲಯ ಶ್ರೇಣಿಯಲ್ಲಿ ತಲೆಯೆತ್ತಿ ನಿಂತಿದೆ. ಸಮುದ್ರ ಮಟ್ಟದಿಂದ 1,317 ಮೀ. ಎತ್ತರದಲ್ಲಿದೆ. ಅಡಿಲೇಡ್‌ ಓವಲ್‌, ನ್ಯೂಜಿಲ್ಯಾಂಡ್​ ಸ್ಟೇಡಿಯಂಗಳಂತೆ ಇದು ಕೂಡ ಚಿತ್ರಸದೃಶವಾಗಿದೆ. 23 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯ ಹೊಂದಿರುವ ಈ ಸ್ಟೇಡಿಯಂ ಪ್ರಕೃತಿಗೆ ತೆರೆದುಕೊಂಡಿದೆ. ಹೀಗಾಗಿ ಇಲ್ಲಿ ಸದಾ ಗಾಳಿ ಬೀಸುತ್ತಲೇ ಇರುತ್ತದೆ. ಈ ಕಾರಣಕ್ಕಾಗಿಯೇ ಇದು ಪೇಸ್‌ ಬೌಲಿಂಗ್‌ ಸ್ವರ್ಗವೆನಿಸಿದೆ.

Continue Reading
Advertisement
Car Accident
ಕರ್ನಾಟಕ2 seconds ago

Road Accident: ಮಂಜೇಶ್ವರದಲ್ಲಿ ಆಂಬ್ಯುಲೆನ್ಸ್-ಕಾರಿನ ನಡುವೆ ಭೀಕರ ಅಪಘಾತ; ಮೂವರ ದುರ್ಮರಣ

Viral Video
ವೈರಲ್ ನ್ಯೂಸ್7 mins ago

Viral Video: ವಿದ್ಯಾರ್ಥಿಯ ಗುಪ್ತಾಂಗಕ್ಕೆ ಇಟ್ಟಿಗೆ ಕಟ್ಟಿ ಕಿಡಿಗೇಡಿಗಳ ವಿಕೃತಿ; ವಿಡಿಯೋ ವೈರಲ್‌

karnataka rains
ಮಳೆ16 mins ago

Karnataka Rains: ಮಳೆಗೆ ಮರ ಬಿದ್ದು ಮಂಡ್ಯದಲ್ಲಿ ವ್ಯಕ್ತಿ ಸಾವು, ಬೆಂಗಳೂರಲ್ಲಿ ಟೆಕ್ಕಿ ಬೆನ್ನು ಮೂಳೆ ಮುರಿತ

India’s Jersey T20 World Cup
ಕ್ರೀಡೆ35 mins ago

India’s Jersey T20 World Cup: ಭಾರತ ತಂಡದ ಹೊಸ ಜೆರ್ಸಿ ಕಂಡು ಟ್ರೋಲ್​ ಮಾಡಿದ ನೆಟ್ಟಿಗರು

Narendra Modi
ದೇಶ41 mins ago

Narendra Modi: ಮತದಾನ ಮಾಡಿ ಬಂದ ಮೋದಿಗೆ ರಾಖಿ ಕಟ್ಟಿ, ಆಶೀರ್ವಾದ ಮಾಡಿದ ಅಜ್ಜಿ; Video ಇದೆ

Aravind Kejriwal
ದೇಶ1 hour ago

Arvind Kejriwal: ಕೇಜ್ರಿವಾಲ್‌ ನ್ಯಾಯಾಂಗ ಬಂಧನ ವಿಸ್ತರಣೆ; ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಕೋರ್ಟ್‌

Ballari Lok Sabha constituency Congress candidate e Tukaram voting in Sandur
ಬಳ್ಳಾರಿ1 hour ago

Lok Sabha Election 2024: ಸಂಡೂರಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಮತದಾನ

MS Dhoni
ಕ್ರೀಡೆ1 hour ago

MS Dhoni: ಧೋನಿ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಲು ಇದುವೇ ಪ್ರಮುಖ ಕಾರಣ

Crime News
ಕ್ರೈಂ2 hours ago

ಮಾದಕ ವಸ್ತು ನೀಡಿ ಕುಟುಂಬಸ್ಥರೊಂದಿಗೆ ಮಲಗಲು ಹಿಂಸೆ ನೀಡುವ ಪತಿ; ಮಹಿಳೆಯೊಬ್ಬರ ಕಣ್ಣೀರಿನ ಕಥೆ ಇದು

lok sabha election 2024 one family
Lok Sabha Election 20242 hours ago

Lok Sabha Election 2024: ಮತ ಹಾಕಲು ವಿದೇಶದಿಂದ ಬಂದರು! ಒಂದೇ ಕುಟುಂಬದ 69 ಮಂದಿಯ ವೋಟ್‌ ಸೆಲ್ಫಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case 2nd accused in KR Nagar victim abduction case sent to SIT custody Trouble for Revanna
ಕ್ರೈಂ21 hours ago

Prajwal Revanna Case: ಕೆ.ಆರ್.‌ ನಗರ ಸಂತ್ರಸ್ತೆ ಕಿಡ್ನ್ಯಾಪ್‌ ಕೇಸ್‌ನ 2ನೇ ಆರೋಪಿ SIT ಕಸ್ಟಡಿಗೆ; ರೇವಣ್ಣಗೆ ಸಂಕಷ್ಟ?

karnataka weather forecast
ಮಳೆ22 hours ago

Karnataka Weather : ಬೆಂಗಳೂರು ಸೇರಿ ಹಲವೆಡೆ ಮತ್ತೆ ಅಬ್ಬರಿಸುತ್ತಿರುವ ಮಳೆ; ಇನ್ನೊಂದು ವಾರ ಅಲರ್ಟ್‌

Prajwal Revanna Case DK Shivakumar behind Prajwal video leak Devaraje Gowda demands CBI probe
ಕ್ರೈಂ22 hours ago

Prajwal Revanna Case: ಪ್ರಜ್ವಲ್‌ ವಿಡಿಯೊ ಲೀಕ್‌ ಹಿಂದೆ ಇರೋದು ಡಿಕೆಶಿ; ದಾಖಲೆ ತೋರಿಸಿ, ಸಿಬಿಐಗೆ ಕೇಸ್‌ ವಹಿಸಲು ದೇವರಾಜೇಗೌಡ ಆಗ್ರಹ

Dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರಿಗೆ ಇಂದು ಹುಡುಕಿಕೊಂಡು ಬರಲಿವೆ ಹೊಸ ಅವಕಾಶಗಳು

Prajwal Revanna Case HD Revanna sent to judicial custody Shift to Parappana Agrahara
ಕ್ರೈಂ2 days ago

Prajwal Revanna Case: ಎಸ್‌ಐಟಿ ಕಸ್ಟಡಿಗೆ ಮಾಜಿ ಸಚಿವ ಎಚ್‌.ಡಿ. ರೇವಣ್ಣ; ಮತ್ತೆ ತೀವ್ರ ವಿಚಾರಣೆ

Prajwal Revanna Case No evidence against me its a conspiracy says HD Revanna
ಕರ್ನಾಟಕ2 days ago

Prajwal Revanna Case: ನನ್ನ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ, ಇದೊಂದು ಷಡ್ಯಂತ್ರ: ಎಚ್‌.ಡಿ. ರೇವಣ್ಣ ಫಸ್ಟ್‌ ರಿಯಾಕ್ಷನ್‌!

Narendra Modi
ದೇಶ2 days ago

Narendra Modi: ರಾಮನಗರಿ ಅಯೋಧ್ಯೆಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ3 days ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ4 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಟ್ರೆಂಡಿಂಗ್‌