Site icon Vistara News

Shimogga tense | ಹಿಂಸಾಚಾರ ಇತರ ಕಡೆಗಳಿಗೆ ಹರಡುವ ಭಯ, ಭದ್ರಾವತಿಯಲ್ಲೂ ಸೆಕ್ಷನ್‌ 144 ಜಾರಿ

Independence Day Shivamogga

ಶಿವಮೊಗ್ಗ: ಶಿವಮೊಗ್ಗದ ಅಮೀರ್‌ ಅಹಮದ್‌ ವೃತ್ತದಲ್ಲಿ ಹುಟ್ಟಿಕೊಂಡ ಫೋಟೊ ವಿವಾದ ಮತ್ತು ಬಳಿಕ ನಡೆದ ಹಿಂಸಾಚಾರದ ಬಿಸಿ ಶಿವಮೊಗ್ಗ ಜಿಲ್ಲೆಯ ಬೇರೆ ಬೇರೆ ಭಾಗಗಳಿಗೆ ಹರಡುತ್ತಿರುವಂತೆ ಕಾಣುತ್ತಿದ್ದು, ಈಗ ಭದ್ರಾವತಿ ತಾಲೂಕಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲಿ ಸೆಕ್ಷನ್‌ ೧೪೪ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಸೆಲ್ವಮಣಿ ಆದೇಶಿಸಿದ್ದಾರೆ.

ಭದ್ರಾವತಿಯಲ್ಲಿ ಇದುವರೆಗೆ ಯಾವುದೇ ಘಟನೆಗಳು ನಡೆದಿಲ್ಲ. ಅದರೆ, ಮುಂಜಾಗೃತಾ ಕ್ರಮವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಅಲ್ಲಿ ಬಿಗಿ ಭದ್ರತಾ ವ್ಯವಸ್ಥೆಯನ್ನೂ ಸಜ್ಜುಗೊಳಿಸಲಾಗಿದೆ.

ಎರಡು ಇರಿತ ಪ್ರಕರಣ
ಅಮೀರ್‌ ಅಹಮದ್‌ ವೃತ್ತದಲ್ಲಿ ನಡೆದ ಸಾವರ್ಕರ್‌-ಟಿಪ್ಪು ಫ್ಲೆಕ್ಸ್‌ ವಿವಾದದ ಬೆನ್ನಿಗೇ ಉಪ್ಪಾರಕೇರಿಯಲ್ಲಿ ಪ್ರೇಮ್‌ ಸಿಂಗ್‌ (೨೨) ಎಂಬಾತನ ಮನೆ ಎದುರು ನಿಂತಿದ್ದಾಗ ದುಷ್ಕರ್ಮಿಗಳು ಚೂರಿಯಿಂದ ಇರಿದರೆ ಅದರ ಬೆನ್ನಿಗೇ ಪ್ರವೀಣ್‌ ಎಂಬ ಯುವಕನ ಮೇಲೆ ದಾಳಿಯಾಗಿದೆ. ಆತ ನಗರದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ತನ್ನ ಅಂಗಡಿಗೆ ಬೀಗ ಹಾಕಿ ಮನೆಗೆ ಹೊರಟಿದ್ದ ವೇಳೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಆತನ ಮೇಲೂ ಚೂರಿಯಿಂದ ಇರಿಯಲಾಗಿದೆ ಎಂಬ ಮಾಹಿತಿ ಇದೆ.

ಅಮೀರ್‌ ಅಹಮದ್‌ ವೃತ್ತದಲ್ಲಿದ್ದ ಹಿಂದೂ ಯುವಕರು ಸಾವರ್ಕರ್‌ ಅವರ ಪ್ಲೆಕ್ಸ್‌ನ್ನು ಹಾಕಿದ್ದರು. ಇದು ಅಲ್ಲಿನ ಸ್ಥಳೀಯ ಯುವಕರನ್ನು ಕೆರಳಿಸಿದ್ದು, ಅವರು ಟಿಪ್ಪು ಫ್ಲೆಕ್ಸ್‌ ಹಾಕಲು ಮುಂದಾಗಿದ್ದರು. ಇದರಿಂದ ಎರಡೂ ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ. ಅದರನ್ನು ತಡೆಯಲು ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಾರೆ. ಈಗ ಸ್ಥಳದಲ್ಲಿ ಸೆಕ್ಷನ್‌ ೧೪೪ ಹಾಕಲಾಗಿದೆ. ಆದರೆ, ಜನ ಸಂದಣಿ ಇನ್ನೂ ಕರಗುತ್ತಿಲ್ಲ. ಎರಡೂ ಕೋಮಿನವರಿಗೆ ಫ್ಲೆಕ್ಸ್‌ ಹಾಕಲು ಅವಕಾಶ ನೀಡಲಾಗುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿವಾದದ ಬಿಸಿ ಈಗ ಅಹಮದ್‌ ವೃತ್ತದಿಂದ ಬೇರೆ ಕಡೆಗೆ ಹರಡುತ್ತಿರುವಂತೆ ಕಾಣುತ್ತಿದೆ.

ಇದನ್ನೂ ಓದಿ Shimogga Tense | ಪ್ರೇಮ್‌ ಸಿಂಗ್‌ ಬೆನ್ನಿಗೇ ಮತ್ತೊಬ್ಬ ಯುವಕನ ಮೇಲೆ ಅಟ್ಯಾಕ್‌

Exit mobile version