ಶಿವಮೊಗ್ಗ: ಸಾವರ್ಕರ್ ಗದ್ದಲ ಇತ್ಯಾದಿಗಳಿಂದ ಆತಂಕದ ಸ್ವರೂಪ ಪಡೆದುಕೊಂಡಿದ್ದ ಶಿವಮೊಗ್ಗದ ಗಣೇಶೋತ್ಸವದ ಗಣೇಶ ವಿಸರ್ಜನೆ 18 ಗಂಟೆಗಳ ಕಾಲ ನಡೆದ ರಾಜಬೀದಿ ಉತ್ಸವದ ಬಳಿಕ ಶಾಂತಿಯುತವಾಗಿ ನೆರವೇರಿದೆ.
ಹಿಂದು ಮಹಾಸಭಾ ಕೂರಿಸಿದ ಗಣೇಶ ಮೂರ್ತಿಯ ವಿಸರ್ಜನೆಗೂ ಮುನ್ನ ಭರ್ಜರಿ 18 ಗಂಟೆಗಳ ಕಾಲ ರಾಜಬೀದಿ ಉತ್ಸವ ನಡೆಯಿತು. ನಿನ್ನೆ ಬೆಳಗ್ಗೆ 10ಕ್ಕೆ ಆರಂಭವಾಗಿದ್ದ ಮೆರವಣಿಗೆ ಇಂದು ನಸುಕಿನ ಜಾವ 4ಕ್ಕೆ ಕೊನೆಗೊಂಡು ವಿಸರ್ಜನೆ ನೆರವೇರಿತು. ಲಕ್ಷಾಂತರ ಜನರು ಮೆರವಣಿಗೆಯಲ್ಲಿ ಭಾಗಿಗಳಾದರು. ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರು, ಮಹಿಳೆಯರು ಪಾಲ್ಗೊಂಡರು.
ತುಂಗಾ ನದಿ ಹರಿಯುವ ಕೋಟೆ ಪರಿಸರದ ಭೀಮನ ಮಡುವಿನಲ್ಲಿ ಗಣೇಶ ವಿಸರ್ಜನೆ ಮಾಡಲಾಯಿತು. ಸಾವಿರಾರು ಪೊಲೀಸ್ ಬಿಗಿ ಬಂದೋಬಸ್ತ್ ಶಿವಮೊಗ್ಗ ನಗರದಾದ್ಯಂತ ಮಾಡಲಾಗಿತ್ತು. ಐಜಿಪಿ ಕೆ.ತ್ಯಾಗರಾಜನ್ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಎಸ್ಪಿ ಬಿ.ಎಂ ಲಕ್ಷ್ಮಿಪ್ರಸಾದ ನೇತೃತ್ವದಲ್ಲಿ ಬಂದೋಬಸ್ತ್ ನಡೆದಿದ್ದು, ಡಿಸಿ ಡಾ.ಆರ್ ಸೆಲ್ವಮಣಿ ಅವರು ಮೆರವಣಿಗೆಯುದ್ದಕ್ಕೂ ಪಾಲ್ಗೊಂಡು ಅವಲೋಕಿಸಿದರು.
ಈ ನಡುವೆ ಮೆರವಣೀಗೆಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಪಾಲ್ಗೊಂಡು ಟಗರು ಬಂತು ಟಗರು ಹಾಡಿಗೆ ಸ್ಟೆಪ್ ಹಾಕಿದರು. ನಗರದ ಗೋಪಿ ವೃತ್ತದಲ್ಲಿ ಅಯೋಜಿಸಿದ್ದ ಡಿಜೆಯಲ್ಲಿ ಸಂಸದರು ಹೆಜ್ಜೆ ಹಾಕಿದ್ದು, ಬಿವೈಆರ್ ಸ್ಟೆಪ್‌ಗೆ ಯುವಕರು ಜೊತೆಗೂಡಿದರು. ಬಿಜೆಪಿ ಸ್ಥಳೀಯ ನಾಯಕರು ಸ್ಥಳದಲ್ಲಿದ್ದರು.
ಇದನ್ನೂ ಓದಿ | Ganesh Chaturthi | ಗಣೇಶನ ವಿಸರ್ಜನೆ ವೇಳೆ ಸ್ಟೆಪ್ಸ್ ಹಾಕಿದ ಬಿವೈಆರ್ : ವಿಡಿಯೊ ವೈರಲ್