Site icon Vistara News

Shiralakoppa Bandh: ಹಿಂದು ಕಾರ್ಯಕರ್ತರ ಮೇಲೆ ದೌರ್ಜನ್ಯ ಖಂಡಿಸಿ ಶಿರಾಳಕೊಪ್ಪ ಬಂದ್‌

Shiralakoppa Bandh

#image_title

ಶಿವಮೊಗ್ಗ: ಹಿಂದು ಜಾಗರಣ ವೇದಿಕೆ ಕರೆ ನೀಡಿರುವ ಶಿರಾಳಕೊಪ್ಪ ಬಂದ್‌ಗೆ (Shiralakoppa Bandh) ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಹಿಂದು ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಶಿರಾಳಕೊಪ್ಪದಲ್ಲಿ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಸ್ವಯಂ ಪ್ರೇರಿತ ಬಂದ್‌ಗೆ ಸೋಮವಾರ ಕರೆ ನೀಡಲಾಗಿದೆ.

ವಾಹನಗಳಿಂದ ಗಿಜಿಗುಡುತ್ತಿದ್ದ ರಸ್ತೆಗಳೆಲ್ಲವೂ ಖಾಲಿ ಖಾಲಿಯಾಗಿದ್ದು, ಪಟ್ಟಣದಲ್ಲಿ ಸಂಪೂರ್ಣ ಅಂಗಡಿ ಮುಂಗಟ್ಟು ಬಂದ್‌ ಆಗಿವೆ. ಆಟೋ, ಬಸ್‌ ಸೇರಿದಂತೆ ವಾಹನಗಳ ಓಡಾಟವೂ ಕ್ಷಿಣಿಸಿತ್ತು. ತುರ್ತು ಸೇವೆಗೆ ಒಳಪಡುವ ಮೆಡಿಕಲ್‌, ಆಸ್ಪತ್ರೆ ಹೊರತುಪಡಿಸಿ ಉಳಿದಂತೆ ಎಲ್ಲ ಅಂಗಡಿಗಳನ್ನು ಮುಚ್ಚಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿದೆ.

ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಹಿಂದು ಯುವಕರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದನ್ನೂ ವಿರೋಧಿಸಿ ತಪ್ಪಿತಸ್ಥರ ವಿರುದ್ಧ ದೂರು ಕೊಟ್ಟರೆ, ಹಿಂದು ಯುವಕರ ಮೇಲೆ ಹಲ್ಲೆ ನಡೆಯುವಂತಹ ಪ್ರಯತ್ನಗಳು ನಡೆದಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: Giant Wheel Accident: ಜೈಂಟ್ ವ್ಹೀಲ್‌ಗೆ ಸಿಕ್ಕಿ ಪೂರಾ ಕಿತ್ತು ಬಂದ ಬಾಲಕಿ ತಲೆಕೂದಲು: ಶ್ರೀರಂಗಪಟ್ಟಣದಲ್ಲಿ ಅವಘಡ

#image_title

ಸಾಮಾಜಿಕ ಸಂಘಟನೆಯ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್‌ ದಾಖಲಿಸಿ ದೌರ್ಜನ್ಯ ಎಸಗಿದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪೊಲೀಸರ ಪಕ್ಷಪಾತ ಧೋರಣೆ, ಹಿಂದುಗಳಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಶಿರಾಳಕೊಪ್ಪ ಬಂದ್‌ಗೆ ಹಿಂದೂ ಜಾಗರಣ ವೇದಿಕೆ ಕರೆ ನೀಡಿತ್ತು.

Exit mobile version