Site icon Vistara News

Lokayukta Raid: 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ; ಪಿಎಸ್‌ಐ ಸೇರಿ ಮೂವರು ಲೋಕಾಯುಕ್ತ ಬಲೆಗೆ

PSI trapped by Lokayukta

#image_title

ಬೆಂಗಳೂರು: ಪ್ರಕರಣವೊಂದರಲ್ಲಿ ಬೇಲ್ ನೀಡಲು 10 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಮಹಿಳಾ ಪಿಎಸ್ಐ ಸೇರಿ ಮೂವರು ಪೊಲೀಸರು ಲೋಕಾಯುಕ್ತ ಅಧಿಕಾರಿಗಳಿಗೆ (Lokayukta Raid) ಸಿಕ್ಕಿಬಿದ್ದಿದ್ದಾರೆ. ಶಿವಾಜಿನಗರ ಮಹಿಳಾ ಪೊಲೀಸ್ ಠಾಣೆ ಪಿಎಸ್ಐ ಸವಿತಾ ಕನಮಡಿ ಸೇರಿ ಮೂವರನ್ನು ಬಂಧಿಸಲಾಗಿದೆ.

ಆರೋಪಿಯೊಬ್ಬರ ನಿರೀಕ್ಷಣ ಜಾಮೀನು ಪ್ರಕ್ರಿಯೆಗೆ ಆಕ್ಷೇಪ ಸಲ್ಲಿಸದಿರಲು ಪಿಎಸ್‌ಐ ಸವಿತಾ ಕನಮಡಿ 20 ಸಾವಿರ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ, ದೂರುದಾರರು ಅಷ್ಟೊಂದು ಹಣ ಕೊಡಲು ಸಾಧ್ಯವಿಲ್ಲ ಎಂದಿದ್ದರು. ಕೊನೆಗೆ 10 ಸಾವಿರ ರೂಪಾಯಿ ನೀಡುವಂತೆ ಪಿಎಸ್‌ಐ ಹೇಳಿದ್ದರು. ಈ ಬಗ್ಗೆ ಲೋಕಾಯುಕ್ತಕ್ಕೆ ಅನಂತ್ ಕುಮಾರ್ ಎಂಬುವವರು ದೂರು ನೀಡಿದ್ದರು.

ಈ ಮೊದಲು ನಡೆದ ಮಾತುಕತೆ ಪ್ರಕಾರ 10 ಸಾವಿರ ರೂ.ಗಳನ್ನು ಪಿಎಸ್ಐ ಸವಿತಾ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಪಿಎಸ್‌ಐಗೆ ಸಹಕರಿಸಿದ ಮಹಿಳಾ ಪೇದೆ ಶೋಭಾ ತಳವಾರ, ರೈಟರ್ ಸೋಮಶೇಖರ್‌ ಎಂಬುವವರನ್ನೂ ಬಂಧಿಸಲಾಗಿದೆ. ಇನ್ನು ಪ್ರಕರಣ ಸಂಬಂಧ ಕ್ರೈಂ ಹೆಡ್ ಕಾನ್‌ಸ್ಟೆಬಲ್‌ ಗಿರೀಶ್ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಲೋಕಾಯುಕ್ತ ಡಿವೈಎಸ್‌ಪಿ ಪ್ರಮೋದ್ ಹಾಗೂ ಇನ್‌ಪೆಕ್ಟರ್ ಶಂಕರಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಈ ವೇಳೆ ಐದು ಸಾವಿರ ಹಣ ವಶಪಡಿಸಿಕೊಳ್ಳಲಾಗಿದೆ.

ಕೆಲಸ ಮಾಡುವ ವೇಳೆ ಹೃದಯಾಘಾತವಾಗಿ ಕಾರ್ಮಿಕ ಸಾವು

ರಾಯಚೂರು: ನರೇಗಾ ಕೆಲಸ ಮಾಡುವ ವೇಳೆ ಹೃದಯಾಘಾತವಾಗಿ ಕಾರ್ಮಿಕರೊಬ್ಬರು ಸ್ಥಳದಲ್ಲಿ ಮೃತಪಟ್ಟಿರುವ ಘಟನೆ ದೇವದುರ್ಗ ತಾಲೂಕಿನ ಮುಂಡರಗಿ ಗ್ರಾಮದಲ್ಲಿ ನಡೆದಿದೆ. ಸಿದ್ದಣ್ಣ (40) ಮೃತ ಕಾರ್ಮಿಕ. ನರೇಗಾ ಯೋಜನೆಯಲ್ಲಿ ಕರಿಗುಡ್ಡ ಕೆರೆಯ ಹೂಳು ಎತ್ತುವ ಕೆಲಸ ಮಾಡುತ್ತಿದ್ದಾಗ ಸಿದ್ದಣ್ಣ ಏಕಾಏಕಿ ಕುಸಿದು ಬಿದ್ದಿದ್ದಾರೆ. ಹೀಗಾಗಿ ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ | Shivanand math: ಗದಗದ ಶಿವಾನಂದ ಬ್ರಹನ್ಮಠದ ಹಿರಿಯ-ಕಿರಿಯ ಶ್ರೀಗಳ ಬೆಂಬಲಿಗರ ನಡುವೆ ದೊಣ್ಣೆಕಾಳಗ

ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ; ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ಬೆಂಕಿಗಾಹುತಿ

ಬಾಗಲಕೋಟೆ: ನಗರದ ಮಾರುಕಟ್ಟೆ ಪ್ರದೇಶದ ಕೃಷ್ಣಾ ಟ್ರೇಡಿಂಗ್ ಕಂಪನಿ ಎಂಬ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಔಷಧಗಳು ಬೆಂಕಿಗಾಹುತಿಯಾಗಿವೆ. ವಿಠ್ಠಲ ಸಪಾರಿ ಎಂಬುವವರ ಅಂಗಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಅಗ್ನಿ ಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

Exit mobile version