ಮಂಗಳೂರು: ಆಳ ಸಮುದ್ರದಲ್ಲಿ ಮೀನುಗಾರಿಕಾ ಹಡಗು (Ship Sinking) ಸಂಪೂರ್ಣ ಮುಳುಗಿದೆ. ಮಂಗಳೂರಿನ ಅರಬ್ಬೀ ಸಮುದ್ರದಲ್ಲಿ ಈ ಘಟನೆ ನಡೆದಿದೆ. ಮಂಗಳೂರಿನ ಬಂದರಿನಿಂದ ಜೈ ಶ್ರೀರಾಮ್ ಹೆಸರಿನ ಆ ಬೋಟ್ನಲ್ಲಿ ಹತ್ತು ಮಂದಿ ಮೀನುಗಾರಿಕೆಗೆ ಹೊರಟಿದ್ದರು. ಈ ವೇಳೆ ಸಮುದ್ರದ ಅಲೆಗಳು ಹೆಚ್ಚಾದ ಪರಿಣಾಮ ನೋಡನೋಡುತ್ತಲೇ ಬೋಟ್ ಸಂಪೂರ್ಣ ಮುಳುಗಿ ಹೋಯಿತು.
ಬೋಟ್ನಲ್ಲಿದ್ದ ಹತ್ತು ಮೀನುಗಾರರು ಈಜಿ ಮತ್ತೊಂದು ಬೋಟ್ ಹತ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕರಾವಳಿ ತೀರದಲ್ಲಿ ಬಿರುಗಾಳಿಯ ವೇಗವು ಪ್ರತಿ ಗಂಟೆಗೆ 45-55 ಕಿ.ಮೀ ತಲುಪುವ ಸಾಧ್ಯತೆಯಿದ್ದು, ಮೀನುಗಾರರು ಈ ಅವಧಿಯಲ್ಲಿ ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿತ್ತು. ಆದರೆ ಈಗಾಗಲೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ಬಂದರಿಗೆ ವಾಪಸ್ ಆಗುವಾಗ ಈ ದುರಂತ ನಡೆದು ಹೋಗಿದೆ.
ಇದನ್ನೂ ಓದಿ | Heavy Rain | ಮಳೆಯ ರಭಸಕ್ಕೆ ಸರ್ಕಾರಿ ಶಾಲೆಯ ಚಾವಣಿ ಕುಸಿತ, ಪಂಚಾಯಿತಿ ಕಟ್ಟದ ನೆಲಸಮ