ಶಿವಮೊಗ್ಗ: ಇಲ್ಲಿನ ತೀರ್ಥಹಳ್ಳಿಯ ಚಕ್ರತೀರ್ಥದಲ್ಲಿ ಕಿಡಿಗೇಡಿಗಳು ಹಸುವಿನ ಕತ್ತನ್ನು ಕಡಿದು ಬಳಿಕ ರುಂಡವನ್ನು ತುಂಗಾ ನದಿಗೆ ಎಸೆದು ಪರಾರಿ ಆಗಿರುವ (Shivamogaa News) ಘಟನೆ ನಡೆದಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಸ್ವಕ್ಷೇತ್ರದಲ್ಲಿ ವಿಕೃತಿ ಮೆರೆದಿದ್ದು, ಸ್ಥಳೀಯರು ದುಷ್ಕೃತ್ಯಕ್ಕೆ ಕಿಡಿಕಾರಿದ್ದಾರೆ.
ಚಕ್ರತೀರ್ಥದಲ್ಲಿ ಶಂಖ, ಚಕ್ರ, ಗದಾ, ಪದ್ಮ ಎಂಬ ಪವಿತ್ರ ತೀರ್ಥಗಳ ಸಂಗಮ ಸ್ಥಳವಾಗಿದೆ. ಸ್ಥಳೀಯರು ಸ್ನಾನ ಮಾಡಲು ಹೊಳೆಗೆ ಇಳಿದಾಗ ವಿಷಯ ಬೆಳಕಿಗೆ ಬಂದಿದೆ. ದನದ ರುಂಡವನ್ನು ಬಿಟ್ಟು ಮಾಂಸ ತೆಗೆದುಕೊಂಡು ಹೋಗಲಾಗಿದೆ. ಇದು ತೀರ್ಥಹಳ್ಳಿ ಪೊಲೀಸರ ವೈಫಲ್ಯ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: Bengaluru News: ಯುವಕರು ಕೈ ಚಾಚದೇ ಕೊಡುವ ಕೈಯಾಗಲಿ; ಯುವಶಕ್ತಿ ಯೋಜನೆಯಲ್ಲಿ ಸಿಎಂ ಬೊಮ್ಮಾಯಿ
ಹಿಂದೆಯೂ ನಡೆದಿತ್ತು 7 ಹಸುಗಳ ಹತ್ಯೆ
ಈ ಹಿಂದೆಯೂ ಹಸುಗಳ ಹತ್ಯೆ ನಡೆದಿತ್ತು. ಶಿವಮೊಗ್ಗದ ಸೂಳೆಬೈಲಿನಲ್ಲಿ ಅಕ್ರಮ ಕಸಾಯಿ ಖಾನೆ ಶೆಡ್ ನಿರ್ಮಿಸಿಕೊಂಡು ಮಾಂಸಕ್ಕಾಗಿ ಹಸುಗಳ ಹತ್ಯೆ ಮಾಡಲಾಗಿತ್ತು. ಪೊಲೀಸರು ದಾಳಿಗೂ ಮುನ್ನ 7 ಹಸುಗಳ ಮಾರಣಹೋಮ ನಡೆದಿತ್ತು. ಈ ವಿಚಾರ ತಿಳಿದ ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳು ಅಕ್ರಮ ಶೆಡ್ ಅನ್ನು ನೆಲಸಮ ಮಾಡಿದ್ದರು.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ